ಪೋಪ್ ಫ್ರಾನ್ಸಿಸ್ ಅವರ ಶಿಲುಬೆ ಹಾದಿ ಚಿಂತನೆಯ ಸಂದೇಶಗಳು
ವರದಿ: ವ್ಯಾಟಿಕನ್ ನ್ಯೂಸ್
ಶುಭ ಶುಕ್ರವಾರ ರೋಮ್ ನಗರದ ಕೊಸೋಸಿಯಂನಲ್ಲಿ ನಡೆಯವ ಶಿಲುಬೆ ಹಾದಿಗೆ ಪೋಪ್ ಫ್ರಾನ್ಸಿಸ್ ಅವರು ಚಿಂತನೆಯನ್ನು ಬರೆದಿದ್ದಾರೆ. ಪೋಪ್ ಫ್ರಾನ್ಸಿಸ್ ಅವರ ಬದಲಿಗೆ ಪೋಪ್ ಅವರ ವಿಕಾರ್ ಜನರಲ್ ಆಗಿರುವ ಕಾರ್ಡಿನಲ್ ಬಾಲ್ಡೋ ರೈನಾ ಅವರು ಈ ಶಿಲುಬೆ ಹಾದಿಯನ್ನು ಮುನ್ನಡೆಸಿದ್ದಾರೆ. ಶಿಲುಬೆಹಾದಿಯ ಚಿಂತನೆಗಳಲ್ಲಿ ಪೋಪ್ ಫ್ರಾನ್ಸಿಸ್ ಅವರು ಈ ಜಗತ್ತಿನ ವಿವಿಧ ಆಸಕ್ತಿಗಳನ್ನು ತೊರೆದು, ರಕ್ಷಕರಾದ ಪ್ರಭು ಯೇಸುಕ್ರಿಸ್ತರಲ್ಲಿಗೆ ನಾವು ಮರಳಬೇಕು ಎಂಬ ಸಂದೇಶವನ್ನು ನೀಡಿದ್ದಾರೆ.
ದೇವರ ಆರ್ಥಿಕತೆ
ಪೋಪ್ ಫ್ರಾನ್ಸಿಸ್ ನಮ್ಮ ಸ್ವಂತ ಯೋಜನೆಗಳಿಂದ ಮುಕ್ತರಾಗಲು ಮತ್ತು "ದೇವರ ಆರ್ಥಿಕತೆ"ಯನ್ನು ಅರ್ಥಮಾಡಿಕೊಳ್ಳಲು ನಮ್ಮನ್ನು ಆಹ್ವಾನಿಸುತ್ತಾರೆ, ಅದು "ಕೊಲ್ಲುವುದಿಲ್ಲ, ತ್ಯಜಿಸುವುದಿಲ್ಲ ಅಥವಾ ಪುಡಿ ಮಾಡುವುದಿಲ್ಲ. ಅದು ವಿನಮ್ರವಾಗಿದೆ, ಭೂಮಿಗೆ ನಂಬಿಕಸ್ಥವಾಗಿದೆ" ಎಂದು ಪೋಪ್ ಫ್ರಾನ್ಸಿಸ್ ಅವರು ದೇವರ ಆರ್ಥಿಕತೆ ಅಥವಾ ದೇವರ ಯೋಜನೆಗಳಂತೆ ಬದುಕಲು ಇರುವ ಅವಕಾಶಗಳ್ನು ಹಾಗೂ ಆ ನಿಟ್ಟಿನಲ್ಲಿ ನಮಗೆ ನೀಡಲಾಗಿರುವ ಕರೆಯ ಕುರಿತು ಮಾತನಾಡಿದ್ದಾರೆ.
ಶಿಲುಬೆ ಹಾದಿಯ ವಿವಿಧ ಸ್ಥಳಗಳ ಚಿಂತನೆಗಳಲ್ಲಿ ಆಯಾ ಸ್ಥಳಗಳು ನೀಡುವ ಪ್ರಮುಖ ಸಂದೇಶವನ್ನು ಪೋಪ್ ಫ್ರಾನ್ಸಿಸ್ ಅವರು ತಮ್ಮ ಸಂದೇಶದಲ್ಲಿ ಹೇಳಿದ್ದಾರೆ. ಉದಾಹರಣೆಗೆ, ಸಿರೇನ್ಯದ ಸಿಮೋನನು ಯೇಸುವಿನ ಶಿಲುಬೆಯನ್ನು ಹೊತ್ತುಕೊಂಡಾಗ ನಾವು ಸಹ ಎಂದಿಗೂ ಓಡಿ ಹೋಗಬಾರದು ಆದರೆ ಮತ್ತೊಬ್ಬರ ಕಷ್ಟಕ್ಕೆ ನೆರವಾಗಬೇಕು ಎಂಬ ಸಂದೇಶವನ್ನು ನೀಡಿದರು.
ಶಿಲುಬೆಹಾದಿ ಎಂಬುದು ನಿರಂತರ ಸಾಗುವ ಒಂದು ಪ್ರಯಾಣವಾಗಿದೆ ಎಂದು ಹೇಳುವ ಪೋಪ್ ಫ್ರಾನ್ಸಿಸ್ ಅವರು ನಾವೂ ಸಹ ಆ ಪ್ರಯಾಣದಲ್ಲಿ ವಿವಿಧ ಸ್ಥಳಗಳಲ್ಲಿ ಯೇಸುವಿನ ಆದರ್ಶಗಳು ಹಾಗೂ ಕೃಪೆಯನ್ನು ನೆಚ್ಚಿಕೊಂಡು ಪ್ರಯಾಣಿಸಬೇಕು ಎಂದು ಹೇಳಿದ್ದಾರೆ. ಇದಲ್ಲದೆ, ಯೇಸುವನ್ನು ಸಂತೈಸಲು ಬಂದ ಮಹಿಳೆಯರು, ಆತನನ್ನು ಎದುರುಗೊಳ್ಳುವ ತಾಯಿ, ಮುಖವನ್ನು ಒರೆಸುವ ವೆರೋನಿಕ ಸೇರಿದಂತೆ ವಿವಿಧ ವ್ಯಕ್ತಿಗಳು ಹೇಗೆ ಯೇಸುವಿನ ಹಾದಿಯಲ್ಲಿ ಇದ್ದರು ಎಂಬ ಕುರಿತೂ ಸಹ ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದಾರೆ. ಅಂತಿಮವಾಗಿ, ಶಿಲುಬೆಹಾದಿಯ ಚಿಂತನೆಗಳಲ್ಲಿ ಪೋಪ್ ಫ್ರಾನ್ಸಿಸ್ ಅವರು ಈ ಜಗತ್ತಿನ ವಿವಿಧ ಆಸಕ್ತಿಗಳನ್ನು ತೊರೆದು, ರಕ್ಷಕರಾದ ಪ್ರಭು ಯೇಸುಕ್ರಿಸ್ತರಲ್ಲಿಗೆ ನಾವು ಮರಳಬೇಕು ಎಂಬ ಸಂದೇಶವನ್ನು ನೀಡಿದ್ದಾರೆ.