MAP

Preparations of the tomb for MAP Francis in the Basilica of Santa Maria Maggiore Preparations of the tomb for MAP Francis in the Basilica of Santa Maria Maggiore 

ವಿಶ್ವಗುರುವಿನ ಇಟಾಲಿಯದ ಅಜ್ಜ-ಅಜ್ಜಿಯರ ನಾಡಿನಿಂದ ತಂದ ಅಮೃತಶಿಲೆಯಿಂದ ಮಾಡಿದ ಸಮಾಧಿ

ಸೇಂಟ್ ಮೇರಿ ಮೇಜರ್ ಮಹಾದೇವಾಲಯದಲ್ಲಿ, ವಿಶ್ವಗುರು ಫ್ರಾನ್ಸಿಸ್ ರವರ ಪಾರ್ಥೀವ ಶರೀರವನ್ನು ಸಮಾಧಿ ಮಾಡಲಿರುವ ಸಮಾಧಿಯನ್ನು, ಇಟಾಲಿಯ ಪ್ರದೇಶದ ಲಿಗುರಿಯಾದ ವಸ್ತುಗಳಿಂದ ತಯಾರಿಸಲಾಗಿದೆ. ಇದು "ಫ್ರಾನ್ಸಿಸ್ಕಸ್" ಎಂಬ ಶಾಸನವನ್ನು ಮಾತ್ರ ಹೊಂದಿರುವ ಸರಳ ಸಮಾಧಿಯಾಗಿದ್ದು, ದಿವಂಗತ ವಿಶ್ವಗುರುವಿನ ಪೆಕ್ಟೋರಲ್ ಶಿಲುಬೆಯ/ಧರ್ಮಾಧ್ಯಕ್ಷರ ಎದೆಯ ಮೇಲೆ ಇರಿಸುವ ಶಿಲುಬೆಯ ಪ್ರತಿರೂಪವಾಗಿದೆ.

ಎಡೋರ್ಡೊ ಗಿರಿಬಾಲ್ಡಿ

ಸೇಂಟ್ ಮೇರಿ ಮೇಜರ್ ಮಹಾದೇವಾಲಯದಲ್ಲಿ, ವಿಶ್ವಗುರು ಫ್ರಾನ್ಸಿಸ್ ರವರ ಪಾರ್ಥೀವ ಶರೀರವನ್ನು ಸಮಾಧಿ ಮಾಡಲಿರುವ ಸಮಾಧಿಯನ್ನು, ಇಟಾಲಿಯ ಪ್ರದೇಶದ ಲಿಗುರಿಯಾದ ವಸ್ತುಗಳಿಂದ ತಯಾರಿಸಲಾಗಿದೆ. ಇದು "ಫ್ರಾನ್ಸಿಸ್ಕಸ್" ಎಂಬ ಶಾಸನವನ್ನು ಮಾತ್ರ ಹೊಂದಿರುವ ಸರಳ ಸಮಾಧಿಯಾಗಿದ್ದು, ದಿವಂಗತ ವಿಶ್ವಗುರುವಿನ ಪೆಕ್ಟೋರಲ್ ಶಿಲುಬೆಯ/ಧರ್ಮಾಧ್ಯಕ್ಷರ ಎದೆಯ ಮೇಲೆ ಇರಿಸುವ ಶಿಲುಬೆಯ ಪ್ರತಿರೂಪವಾಗಿದೆ.

ಈ ಸಮಾಧಿಯು ಸಂತ ಫ್ರಾನ್ಸಿಸ್ ರವರ ಬಲಿಪೀಠದ ಬಳಿ, ಪೌಲೈನ್‌ ಪ್ರಾರ್ಥನಾ ಮಂದಿರ (ಸಾಲುಸ್ ಪಾಪುಲಿ ರೊಮಾನಿ ಚಾಪೆಲ್) ಮತ್ತು ಸ್ಫೋರ್ಜಾ ಪ್ರಾರ್ಥನಾ ಮಂದಿರದ ನಡುವಿನ ಪಕ್ಕದ ನೇವ್‌ನನಲ್ಲಿದೆ. ದೂರದರ್ಶನದಲ್ಲಿ ಮಾತನಾಡಿದ ಮಹಾದೇವಾಲಯದ ಸಹ-ಮಹಾಯಾಜಕರಾದ ಕಾರ್ಡಿನಲ್ ರೋಲಂಡಾಸ್ ಮಕ್ರಿಕಾಸ್ ರವರು, ವಿಶ್ವಗುರು ಫ್ರಾನ್ಸಿಸ್ ರವರನ್ನು "ಅವರ ಅಜ್ಜ-ಅಜ್ಜಿಯರ ನಾಡಿನ ಲಿಗುರಿಯಾದ ಕಲ್ಲಿನಿಂದ" ಮಾಡಿದ ಸಮಾಧಿಯಲ್ಲಿ ಅವರ ಪಾರ್ಥೀವ ಶರೀರವನ್ನು ಸಮಾಧಿ ಮಾಡುವ ಬಯಕೆಯನ್ನು ಘೋಷಿಸಿದರು.

ಇಟಲಿಯಿಂದ ಅರ್ಜೆಂಟೀನಾವರೆಗೆ
ಕೊಗೊರ್ನೊ ಎಂಬ ಸಣ್ಣ ಪಟ್ಟಣದಲ್ಲಿ ಬರ್ಗೊಗ್ಲಿಯೊರವರ ಮುತ್ತಜ್ಜ ವಿನ್ಸೆಂಜೊ ಸಿವೊರಿರವರನ್ನು ಸ್ಮರಿಸುವ ಸ್ಲೇಟ್ ಫಲಕ - ಸೂಕ್ಷ್ಮ-ಧಾನ್ಯದ ಬೂದು, ಹಸಿರು ಅಥವಾ ನೀಲಿ ಬಣ್ಣದ ರೂಪಾಂತರ ಶಿಲೆ - ಇದೆ. ಅವರು 1800 ರ ದಶಕದಲ್ಲಿ ಇಟಲಿಯಿಂದ ಅರ್ಜೆಂಟೀನಾಕ್ಕೆ ಪ್ರಯಾಣ ಬೆಳೆಸಿದರು. ಅಲ್ಲಿ ಅವರು ತಮ್ಮ ಮೊಮ್ಮಗಳು ರೆಜಿನಾ ಮಾರಿಯಾ ಸಿವೊರಿರವರನ್ನು (ವಿಶ್ವಗುರು ಫ್ರಾನ್ಸಿಸ್ ರವರ ತಾಯಿ) ಸೇರಿದಂತೆ ತಮ್ಮ ಕುಟುಂಬವನ್ನು ಬೆಳೆಸಿದರು.

"ಒಂದು ದೊಡ್ಡ ಉಡುಗೊರೆ, ಕೊನೆಯದಾಗಿ ಒಂದು ಅಚ್ಚರಿ."
ವಿಶ್ವಗುರು ಫ್ರಾನ್ಸಿಸ್ ರವರು ಆಗಾಗ್ಗೆ ಲಿಗುರಿಯಾ ಜೊತೆಗಿನ ತಮ್ಮ ಸಂಪರ್ಕವನ್ನು ಖಾಸಗಿಯಾಗಿಯೇ ಇಟ್ಟುಕೊಂಡಿದ್ದರು, ಆದ್ದರಿಂದ ಪಟ್ಟಣದ ಮೇಯರ್ ಎನ್ರಿಕಾ ಸೊಮ್ಮರಿವಾರವರು, ವಿಶ್ವಗುರು ತಮ್ಮ ಸಮಾಧಿಗಾಗಿ ತಮ್ಮ ಅಜ್ಜ-ಅಜ್ಜಿಯರ ಪ್ರದೇಶದಿಂದ ಕಲ್ಲು ಕೇಳಿದ್ದಾರೆಂದು ಕೇಳಿದಾಗ ತಮ್ಮ ಆಶ್ಚರ್ಯವನ್ನು ವಿವರಿಸಿದರು.

ಕೊಗೊರ್ನೊದಲ್ಲಿ ಇನ್ನೂ ವಾಸಿಸುವ ಏಂಜೆಲಾ ಸಿವೊರಿರವರು, ತಾನು ವಿಶ್ವಗುರು ಫ್ರಾನ್ಸಿಸ್ ರವರ ಸೋದರಸಂಬಂಧಿ ಎಂದು ಕಂಡುಕೊಂಡ ಕ್ಷಣವನ್ನು ಮೆಲುಕು ಹಾಕಿದರು. ಅವರು ಬ್ಯೂನಸ್ ಐರಿಸ್‌ನಿಂದ ಫೋನ್ ಕರೆ ಸ್ವೀಕರಿಸಿದ್ದನ್ನು ಮತ್ತು ಇಮೇಲ್ ಮೂಲಕ ವಂಶಾವಳಿಯ ಮರದ ವಿವರಣೆಯನ್ನು ವಿವರಿಸಿದರು. ಸಮಾಧಿಯ ಕಲ್ಲಿನ ಬಗ್ಗೆ ವಿಶ್ವಗುರುವಿನ ವಿನಂತಿಯು, ಕುಟುಂಬಕ್ಕೆ ಒಂದು ಅದ್ಭುತ ಉಡುಗೊರೆಯಾಗಿದೆ ಹಾಗೂ ಕೊನೆಯ ಆಶ್ಚರ್ಯ ಎಂದು ಕ್ರಿಸ್ಟಿನಾರವರು ಮತ್ತು ಅವರ ಮಗಳು ಹೇಳಿದರು.

ಕುಟುಂಬಗಳ ಭೇಟಿ
ಮೇ 2017 ರಲ್ಲಿ, ವಿಶ್ವಗುರು ಫ್ರಾನ್ಸಿಸ್ ರವರು ಜಿನೋವಾದಲ್ಲಿ ತಮ್ಮ ಕುಟುಂಬವನ್ನು ಭೇಟಿಯಾದರು.

ಆ ಸಮಯದಲ್ಲಿ ವಿಶ್ವಗುರು ಫ್ರಾನ್ಸಿಸ್ ರವರ ತಾಯಿಗೆ 87 ವರ್ಷ ವಯಸ್ಸಾಗಿತ್ತು ಮತ್ತು ಕೊನೆಯ ಕ್ಷಣದವರೆಗೂ ತಮ್ಮ ಮಗ ವಿಶ್ವಗುರು ಫ್ರಾನ್ಸಿಸ್ ರವರನ್ನು ಭೇಟಿಯಾಗುತ್ತಾರೆಂದು ಅವರಿಗೆ ತಿಳಿದಿರಲಿಲ್ಲ ಎಂದು ಕ್ರಿಸ್ಟಿನಾರವರು ನೆನಪಿಸಿಕೊಂಡರು. "ನಂತರ, ಮೂರು ದಿನಗಳ ಹಿಂದೆ, ನಮಗೆ ವ್ಯಾಟಿಕನ್‌ನಿಂದ ಕರೆ ಬಂತು. "ನಾವು ಏಳು ಜನ ಒಟ್ಟಿಗೆ ಇದ್ದೆವು ಮತ್ತು ಅವರು 'ಜಗತ್ತಿನ ತುದಿಯಿಂದ' ಬಂದ ಸೋದರಸಂಬಂಧಿಯಂತೆ ನಮ್ಮನ್ನು ಸ್ವಾಗತಿಸಿದರು." ಸಭೆಯ ಸಮಯದಲ್ಲಿ, ವಿಶ್ವಗುರು ಫ್ರಾನ್ಸಿಸ್ ರವರು ತಮ್ಮ ಸೋದರಸಂಬಂಧಿಗಳ ಕೈಕುಲುಕಿದರು, ಮುಗುಳ್ನಗುತ್ತಾ, "ಕೊನೆಗೂ, ನಾನು ಸಿವೋರಿಗಳನ್ನು ಭೇಟಿಯಾಗುತ್ತೇನೆ!" ಎಂದು ಉದ್ಗರಿಸಿದರು.

ಜನರ ಕಲ್ಲು
ಆದ್ದರಿಂದ ಸ್ಲೇಟ್ ಮತ್ತು ದಿವಂಗತ ಪೋಪ್ ನಡುವೆ ಆಳವಾದ ಸಂಬಂಧವಿದೆ.

ಲಿಗುರಿಯದ ಬೆಟ್ಟಗಳಲ್ಲಿ 18 ಕ್ವಾರಿಗಳು ಮತ್ತು 12 ಕಂಪನಿಗಳನ್ನು ಒಳಗೊಂಡಿರುವ ಸ್ಲೇಟ್ ಜಿಲ್ಲೆಯ ಅಧ್ಯಕ್ಷೆ ಫ್ರಾಂಕಾ ಗಾರ್ಬೈನೊರವರು, ಇದನ್ನು "ಉದಾತ್ತ ಕಲ್ಲು ಅಲ್ಲ”, ಬದಲಿಗೆ "ಜನರ ಕಲ್ಲು" ಮತ್ತು "ಪ್ರೀತಿಯ ಉಷ್ಣತೆಯ ಕಲ್ಲು" ಎಂದು ಬಣ್ಣಿಸಿದ್ದಾರೆ. ವಿಶ್ವಗುರು ಫ್ರಾನ್ಸಿಸ್ ರವರ ನಿತ್ಯ ವಿಶ್ರಾಂತಿಯಲ್ಲಿ ಅವರೊಂದಿಗಿರಲು ಸ್ಲಾಬ್‌ಗಳನ್ನು ರಚಿಸಲು ಜಿಲ್ಲೆ ಈಗಾಗಲೇ ಒಪ್ಪಿಕೊಂಡಿದೆ.

ವಿಶ್ವಗುರುವಿಗಿಂತಲೂ ಮುಂಚೆಯೇ, ಕೊಗೊರ್ನೊ ಪಟ್ಟಣವು ವಿಶ್ವಗುರುಗಳಾದ ನಾಲ್ಕನೇ ಇನ್ನೋಸೆಂಟ್ ಮತ್ತು ಐದನೇ ಆಡ್ರಿಯನ್ ರವರೊಂದಿಗೆ ಸಂಬಂಧವನ್ನು ಹೊಂದಿತ್ತು. ಈ ಆಹ್ಲಾದಕರ ಆಶ್ಚರ್ಯವನ್ನು ಹೊತ್ತ ಪಟ್ಟಣವು, ವಿಶ್ವಗುರು ಫ್ರಾನ್ಸಿಸ್ ರವರ ಐಹಿಕ ಪ್ರಯಾಣದ ಕೊನೆಯವರೆಗೂ ಹೇಗೆ ಬದುಕಿದರು ಎಂಬುದನ್ನು ಪ್ರತಿಧ್ವನಿಸುತ್ತದೆ.
 

24 ಏಪ್ರಿಲ್ 2025, 13:13