ಕಾರ್ಡಿನಲ್ ಟ್ಯಾಗಲೆರವರ ನೇತೃತ್ವದಲ್ಲಿ ವಿಶ್ವಗುರು ಫ್ರಾನ್ಸಿಸ್ ರವರ ಸ್ಮರಣಾರ್ಥ ಜಪಸರ ಪ್ರಾರ್ಥನೆ
ವ್ಯಾಟಿಕನ್ ಸುದ್ದಿ
ಏಪ್ರಿಲ್ 24, ಗುರುವಾರ ಸಂಜೆ ವಿಶ್ವಗುರು ಫ್ರಾನ್ಸಿಸ್ ರವರನ್ನು ಸ್ಮರಿಸುವ ನಾಲ್ಕನೇ ದಿನದ ಸಂಜೆಯ ಜಪಸರವನ್ನು ಕಾರ್ಡಿನಲ್ ಲೂಯಿಸ್ ಆಂಟೋನಿಯೊ ಟ್ಯಾಗಲೆರವರು ಮುನ್ನಡೆಸಿದರು.
ಸೇಂಟ್ ಮೇರಿ ಮೇಜರ್‌ನ ಪೇಪಲ್ ಮಹಾದೇವಾಲಯದಲ್ಲಿ ಏಪ್ರಿಲ್ 26ರ ಶನಿವಾರದಂದು ಅಂತ್ಯಕ್ರಿಯೆಯ ನಂತರ ವಿಶ್ವಗುರು ಫ್ರಾನ್ಸಿಸ್ ರವರ ಸಮಾಧಿ ಮಾಡುವ ಕಾರ್ಯಾಚರಣೆಯಲ್ಲಿ ಮತ್ತೊಮ್ಮೆ ಪ್ರಾರ್ಥನೆ ನಡೆಯಿತು.
ಜಪಸರ ಪ್ರಾರ್ಥನೆಯನ್ನು ಮುನ್ನಡೆಸುವ ಮೊದಲು ತಮ್ಮ ಪರಿಚಯಾತ್ಮಕ ಮಾತುಗಳಲ್ಲಿ, ಕಾರ್ಡಿನಲ್ ಟ್ಯಾಗಲ್ ರವರು, ಇಂದಿನ ಶುಭಸಂದೇಶದ ಪುನರುತ್ಥಾನಗೊಂಡ ಪ್ರಭುಯೇಸುವಿನ ಸುವಾರ್ತೆಯಲ್ಲಿ ತಮ್ಮ ಯಾತನೆಗಳ ನಂತರ, ಯೇಸು ಪುನರುತ್ಥಾನಗೊಂಡ ಮೇಲೂ, ಇನ್ನೂ ಆಘಾತ ಅಥವಾ ಭಯಭೀತರಾಗಿದ್ದ, ತಮ್ಮ ಶಿಷ್ಯರ ನಡುವೆ ಕಾಣಿಸಿಕೊಂಡಾಗ, "ನೀವು ಯಾಕೆ ಗೊಂದಲಕ್ಕೊಳಗಾಗಿದ್ದೀರಿ? ಮತ್ತು ನಿಮ್ಮ ಹೃದಯಗಳಲ್ಲಿ ಪ್ರಶ್ನೆಗಳು ಏಕೆ ಉದ್ಭವಿಸುತ್ತವೆ?" ಎಂಬ ಮಾತುಗಳನ್ನು ನೆನಪಿಸಿಕೊಂಡರು.
"ಸಾವಿನ ಭಯದಿಂದ ಅವರನ್ನು ಮುಕ್ತಗೊಳಿಸಲು" ಧರ್ಮಗ್ರಂಥಗಳನ್ನು ವಿವರಿಸುವ ಮೂಲಕ ಪ್ರಭುಯೇಸು ಅವರನ್ನು ಪ್ರೋತ್ಸಾಹಿಸಿದನು ಮತ್ತು ಅವರ ಹೃದಯಗಳನ್ನು ತೆರೆಯಲು ಸಹಾಯ ಮಾಡಿದನು ಎಂದು ಕಾರ್ಡಿನಲ್ ಟ್ಯಾಗಲ್ ರವರು ವಿವರಿಸಿದರು.
"ಪುನರುತ್ಥಾನಗೊಂಡ ಕ್ರಿಸ್ತರ ಈ ಮಾತುಗಳು ನಮ್ಮಲ್ಲಿ ಪ್ರತಿಯೊಬ್ಬರಿಗೂ ನಮ್ಮ ಜೀವನಕ್ಕೆ ಭರವಸೆ ಮತ್ತು ನಿಶ್ಚಿತತೆಯನ್ನು ನೀಡಲು ಉದ್ದೇಶಿಸಿವೆ" ಎಂದು ಅವರು ಹೇಳಿದರು, ಏಕೆಂದರೆ "ಗುರು ಮತ್ತು ಪ್ರಭುದೇವರು ನಮಗೆ ಜೀವನವನ್ನು ನೀಡಲು ಬಂದರು, ಅಂತ್ಯವಿಲ್ಲದ ನಿತ್ಯಜೀವನವನ್ನುನೀಡಲು ಬಂದರು."
ಕೊನೆಯಲ್ಲಿ, ಕಾರ್ಡಿನಲ್ ಟ್ಯಾಗಲ್ ರವರು ಭಕ್ತವಿಶ್ವಾಸಿಗಳಿಗೆ, ಈ ಮನೋಭಾವದಿಂದ "ನಮ್ಮ ಪ್ರೀತಿಯ ಪೂಜ್ಯ ತಂದೆ ವಿಶ್ವಗುರು ಫ್ರಾನ್ಸಿಸ್‌ರವರಿಗಾಗಿ ಪ್ರಾರ್ಥಿಸೋಣ, ಅವರನ್ನು ಪೂಜ್ಯ ಮಾತೆ ಮೇರಿಯು, ಸಲೂಸ್ ಪಾಪುಲಿ ರೊಮಾನಿರವರ ಕೋಮಲ ಕೈಗಳಿಗೆ ಒಪ್ಪಿಸೋಣ" ಮಾತೆ ಮೇರಿಯು, "ಸ್ವರ್ಗದ ದ್ವಾರವೇ, ನಮಗಾಗಿ ಪ್ರಾರ್ಥಿಸಿರಿ." ಎಂದು ಪ್ರಾರ್ಥಿಸಿದರು.