ವಿಶ್ವಗುರು ಫ್ರಾನ್ಸಿಸ್ ರವರ ಹೆಜ್ಜೆಗುರುತುಗಳು
ಜೊನಾಥನ್ ಸಫ್ರಾನ್ ಫೋಯರ್
ಭೂಮಿಯ ಮೇಲೆ ಕೆಲವು ಜನರು, ಕೇವಲ ಬರೀ ಕರ್ತವ್ಯ ನೆಪಕ್ಕಾಗಿ ಜೀವಿಸಿ ಹೋಗುವುದಲ್ಲದೇ, ಒಂದು ಮಾದರಿಯ ಜೀವನವನ್ನು ಜೀವಿಸಿ, ನಾವು ಅನುಸರಿಸಲು ಅವರ ಹೆಜ್ಜೆಗುರುತುಗಳನ್ನು ಬಿಟ್ಟು ಹೋಗುವ ಜನರಿದ್ದಾರೆ. ದೈವಶಾಸ್ತ್ರವು ಆಗಾಗ್ಗೆ ಘೋಷಣೆ ಅಥವಾ ಅಮೂರ್ತತೆಯಾಗುತ್ತಿರುವ ಸಮಯದಲ್ಲಿ, ವೇಗದ ಮಹತ್ವಕ್ಕಿಂತ ಹೆಚ್ಚಾಗಿ ಮೌಲ್ಯಯುತವಾಗಿರುವಾಗ ಮತ್ತು ಅಧಿಕಾರದ ಇಚ್ಛೆಯು ಜೀವನದ ಪ್ರತಿಯೊಂದು ಅಂಶವನ್ನು ಪ್ರಾಬಲ್ಯಗೊಳಿಸುವ ಅಪಾಯಗಳನ್ನು ಹೊಂದಿರುವಾಗ, ವಿಶ್ವಗುರು ಫ್ರಾನ್ಸಿಸ್ ರವರು ಸಹಾನುಭೂತಿಯನ್ನು ಸಾಕಾರಗೊಳಿಸಿದರು. ಅವರು ಪ್ರವಾದಿಗಳ ಮಾರ್ಗದಲ್ಲಿ ನಡೆದರು, ಭವಿಷ್ಯ ನುಡಿಯಲು ಅಲ್ಲ, ಬದಲಾಗಿ ನೆನಪಿಸಲು. ನಾವು ನಿರಂತರವಾಗಿ ಮರೆತುಬಿಡುವದನ್ನು ಅವರು ನಮಗೆ ಸದಾ ನೆನಪಿಸುತ್ತಲೇ ಇದ್ದರು: ಒಳ್ಳೆಯತನವು ಒಂದು ಕಲ್ಪನೆಯಲ್ಲ, ಆದರೆ ಅದು ಒಂದು ಅಭ್ಯಾಸವಾಗಿದೆ.
ವಿಶ್ವಗುರು ಫ್ರಾನ್ಸಿಸ್ ರವರು ಮೃದುತ್ವದ ಕ್ರಾಂತಿಗೆ ಕರೆ ನೀಡಿದರು. ನಾನು ಅರ್ಥಮಾಡಿಕೊಂಡಂತೆ, ಈ ಕ್ರಾಂತಿಯು ಯಾವುದೇ ನಿರ್ದಿಷ್ಟ ವಿಶ್ವಾಸಕ್ಕೆ ಬದ್ಧವಾಗಿಲ್ಲ, ಬದಲಿಗೆ ನಿತ್ಯಕ್ಕೂ ಗೊಂದಲಕ್ಕೆಬ್ಬಿಸುವ ವಿಷಯಕ್ಕೆ ಸಂಬಂಧಿಸಿದೆ. ಜಗತ್ತನ್ನು ಹಾಗೆಯೇ ನೋಡಲು ಮತ್ತು ಜಗತ್ತು ಮುಂದೆ ಏನಾಗಬೇಕೆಂಬುದು ಎಂಬುದನ್ನು ಕಾಣಲು ಕಣ್ಣು ತೆರೆಯುವ ಅಪಾಯಕಾರಿ ಕಾರ್ಯವನ್ನು ಎದುರಿಸಬೇಕಾಗಿದೆ. ನಾವು ಪ್ರತಿಯೊಬ್ಬರೂ ಜಗತ್ತಿನ ಭಾಗವಾಗಿರುವುದರಿಂದ, ನಾವು ನಾವಿರುವಂತೆಯೇ ನಮ್ಮನ್ನು ನೋಡಬೇಕು. ಪ್ರಜ್ಞೆ ಅಥವಾ ಮನಸ್ಸು ಎಂಬುದು ಒಂದು ಸವಲತ್ತಲ್ಲ, ಬದಲಿಗೆ ಅದು ಒಂದು ಕರೆ. ನಾವು ಅನ್ಯಾಯ ಅಥವಾ ಸಂಕಷ್ಟಗಳನ್ನು ಎದುರಿಸುವಾಗ, ನೀನು ಅಸಡ್ಡೆಯಿಂದ ಇರಬೇಡ, ಎಂಬ ಸಿನಾಯ್ ಪರ್ವತದಲ್ಲಿ ಕೇಳಿಸಿದ ನಮ್ಮಲ್ಲಿಯೂ ಸಹ ಪ್ರತಿಧ್ವನಿಸಬೇಕು.
ಫ್ರಾನ್ಸಿಸ್ ರವರು ಕೇವಲ ಕಥೋಲಿಕರೊಂದಿಗೆ ಅಥವಾ ಕ್ರೈಸ್ತರೊಂದಿಗೆ ಮಾತ್ರ ಮಾತನಾಡಲಿಲ್ಲ. ನಾನು ಒಬ್ಬ ಯೆಹೂದ್ಯ ವ್ಯಕ್ತಿಯಾಗಿ, ಅವರು ನನ್ನ ಜೀವಿತಾವಧಿಯಲ್ಲಿ ಒಬ್ಬ ಉತ್ತಮ ಸ್ಪೂರ್ತಿದಾಯಕ, ನನ್ನ ಮನಸ್ಸನ್ನು ಗೊಂದಲಕ್ಕೆಬ್ಬಿಸಿದ, ನಾಯಕ ಎಂದು ನಾನು ಕಂಡುಕೊಂಡೆ. ನಮಗೆ ಇನ್ನು ಮುಂದೆ ಆತ್ಮಗಳಿಲ್ಲ, ಆದ್ದರಿಂದ ನಮಗೆ ಇನ್ನು ಮುಂದೆ ಜವಾಬ್ದಾರಿಗಳಿಲ್ಲ ಎಂದು ವಿಶ್ವಾಸಿಸಲು ಪ್ರೋತ್ಸಾಹಿಸಲ್ಪಟ್ಟ ಐತಿಹಾಸಿಕ ಕ್ಷಣದಲ್ಲಿ ಅವರು ಮಾನವ ಆತ್ಮದೊಂದಿಗೆ ಮಾತನಾಡಿದರು. ಅವನ ಧ್ವನಿಯಲ್ಲಿ, "ನ್ಯಾಯವನ್ನು ಪಾಲಿಸುವುದು, ಕರುಣೆಯನ್ನು ಪ್ರೀತಿಸುವುದು ಮತ್ತು ನಿನ್ನ ದೇವರೊಂದಿಗೆ ನಮ್ರತೆಯಿಂದ ನಡೆಯುವುದಲ್ಲದೆ, ಪ್ರಭುವು ನಿನ್ನಿಂದ ಇನ್ನೇನು ಅಪೇಕ್ಷಿಸುತ್ತಾರೆ?" ಎಂಬ ಪ್ರಾಚೀನ ಕೂಗು ಪ್ರತಿಧ್ವನಿಸುತ್ತಿತ್ತು.
ದೇವರು ಎಲ್ಲಿದ್ದಾರೆಂದು ನಮಗೆ ತಿಳಿದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು! ತಿಳಿಯದೆಯೇ, ನಾವು ಆಗಾಗ್ಗೆ ತಪ್ಪು ದಿಕ್ಕುಗಳಲ್ಲಿ ನಡೆಯುತ್ತೇವೆ (ಸಾಧನೆಯ ಸೂಚಕಗಳು, ಕ್ಷಣಿಕ ಸಂತೋಷಗಳು, ನಮ್ಮ ಅಭದ್ರತೆಗಳಿಂದ ಪರಿಹಾರದ ಕಡೆಗೆ), ಅಥವಾ ದಿಕ್ಕು ತೋಚದೆ, ದಾರಿ ತಪ್ಪಿ ಕಳೆದುಹೋಗಿದ್ದೇವೆ ಎಂದು ಭಾವಿಸುತ್ತೇವೆ. ಆದ್ದರಿಂದ ನಮ್ಮ ಆತ್ಮಗಳಿಂದ ನಮ್ಮನ್ನು ಬೇರೆಡೆಗೆ ಸೆಳೆಯುವ ಮಾರ್ಗಗಳನ್ನು ಕಂಡುಕೊಳ್ಳುತ್ತೇವೆ. ವಿಶ್ವಗುರು ಫ್ರಾನ್ಸಿಸ್ ರವರ ಜೀವನದ ಹೆಜ್ಜೆ ಗುರುತುಗಳು ನಮಗೆ ಒಂದು ಮಾರ್ಗವನ್ನು ನೀಡುತ್ತವೆ. ಇನ್ನೂ ಈಡೇರಿಲ್ಲ ಅಥವಾ ನೆರವೇರಿಲ್ಲ, ಆದರೆ ಧೈರ್ಯದಿಂದ ಪ್ರಾರಂಭವಾಗಿದೆ. ಈ ಅದ್ಭುತವಾದ ಪವಾಡಗಳನ್ನು ನಮ್ಮ ಜೀವನದಲ್ಲಿ ಅನುಭವಿಸಲು ಹಾಗೂ ಈ ಮಾರ್ಗಗಳನ್ನು ಅನುಸರಿಸಲು ನಾವು ಕೇವಲ ಸಾಧಾರಣ ಮನುಷ್ಯರಾಗಬೇಕಾಗಿದೆ.