ವಿಶ್ವಗುರು ಫ್ರಾನ್ಸಿಸ್ ರವರ ಅಂತ್ಯಕ್ರಿಯೆಯ ಜಾಗತಿಕ ವರದಿ
ವ್ಯಾಟಿಕನ್ ಸುದ್ದಿ
ವಿಶ್ವಗುರು ಫ್ರಾನ್ಸಿಸ್ ರವರ ಅಂತಿಮ ವಿದಾಯದ ಅಂತ್ಯಕ್ರಿಯೆಯ ಪವಿತ್ರ ದಿವ್ಯಬಲಿಪೂಜೆಯು ಇಡೀ ಪ್ರಪಂಚದ ಗಮನವನ್ನು ಸೆಳೆಯುತ್ತದೆ, ಇಪ್ಪತ್ತು ವರ್ಷಗಳ ಹಿಂದೆ ಏಪ್ರಿಲ್ 8, 2005 ರಂದು ವಿಶ್ವಗುರು ದ್ವಿತೀಯ ಜಾನ್ ಪಾಲ್ ರವರ ಅಂತ್ಯಕ್ರಿಯೆಯ ಪವಿತ್ರ ದಿವ್ಯಬಲಿಪೂಜೆಯೊಂದಿಗೆ ಇದೇ ರೀತಿಯ ಸಾಂಭ್ರಮಿಕ ಕ್ಷಣದ ನೆನಪುಗಳನ್ನು ನೆನಪಿಸುತ್ತದೆ.
ಅದೇ ಸಮಯದಲ್ಲಿ, ಈ ಅಂತ್ಯಕ್ರಿಯೆಯು ಇಂದಿನ ಮಾಧ್ಯಮಗಳಿಗೆ ಒಂದು ವಿಶಿಷ್ಟ ಸಂದರ್ಭವನ್ನು ಗುರುತಿಸುತ್ತದೆ, ಏಕೆಂದರೆ ಇದು ಮೊದಲ ಬಾರಿಗೆ ವಿಶ್ವಗುರು ಫ್ರಾನ್ಸಿಸ್ ರವರ ಪಾರ್ಥಿವ ಶರೀರವನ್ನು ವ್ಯಾಟಿಕನ್‌ನಿಂದ ಬೇರೆ ಸ್ಥಳಕ್ಕೆ ಸಮಾಧಿಗಾಗಿ ವರ್ಗಾಯಿಸುವುದನ್ನು ಜಾಗತಿಕವಾಗಿ ನೇರ ಪ್ರಸಾರ ಮಾಡಲಾಗುತ್ತಿದೆ.
ಏಪ್ರಿಲ್ 26, ಶನಿವಾರ, ರೋಮ್ ಸಮಯ ಬೆಳಿಗ್ಗೆ 10:00 ಗಂಟೆಗೆ ಎಲ್ಲವೂ ಪ್ರಾರಂಭವಾಗಲಿದ್ದು, ವ್ಯಾಟಿಕನ್ ರೇಡಿಯೋ - ವ್ಯಾಟಿಕನ್ ಸುದ್ದಿ ಪೂರ್ಣ ರೆಕ್ವಿಯಮ್ ದಿವ್ಯಬಲಿಪೂಜೆಯನ್ನು ನೇರ ಪ್ರಸಾರ ಮಾಡುತ್ತದೆ, ನಂತರ ವಿಶ್ವಗುರು ಫ್ರಾನ್ಸಿಸ್ ರವರ ಶವಪೆಟ್ಟಿಗೆಯೊಂದಿಗೆ ಸಂತ ಪೇತ್ರರ ಚೌಕದಿಂದ ಸೇಂಟ್ ಮೇರಿ ಮೇಜರ್ ಮಹಾದೇವಾಲಯಕ್ಕೆ ಮೆರವಣಿಗೆಯಲ್ಲಿ ತೆಗೆದುಕೊಂಡೊಯ್ಯಲಾಗುತ್ತದೆ, ಅಲ್ಲಿ ಅವರ ಇಚ್ಛೆಯಂತೆ ಅವರನ್ನು ಸಮಾಧಿ ಮಾಡಲಾಗುತ್ತದೆ.
15 ಭಾಷೆಗಳಲ್ಲಿ ನೇರ ದೂರದರ್ಶನ ಪ್ರಸಾರ
ಸಾಧ್ಯವಾದಷ್ಟು ಪ್ರೇಕ್ಷಕರು ಕಾರ್ಯಕ್ರಮಗಳನ್ನು ಅನುಸರಿಸಬಹುದೆಂದು ಖಚಿತಪಡಿಸಿಕೊಳ್ಳಲು, ಸಂವಹನಕ್ಕಾಗಿ ಡಿಕಾಸ್ಟರಿ (ನಮ್ಮ ಮೂಲ ಸಂಸ್ಥೆ) 15 ಭಾಷೆಗಳಲ್ಲಿ ನೇರ ರೇಡಿಯೋ ಮತ್ತು ದೂರದರ್ಶನ ವ್ಯಾಖ್ಯಾನವನ್ನು ಒದಗಿಸುತ್ತದೆ: ಇಂಗ್ಲಿಷ್, ಇಟಾಲಿಯನ್, ಸ್ಪ್ಯಾನಿಷ್, ಫ್ರೆಂಚ್, ಬ್ರೆಜಿಲಿಯನ್ ಪೋರ್ಚುಗೀಸ್, ಪೋರ್ಚುಗೀಸ್, ಜರ್ಮನ್, ಪೋಲಿಷ್, ವಿಯೆಟ್ನಾಮೀಸ್, ಚೈನೀಸ್ ಮತ್ತು ಅರೇಬಿಕ್, ಜೊತೆಗೆ ನಾಲ್ಕು ಸಂಕೇತ ಭಾಷೆಗಳು: ಅಮೇರಿಕನ್ ಸೈನ್ ಲ್ಯಾಂಗ್ವೇಜ್ (ASL), ಇಟಾಲಿಯನ್, ಸ್ಪ್ಯಾನಿಷ್ ಮತ್ತು ಫ್ರೆಂಚ್.
ವ್ಯಾಟಿಕನ್ ದೂರದರ್ಶನ ಕೇಂದ್ರ- ವ್ಯಾಟಿಕನ್ ಮಾಧ್ಯಮ ಒದಗಿಸುವ ದೂರದರ್ಶನ ಪ್ರಸಾರವು ಸಂತ ಪೇತ್ರರ ಚೌಕ ಮತ್ತು ಸೇಂಟ್ ಮೇರಿ ಮೇಜರ್ ಬೆಸಿಲಿಕಾಗೆ ಹೋಗುವ ಸಂಪೂರ್ಣ ಮಾರ್ಗದ ವೈಮಾನಿಕ ಮತ್ತು ನೆಲದ ವೀಡಿಯೊವನ್ನು ಒಳಗೊಂಡಿರುತ್ತದೆ.
ಮಲ್ಟಿಮೀಡಿಯಾ ಪ್ರಸಾರ (ಮುದ್ರಣ, ರೇಡಿಯೋ, ದೂರದರ್ಶನ ಮತ್ತು ಸಾಮಾಜಿಕ ಮಾಧ್ಯಮ, ವ್ಯಾಖ್ಯಾನ ಮತ್ತು ಆಳವಾದ ವಿಶ್ಲೇಷಣೆ ಸೇರಿದಂತೆ) 56 ಭಾಷೆಗಳಲ್ಲಿ ನೀಡಲಾಗುವುದು, ವ್ಯಾಟಿಕನ್ ಸುದ್ಧಿ, ವ್ಯಾಟಿಕನ್ ರೇಡಿಯೋ ಮತ್ತು ಎಲ್'ಒಸ್ಸರ್ವಟೋರ್ ರೊಮಾನೋ ವೇದಿಕೆಗಳಲ್ಲಿಯೂ ಇದನ್ನು ಬಳಸಲಾಗುತ್ತದೆ.
ನೇರಪ್ರಸಾರದ ಚಾನೆಲ್‌ಗಳು ಮತ್ತು ವೇದಿಕೆಗಳು
ಏಪ್ರಿಲ್ 26 ರ ಪ್ರಸಾರವನ್ನು ಹೇಗೆ ಅನುಸರಿಸಬೇಕು ಎಂಬುದರ ಕುರಿತು ವಿವರಗಳು ಇಲ್ಲಿವೆ:
- ವ್ಯಾಟಿಕನ್ ಸುದ್ಧಿಯ ಜಾಲತಾನ (ವೆಬ್‌ಸೈಟ್): www.vaticannews.va (ವೀಡಿಯೊಗಾಗಿ ವ್ಯಾಟಿಕನ್ ಮಾಧ್ಯಮ ಲೈವ್-ಯೂಟ್ಯೂಬ್ ಟೈಲ್ ಮೇಲೆ ಕ್ಲಿಕ್ ಮಾಡಿ; ಆಡಿಯೊಗೆ ಮಾತ್ರ, ಮೇಲಿನ ಮುಖ್ಯ ಮೆನುವಿನ ಕೆಳಗಿನ ವೆಬ್ ರೇಡಿಯೋ ಸ್ಪೀಕರ್ ಐಕಾನ್ ಮೇಲೆ ಕ್ಲಿಕ್ ಮಾಡಿ). ವ್ಯಾಟಿಕನ್ ನ್ಯೂಸ್ ಅಪ್ಲಿಕೇಶನ್ - ಗೂಗಲ್ ಪ್ಲೇ, ವ್ಯಾಟಿಕನ್ ನ್ಯೂಸ್ ಅಪ್ಲಿಕೇಶನ್ - ಐಟ್ಯೂನ್ಸ್)
- ವ್ಯಾಟಿಕನ್ ನ್ಯೂಸ್ ಯೂಟ್ಯೂಬ್ ಚಾನೆಲ್‌ಗಳು (ಇಂಗ್ಲಿಷ್ ಚಾನೆಲ್ - ಮೂಲ ಧ್ವನಿ ಮಾತ್ರ ಚಾನೆಲ್)
- 11 ಭಾಷೆಗಳಲ್ಲಿ ವ್ಯಾಟಿಕನ್ ರೇಡಿಯೋ ವೆಬ್ ರೇಡಿಯೋ (ರೇಡಿಯೋ ವ್ಯಾಟಿಕನ್ ಅಪ್ಲಿಕೇಶನ್ - ಗೂಗಲ್ ಪ್ಲೇ, ರೇಡಿಯೋ ವ್ಯಾಟಿಕಾನಾ ಅಪ್ಲಿಕೇಶನ್ - ಐಟ್ಯೂನ್ಸ್)
- ಆಫ್ರಿಕಾಕ್ಕಾಗಿ ಇಂಗ್ಲಿಷ್, ಫ್ರೆಂಚ್ ಮತ್ತು ಪೋರ್ಚುಗೀಸ್‌ನಲ್ಲಿ ಶಾರ್ಟ್‌ವೇವ್ ಪ್ರಸಾರಗಳು
- ಇಟಾಲಿಯನ್, ಇಂಗ್ಲಿಷ್, ಫ್ರೆಂಚ್, ಸ್ಪ್ಯಾನಿಷ್, ಪೋರ್ಚುಗೀಸ್ ಮತ್ತು ಜರ್ಮನ್ ಭಾಷೆಗಳಲ್ಲಿ ಫೇಸ್‌ಬುಕ್‌ನಲ್ಲಿ ನೇರ ಪ್ರಸಾರ
- ಇಟಾಲಿಯನ್, ಪೋರ್ಚುಗೀಸ್ ಮತ್ತು ಜರ್ಮನ್ ಭಾಷೆಗಳಲ್ಲಿ Instagram ಲೈವ್
ಇಟಾಲಿಯದ-ಭಾಷಾ ವರದಿ
ಮೂರು ಇಟಾಲಿಯ ಭಾಷೆಯ ವ್ಯಾಖ್ಯಾನಕಾರರ ಹುದ್ದೆಗಳು ಸಕ್ರಿಯವಾಗಿರುತ್ತವೆ: ಎರಡು ಸಂತ ಪೇತ್ರರ ಚೌಕದಲ್ಲಿ ಮತ್ತು ಒಂದು ಸೇಂಟ್ ಮೇರಿ ಮೇಜರ್ ಮಹಾದೇವಾಲಯದ ಹೊರಗೆ. ನೇರ ಪ್ರಸಾರವು ಬೆಳಿಗ್ಗೆ 8:10 ರ ಸುಮಾರಿಗೆ ಚಾರ್ಲಮ್ಯಾಗ್ನೆ ವಿಂಗ್‌ನಿಂದ ಪ್ರಾರಂಭವಾಗುತ್ತದೆ.
ಬೆಳಿಗ್ಗೆ 9:30 ರ ಸುಮಾರಿಗೆ, ಬೆಳಿಗ್ಗೆ 10:00 ಗಂಟೆಗೆ ಪ್ರಾರಂಭವಾಗುವ ರೆಕ್ವಿಯಮ್ ದಿವ್ಯಬಲಿಪೂಜೆಗಾಗಿ ಪ್ರಸಾರವು ಮುಖ್ಯ ಸ್ಟುಡಿಯೋಗೆ ಬದಲಾಗುತ್ತದೆ. ಬೆಳಿಗ್ಗೆಯಿಂದ ಪ್ರಾರಂಭಿಸಿ, ಸೇಂಟ್ ಮೇರಿ ಮೇಜರ್ ಮಹಾದೇವಾಲಯದ ಪ್ರಸಾರದ ಸ್ಥಾನವು ಪ್ರಾರ್ಥನೆಗಳ ನೇರ ಪ್ರಸಾರ ಮತ್ತು ಭಕ್ತವಿಶ್ವಾಸಿಗಳ ಭಾಗವಹಿಸುವಿಕೆಯನ್ನು ಹಂಚಿಕೊಳ್ಳುತ್ತದೆ.
ಇಟಾಲಿಯದ ಭಾಷೆಯ ಪ್ರಸಾರ ಆವರ್ತನಗಳು:
- ರೋಮ್ ನಗರದಲ್ಲಿ 103.8 FM
- ರೋಮ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ 105 FM
- DAB+ ಡಿಜಿಟಲ್ ರೇಡಿಯೋ ([www.digitalradio.it](http://www.digitalradio.it) ನಲ್ಲಿ ಮಾಹಿತಿ)
- ರೋಮ್ ಪ್ರದೇಶದಲ್ಲಿ ಟಿವಿ ಚಾನೆಲ್ 733
- ಯುಟೆಲ್ಸಾಟ್ ಉಪಗ್ರಹ