ಕಥೆಗಳು ವಿಶ್ವಗುರು ಫಾನ್ಸಿಸ್ ರವರ ಜೀವನವನ್ನು ಮರೆಯಾಗಲು ಬಿಡುವುದಿಲ್ಲ
ಕೋಲಮ್ ಮೆಕ್ಯಾನ್
ಅವರು ಇಂದಿಗೆ ಅಥವಾ ಈ ಕ್ಷಣಕ್ಕೆ ಮಾತ್ರವಲ್ಲ, ನಮ್ಮೆಲ್ಲರ ಸ್ವಂತ ಜೀವನಕ್ಕೂ ಮೀರಿ ಅನೇಕ ಕಥೆಗಳನ್ನು ಹೇಳುವ ವ್ಯಕ್ತಿಯಾಗಿರುತ್ತಾರೆ. ಅವರ ಬಗ್ಗೆ ವೈವಿಧ್ಯಮಯ ಕಥೆಗಳು ಇರುವುದು, ಒಬ್ಬ ಉತ್ತಮ ಮನುಷ್ಯನ ಲಕ್ಷಣ. ಆದರೆ ಅವನು ಅಥವಾ ಅವಳು ಹೇಳುವ ಕಥೆಗಳು ಯಾವಾಗಲೂ ಇತರರ ಬಗ್ಗೆಯೇ ಇರುತ್ತವೆ ಎಂಬುದು ಗಮನಾರ್ಹ ಲಕ್ಷಣವಾಗಿದೆ.
ಮನುಷ್ಯರಾಗಿ ನಾವು ಒಂದು ಹೊಸ ಲೋಕಕ್ಕಾಗಿ ಹಾತೊರೆಯುತ್ತೇವೆ ಎಂದು ವಿಶ್ವಗುರು ಫ್ರಾನ್ಸಿಸ್ ರವರು ಆಗಾಗ್ಗೆ ಹೇಳುತ್ತಿದ್ದರು.
ಕಳೆದ ಎರಡು ವರ್ಷಗಳಿಂದ ವಿಶ್ವಗುರು ಫ್ರಾನ್ಸಿಸ್ ರವರನ್ನು ಭೇಟಿಯಾಗುವ ಅದೃಷ್ಟ ನನಗೆ ಸಿಕ್ಕಾಗಿನಿಂದ ನನ್ನಲ್ಲಿ ಹಲವಾರು ಕಥೆಗಳಿವೆ, ಆದರೆ ಒಂದು ವಿಶೇಷವಾಗಿ ಎದ್ದು ಕಾಣುತ್ತದೆ, ಅದು ಕಳೆದ ಬೇಸಿಗೆಯ ಕೊನೆಯಲ್ಲಿ, ಅವರು ಮಧ್ಯಪ್ರಾಚ್ಯದಲ್ಲಿ ಕಥೆ ಹೇಳುವಿಕೆ ಮತ್ತು ಶಾಂತಿಯ ಸಮಸ್ಯೆಗಳನ್ನು ಚರ್ಚಿಸಲು ವ್ಯಾಟಿಕನ್‌ಗೆ ಒಂದು ಸಣ್ಣ ನಿಯೋಗವನ್ನು ಆಹ್ವಾನಿಸಿದ ಕ್ಷಣಗಳು.
ನಮ್ಮ ಐದು ಜನರ ನಿಯೋಗವು ವ್ಯಾಟಿಕನ್‌ನ ಕಾರ್ಟಿಲ್ಲೆ ಡಿ ಬೆಲ್ವೆಡೆರೆಯಲ್ಲಿರುವ ಪಾಪಲ್ ಅಪಾರ್ಟ್‌ಮೆಂಟ್‌ಗಳ ಬಳಿ ಭೇಟಿಯಾಯಿತು. ನಾವು ಮಳೆಯಿಂದ ತೇವವಾಗಿದ್ದ ಕಲ್ಲುಗಳ ಮೇಲೆ ನಡೆದೆವು. ಪ್ರವೇಶ ದ್ವಾರದಲ್ಲಿ ನಮ್ಮನ್ನು ಸ್ವಾಗತಿಸಲಾಯಿತು ಮತ್ತು ಲಿಫ್ಟ್‌ಗಳ ಕಡೆಗೆ ಮಾರ್ಗದರ್ಶನ ಮಾಡಲಾಯಿತು. ಅದು ಒಂದು ಪ್ರಾಚೀನ ಕಟ್ಟಡವಾಗಿತ್ತು, ಚೆನ್ನಾಗಿ ನಿರ್ವಹಿಸಲ್ಪಟ್ಟಿತ್ತು, ಎತ್ತರದ ಛಾವಣಿಯನ್ನು ಹೊಂದಿತ್ತು. ನಾವು ಒಂದು ಮೂಲೆಯನ್ನು ತಿರುಗಿಸಿದಾಗ, ಗೋಡೆಯ ಮೇಲೆ ದೊಡ್ಡ ಕಲಾಕೃತಿಯನ್ನು ನೋಡಿ ನಮಗೆ ಆಶ್ಚರ್ಯವಾಯಿತು. ಅದು ಎರಡು ಮೀಟರ್ ಎತ್ತರ ಹಾಗೂ ಅದು ಶಿಲುಬೆಯ ಆಕಾರದಲ್ಲಿತ್ತು. ದೈತ್ಯ ಶಿಲುಬೆಯು ಪಾರದರ್ಶಕ ರಾಳದಿಂದ ಮಾಡಲ್ಪಟ್ಟಿದೆ ಮತ್ತು ಶಿಲುಬೆಯ "ದೇಹ"ವು ದೇಹವಲ್ಲ, ಆದರೆ ಕಿತ್ತಳೆ ಬಣ್ಣದ ಲೈಫ್ ಜಾಕೆಟ್ ಎಂದು ಅರಿತುಕೊಳ್ಳಲು ಸ್ವಲ್ಪ ಸಮಯ ಹಿಡಿಯಿತು.
ವಿಶ್ವಗುರುಗಳ ಖಾಸಗಿ ನಿವಾಸದ ಪ್ರವೇಶ ದ್ವಾರದಲ್ಲಿ ಈ ಕಲಾಕೃತಿ ನೇತಾಡುತ್ತಿತ್ತು, ಇದು ವಿಶ್ವದ ನಿರಾಶ್ರಿತರ ಆಶ್ಚರ್ಯಕರ ಸಂಕೇತವಾಗಿತ್ತು. ಇದು ಒಂದು ಲೈಫ್ ಜಾಕೆಟ್, ಬಹುಶಃ ಕ್ರಿಸ್ತರಿದ್ದ ಸ್ಥಳದಲ್ಲಿ ಅಥವಾ ಅವರೊಂದಿಗೆ ಸಮುದ್ರದಲ್ಲಿ ರಕ್ಷಿಸಲ್ಪಟ್ಟ ಅಥವಾ ಮುಳುಗಿ ಸಾವನ್ನಪ್ಪಿದ ಆಫ್ರಿಕಾದ ನಿರಾಶ್ರಿತರಿಗೆ ಸೇರಿದ್ದಾಗಿರಬಹುದು.
ಆಗ ನಮಗೆ ತಿಳಿದು ಬಂದಿತ್ತು, ನಾವು ಇತರರ ಕಥೆಗಳನ್ನು ಹಿಡಿದಿಟ್ಟಿರುವ ವ್ಯಕ್ತಿಯನ್ನು ಭೇಟಿ ಮಾಡಲಿದ್ದೇವೆ ಎಂದು.
ನಮ್ಮ ನಿಯೋಗದಲ್ಲಿ ಒಬ್ಬ ಪ್ಯಾಲಸ್ತೀನಿಯದ ಕ್ರೈಸ್ತ, ಒಬ್ಬ ಪ್ಯಾಲಸ್ತೀನಿಯದ ಮುಸ್ಲಿಂ ಧರ್ಮದವ ಮತ್ತು ಒಬ್ಬ ಇಸ್ರಯೇಲ್ ಯೆಹೂದ್ಯವನು ಇದ್ದರು. ಕಾಯುವ ಕೋಣೆಯಲ್ಲಿ ನಾವು ಸಾಕಷ್ಟು ಸಮಯ ಕಾಯುತ್ತಾಇದ್ದೆವು, ಆದರೆ ಇತರ ಪಕ್ಷಗಳು ಬಾಗಿಲಿನ ಹಿಂದಿನಿಂದ ಬಂದು ಹೋದವು ಸಮಯವು ನಮ್ಮನ್ನು ತನ್ನಷ್ಟಿಕ್ಕೆ ಹಿಡಿದಿಟ್ಟುಕೊಂಡಿತು. ಬೆಳಗಿನ ಜಾವದಲ್ಲಿ, ವಿಶ್ವಗುರುವನ್ನು ಭೇಟಿ ಮಾಡುವ ಕೊನೆಯ ನಿಯೋಗ ನಾವಾಗಿದ್ದೆವು. ವಿಶ್ವಗುರು ಫ್ರಾನ್ಸಿಸ್ ರವರು ಕೈಕುಲುಕಿಸಿ ನಮ್ಮನ್ನು ಸತ್ಕರಿಸಲು ತಮ್ಮ ಕುರ್ಚಿಯಿಂದ ಎದ್ದು ನಿಂತರು. ನಮ್ಮನ್ನು ಭೇಟಿಯಾಗಲು ಅವರು "ತೀವ್ರವಾಗಿ ಭಾವುಕರಾದರು" ಎಂದು ಅವರು ಹೇಳಿದರು. ಅವರು ಮಧ್ಯಪ್ರಾಚ್ಯದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಶಾಂತಿ ಚಳವಳಿಯ ಪ್ರಮುಖ ಭಾಗವಾಗಿದ್ದರು.
ನಮ್ಮ ಚರ್ಚೆಯ ನಂತರ, ಕೆಳಗಡೆ ಹೋಗುವಾಗ, ನಾವು ಮತ್ತೆ ಕಲಾಕೃತಿಯನ್ನು ಹಾದುಹೋದೆವು. ಅದು ಶಿಲ್ಪಕಲೆಗಿಂತ ಹೆಚ್ಚಾಗಿ ಶಿಲುಬೆಯಾಗಿತ್ತು. ಲೈಫ್ ಜಾಕೆಟ್, ಸಹಜವಾಗಿ, ಒಮ್ಮೆ ಅದನ್ನು ಧರಿಸಿದ್ದವರ ಪ್ರತಿನಿಧಿಯಾಗಿತ್ತು, ಆದರೆ ಅದು ಪ್ಯಾಲಸ್ತೀನಿಯದ ಮತ್ತು ಇಸ್ರಯೇಲ್ ನಿಯೋಗವು ಕಳೆದುಹೋದ ಕುಟುಂಬಗಳ ಜೀವನವನ್ನು ಅಥವಾ ಪ್ರಸ್ತುತ ಭಯೋತ್ಪಾದನೆ ಹಾಗೂ ಜಾಗತಿಕ ಉದಾಸೀನತೆಯ ಕ್ಷೇತ್ರವನ್ನು ಪ್ರತಿನಿಧಿಸುತ್ತದೆ.
ಶಿಲುಬೆ ನೇತಾಡುತ್ತಿದ್ದ ಮೇಲಿರುವ ಕಮಾನು ಛಾವಣಿಯ ಮೂಲೆಯಲ್ಲಿ, ಪ್ಲಾಸ್ಟರ್ ಕೆಲಸದಲ್ಲಿ ಸಣ್ಣ ಬಿರುಕು ಕಂಡುಬಂದಿತು. ಬಣ್ಣ ಊದಿಕೊಂಡು ಗುಳ್ಳೆಗಳಿಂದ ತುಂಬಿತ್ತು. ಅಂತಹ ಕಟ್ಟಡದಲ್ಲಿ ಇದು ಅದ್ಭುತವಾಗಿತ್ತು. ಅಲ್ಲಿ ಒಂದು ಕಲೆ ಇರುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಅಷ್ಟೇ ಅಲ್ಲ, ಗೋಡೆಯ ಬಿರುಕು ನೀರು ಒಳಗೆ ನುಸುಳಲು ಅವಕಾಶ ಮಾಡಿಕೊಟ್ಟಿತ್ತು. ನಾವು ಕಟ್ಟಡದಿಂದ ಹೊರಬರುತ್ತಿದ್ದಂತೆ, ಹೊರಭಾಗವು ಒಳಭಾಗವನ್ನು ಹುಡುಕುತ್ತಿದಂತೆ ಮತ್ತು ಮಳೆನೀರು ಲೈಫ್ ಜಾಕೆಟ್ ನ್ನು ಹುಡುಕುತ್ತಿದೆ ಎಂದು ನಮಗೆ ತೋರಿತು. ಈ ಬಿರುಕು, ಅದು ಲಿಯೊನಾರ್ಡ್ ಕೋಹೆನ್ ರವರ "ಆಂಥೆಮ್" ಹಾಡಿನ ಸಾಲಿನಂತೆ ಇತ್ತು: "ಎಲ್ಲದರಲ್ಲೂ ಒಂದು ಬಿರುಕು ಇದೆ, ಒಂದು ಬಿರುಕು ಇದೆ, ಬೆಳಕು ಅದರ ಮೂಲಕ ಹಾದುಹೋಗುತ್ತದೆ."
ವಿಶ್ವಗುರು ಫ್ರಾನ್ಸಿಸ್ ರವರನ್ನು ಟೀಕಿಸುತ್ತಿದ್ದ ಕೆಲವರಿಗೆ ಆ ಶಿಲುಬೆಯು ವಿವಾದಾಸ್ಪದವಾಗಿತ್ತು ಎಂದು ತಿಳಿದುಬಂದಿದೆ. ಕೆಲವು ಬಲಪಂಥೀಯ ವಿಮರ್ಶಕರು, ಅವರು ಬಡವರು ಮತ್ತು ಅಂಚಿನಲ್ಲಿರುವವರನ್ನು ದೈವೀಕರಿಸುತ್ತಿದ್ದಾರೆ ಎಂದು ಹೇಳಿದರು. ಆದರೆ ವಿಶ್ವಗುರು ಫ್ರಾನ್ಸಿಸ್ ರವರು ಆ ಟೀಕೆಗೆ ಪ್ರತಿಕ್ರಿಯಿಸುತ್ತಿರಲಿಲ್ಲ. ಅವರು 2019 ರಲ್ಲಿ ಶಿಲುಬೆಯನ್ನು ಆಶೀರ್ವದಿಸಿದ್ದರು. ಅವರು ಅದರ ವಿಶಾಲವಾದ ಅರ್ಥವನ್ನು ಅಳವಡಿಸಿಕೊಂಡಿದ್ದರು. ಹಾಗೂ ಅವರಿಗೆ ಅದರ ಅರ್ಥ ತಿಳಿದಿತ್ತು ಎಂದು ಕಂಡುಬರುತ್ತದೆ.
2023 ರಲ್ಲಿ ನಡೆದ ಹಿಂದಿನ ಸಭೆಯಲ್ಲಿ, 200 ಕಲಾವಿದರ ಗುಂಪಿಗೆ ಅವರು ಹೀಗೆ ಹೇಳುವುದನ್ನು ನಾನು ಕೇಳಿದ್ದೆ: “ಆತ್ಮೀಯ ಸ್ನೇಹಿತರೇ, ನಾವು ಭೇಟಿಯಾಗಲು ಸಾಧ್ಯವಾಯಿತು ಎಂದು ನನಗೆ ಸಂತೋಷವಾಗಿದೆ. ನಿಮ್ಮಿಂದ ವಿದಾಯ ಹೇಳುವ ಮೊದಲು, ನನ್ನ ಹೃದಯಕ್ಕೆ ಹತ್ತಿರವಾದ ಒಂದು ವಿಷಯವನ್ನು ನಿಮಗೆ ಹೇಳಬೇಕು. ನಾನು ನಿಮ್ಮನ್ನು ಕೇಳಿಕೊಳ್ಳುವುದೇನೆಂದರೆ, ಬಡವರನ್ನು, ವಿಶೇಷವಾಗಿ ಕ್ರಿಸ್ತನ ಹೃದಯಕ್ಕೆ ಹತ್ತಿರವಿರುವವರನ್ನು, ಇಂದಿನ ವಿವಿಧ ರೀತಿಯ ಬಡತನದಿಂದ ಪ್ರಭಾವಿತರಾದವರನ್ನು ಮರೆಯಬೇಡಿ.
ಇಂದು ತೀವ್ರ ಶೋಕದ ಸಮಯವಾಗಿದೆ. ನಾವು ಸಾಂತ್ವನವನ್ನು ಹುಡುಕುತ್ತಿದ್ದೇವೆ. ಅದು ಖಂಡಿತ ಬರುತ್ತದೆ. ಅವರ ಅನುಗ್ರಹ ಮತ್ತು ಒಗ್ಗಟ್ಟು ಯಾವಾಗಲೂ ನೆನಪಿನಲ್ಲಿ ಉಳಿಯುತ್ತದೆ.
ಆ ವ್ಯಕ್ತಿ ಕಥೆಗಳನ್ನು ಬಿಟ್ಟು ಹೋಗಿರಬಹುದು, ಆದರೆ ಆ ಕಥೆಗಳು ಆ ವ್ಯಕ್ತಿಯನ್ನು ಬಿಡುವುದಿಲ್ಲ.