ಕರುಣೆಯ ಸ್ವರಮೇಳ: ವಿಶ್ವಗುರು ಫ್ರಾನ್ಸಿಸ್ ರವರಿಗೆ ಕೃತಜ್ಞತೆ
ತೋಮಾಸ್ ಝೀಲೆನ್‌ಕೀವಿಚ್
"ಭರವಸೆಯ ಜೂಬಿಲಿ ವರ್ಷದಲ್ಲಿ, ನಾವು ಭರವಸೆಯ ತೀರ್ಥಯಾತ್ರೆಯನ್ನು ಆಚರಿಸುತ್ತೇವೆ" ಎಂದು ಕಾರ್ಡ್. ಟ್ಯಾಗಲ್ ರವರು ಹೇಳುತ್ತಾರೆ. ಕರುಣೆಯ ಸಿಂಫನಿಯಲ್ಲಿ ಭಾಗವಹಿಸುವುದನ್ನು ಪ್ರೋತ್ಸಾಹಿಸುತ್ತಾ, ಅವರು "ಇದು ದೈವಿ ಕರುಣೆಯ ಮೂಲಕ ಒಂದು ರೀತಿಯ ಭರವಸೆಯ ತೀರ್ಥಯಾತ್ರೆಯಾಗಲಿದೆ" ಎಂದು ಸೂಚಿಸಿದರು. ಪ್ರತಿಯಾಗಿ, ಲಾಡ್ಜ್‌ನ ಆರ್ಚ್‌ಬಿಷಪ್ ಕಾರ್ಡಿನಲ್ ಗ್ರ್ಜೆಗೋರ್ಜ್ ರೈಸ್ ಅವರು ಈ ಕಾರ್ಯಕ್ರಮವು ಸಂಸ್ಕೃತಿ, ಸೌಂದರ್ಯಶಾಸ್ತ್ರ ಮತ್ತು ಸೌಂದರ್ಯದ ಭಾಷೆಯನ್ನು ಬಳಸುತ್ತದೆ ಎಂದು ಒತ್ತಿ ಹೇಳಿದರು. ಈಗ, ಸಿಂಫನಿ ಫ್ರಾನ್ಸಿಸ್ ರವರ ವಿಶ್ವಗುರು ಹುದ್ದೆಗೆ ಕೃತಜ್ಞತೆ ಸಲ್ಲಿಸುವ ಒಂದು ಕಾರ್ಯಕ್ರಮವಾಗಿದೆ.
ಫ್ರಾನ್ಸಿಸ್ ರವರ ಕರೆಗೆ ಸ್ಪಂದಿಸುತ್ತಾ
ಈ ಕಾರ್ಯಕ್ರಮಕ್ಕೆ ಕಾರಣಕರ್ತರಾದ ಪೋಲಿಷ್ ಉದ್ಯಮಿ ಮತ್ತು ಲೋಕೋಪಕಾರಿ ಜಾನ್ ಮ್ರೋಕಾರವರು, ಜಗತ್ತಿನಲ್ಲಿ ಕರುಣೆ ಮತ್ತು ಶಾಂತಿಗಾಗಿ ಪ್ರಾರ್ಥಿಸುವ ವಿಶ್ವಗುರು ಫ್ರಾನ್ಸಿಸ್ ರವರ ಕರೆಗೆ ಕರುಣೆಯ ಸ್ವರಮೇಳವು ಪ್ರತಿಕ್ರಿಯಿಸುತ್ತದೆ ಎಂದು ಗಮನಸೆಳೆದರು.
ಇಂದು ಏನು ನಡೆಯುತ್ತಿದೆ ಎಂಬುದಕ್ಕೆ ನಮ್ಮ ಸ್ಪಷ್ಟ ಮತ್ತು ಗಟ್ಟಿಯಾದ ಪ್ರತಿಕ್ರಿಯೆಯು ಪೋಲೆಂಡ್‌ನ ಕ್ರಾಕೋವ್‌ನಿಂದ, ಸಂತ ಫೌಸ್ಟಿನಾರವರ ಸಮಾಧಿಯಿಂದ ಬಂದಿದೆ. ನಾವು ದೈವಿಕ ಕರುಣೆ ಮತ್ತು ಶಾಂತಿಯ ಉಡುಗೊರೆಗಾಗಿ ವಿಶ್ವಾಸದಿಂದ ಬೇಡಿಕೊಳ್ಳುತ್ತೇವೆ" ಎಂದು ಜಾನ್ ಮ್ರೋವ್ಕಾರವರು ಹೇಳಿದರು.
ಆರು ಖಂಡಗಳು
ಪ್ರಾರ್ಥನೆಯೊಂದಿಗೆ ಸಂಗೀತವನ್ನು ಸಂಯೋಜಿಸುವ ಭವ್ಯವಾದ ಕಾರ್ಯಕ್ರಮವಾದ ಕರುಣೆಯ ಸ್ವರಮೇಳವನ್ನು ಪೋಲಿಷ್ ಸಂಯೋಜಕ ಬಾರ್ಟ್ಲೋಮಿಜ್ ಗ್ಲಿನಿಯಾಕ್ ರವರು ಸಂಯೋಜಿಸಿದ್ದಾರೆ. ಸಂತ ಫೌಸ್ಟಿನಾ ಕೊವಾಲ್ಸ್ಕಾರವರ ಮಾತುಗಳನ್ನು ಬಳಸಿಕೊಂಡು, ಇದನ್ನು ಏಪ್ರಿಲ್ 26 ರಂದು ಸಂಜೆ 5 ರಿಂದ 7:30 ರವರೆಗೆ, ದೈವಿ ಕರುಣೆಯ ಭಾನುವಾರದ ಮುನ್ನಾದಿನದಂದು ಪ್ರದರ್ಶಿಸಲಾಗುತ್ತದೆ. ಈ ಸಂಗೀತ ಕಚೇರಿಯು ಕ್ರಾಕೋವ್-ಲಾಗಿವ್ನಿಕಿಯಲ್ಲಿರುವ ದೈವೀ ಕರುಣೆಯ ದೇವಾಲಯದ ಸಮೀಪದಲ್ಲಿ ನಡೆಯಲಿದೆ. ಇದು ಸಂತ ದ್ವಿತೀಯಾ ಜಾನ್ ಪಾಲ್ ರವರ, ಹದಿನಾರನೇಯ ಬೆನೆಡಿಕ್ಟ್ ಮತ್ತು ವಿಶ್ವಗುರು ಫ್ರಾನ್ಸಿಸ್ ರವರ ತೀರ್ಥಯಾತ್ರೆಗಳ ತಾಣವಾಗಿದೆ. ಕಲಾವಿದರು ವ್ಯಾಟಿಕನ್ ಮತ್ತು ಬ್ರೆಜಿಲ್, ಯುಎಸ್ಎ, ತಾಂಜಾನಿಯಾ, ಫಿಲಿಪೈನ್ಸ್ ಮತ್ತು ಆಸ್ಟ್ರೇಲಿಯಾದ ಇತರ ಖಂಡಗಳಲ್ಲಿರುವ ದೈವಿ ಕರುಣೆಯ ದೇವಾಲಯಗಳಲ್ಲಿ, ಈ ಕಾರ್ಯಕ್ರಮವನ್ನು ನೇರಪ್ರಸಾರ ಮಾಡಲಿದ್ದಾರೆ.
ಫ್ರಾನ್ಸಿಸ್ ರವರ ಆಶೀರ್ವಾದ
ಈ ಕಾರ್ಯಕ್ರಮವನ್ನು ಟೆರಾ ಡಿವಿನಾ ಫೌಂಡೇಶನ್ ಮತ್ತು ಜಾನ್ ಪಾಲ್ II ಇನ್ಸ್ಟಿಟ್ಯೂಟ್ ಫಾರ್ ಇಂಟರ್ ಕಲ್ಚರಲ್ ಡೈಲಾಗ್ ಆಯೋಜಿಸಿದೆ. ಫೆಬ್ರವರಿಯಲ್ಲಿ, ಆಯೋಜಕರು ವಿಶ್ವಗುರು ಫ್ರಾನ್ಸಿಸ್ ರವರನ್ನು ಭೇಟಿ ಮಾಡಿ ಪೂಜ್ಯ ತಂದೆಯ ಸಹಿ ಮಾಡಿದ ಆಶೀರ್ವಾದವನ್ನು ಪಡೆದರು.
"ನಮ್ಮನ್ನು ಚಲನೆಯಲ್ಲಿಟ್ಟವರು ಫ್ರಾನ್ಸಿಸ್ ರವರು. ಅವರು ತಮ್ಮ ಜೀವನದುದ್ದಕ್ಕೂ ಕರುಣೆಯ ಬಗ್ಗೆ ಮಾತನಾಡಿದರು. ಫ್ರಾನ್ಸಿಸ್ ರವರು! ನಮ್ಮ ಹೃದಯಗಳಿಗೆ ದೇವರ ಪ್ರೀತಿಯ ಬೆಂಕಿ ಹಚ್ಚಿದ್ದಕ್ಕಾಗಿ ಮತ್ತು ಕರುಣೆಯನ್ನು ಅಭ್ಯಾಸ ಮಾಡಲು ನಮಗೆ ಕಲಿಸಿದ್ದಕ್ಕಾಗಿ ನಾವು ನಿಮಗೆ ಧನ್ಯವಾದ ಹೇಳಲು ಬಯಸುತ್ತೇವೆ" ಎಂದು ಸಂಘಟಕರು ಹೇಳುತ್ತಾರೆ.
ಶಾಂತಿಯ ದೂರದರ್ಶನ ಸೇತುವೆ
ಇನ್ನೂರು ಕಲಾವಿದರು ಸ್ವರಮೇಳವನ್ನು ಪ್ರದರ್ಶಿಸಲಿದ್ದಾರೆ. ಪ್ರಪಂಚದಾದ್ಯಂತದ ವೀಕ್ಷಕರು ದೂರದರ್ಶನ ಮತ್ತು ಇಂಟರ್ನೆಟ್/ಅಂರ್ಜಾಲದ ಮೂಲಕ ಕಾರ್ಯಕ್ರಮವನ್ನು ನೇರಪ್ರಸಾರ ವೀಕ್ಷಿಸಲು ಸಾಧ್ಯವಾಗುತ್ತದೆ. ಪ್ರಸ್ತುತ ಶೋಕದ ಬಿರುಗಾಳಿಯ ಸಮಯದಲ್ಲಿ ಜಗತ್ತಿನಲ್ಲಿ ಕರುಣೆ ಮತ್ತು ಶಾಂತಿಗಾಗಿ ಕರುಣೆಯ ಸ್ವರಮೇಳವು ಒಂದು ದೊಡ್ಡ ಮನವಿಯಾಗಿ ಕಲ್ಪಿಸಲಾಗಿದೆ ಎಂದು ಸಂಘಟಕರು ಒತ್ತಿ ಹೇಳುತ್ತಾರೆ.
www.symphonyofmercy.com ನಲ್ಲಿ ಕರುಣೆಯ ಸ್ವರಮೇಳದ ಬಗ್ಗೆ ಕುರಿತು ಇನ್ನಷ್ಟು ಓದಿ.