ಚೇತರಿಸಿಕೊಳ್ಳುತ್ತಿರುವ ಪೋಪ್ ಫ್ರಾನ್ಸಿಸ್
ವರದಿ: ವ್ಯಾಟಿಕನ್ ನ್ಯೂಸ್
ಪೋಪ್ ಫ್ರಾನ್ಸಿಸ್ ಅವರ ಆರೋಗ್ಯದಲ್ಲಿ ದಿನೇ ದಿನೇ ಹೆಚ್ಚು ಚೇತರಿಕೆ ಕಂಡು ಬರುತ್ತಿದೆ. ಅವರು ಸದ್ಯ ತಮ್ಮ ನಿವಾಸ ಕಾಸಾ ಸಾಂತ ಮಾರ್ತದಲ್ಲಿ ಸುಧಾರಿಸಿಕೊಳ್ಳುತ್ತಿದ್ದು, ಗುಣಮುಖರಾಗುವತ್ತ ಮುಂದಡಿ ಇಡುತ್ತಿದ್ದಾರೆ ಎಂದು ವ್ಯಾಟಿಕನ್ ಮಾಧ್ಯಮ ಕಚೇರಿಯು ಪತ್ರಕರ್ತರಿಗೆ ಮಾಹಿತಿಯನ್ನು ನೀಡಿದೆ. ಇದೇ ವೇಳೆ ಮೊನ್ನೆ ಸಂತ ಪೇತ್ರರ ಚೌಕಕ್ಕೆ ಪೋಪ್ ಫ್ರಾನ್ಸಿಸ್ ಅವರು ನೀಡದ ಅಚ್ಚರಿಯ ಭೇಟಿಯ ಕುರಿತು ಮಾಹಿತಿ ನೀಡಿದೆ.
ವೈದ್ಯರು ಶಿಫಾರಸ್ಸು ಮಾಡಿರುವಂತೆ ಪೋಪ್ ಫ್ರಾನ್ಸಿಸ್ ಅವರು ಗುಣಮುಖರಾಗುತ್ತಿದ್ದಾರೆ ಎಂದು ವ್ಯಾಟಿಕನ್ ಮಾಧ್ಯಮ ಕಚೇರಿಯು ಹೇಳಿದೆ.
ಆಸ್ಪತ್ರೆಯಿಂದ ಬಿಡುಗಡೆಯಾದ ಹಲವು ದಿನಗಳ ನಂತರ ಪೋಪ್ ಫ್ರಾನ್ಸಿಸ್ ಅವರು ಮೊನ್ನೆ ಸಂತ ಪೇತ್ರರ ಚೌಕಕ್ಕೆ ಅಚ್ಚರಿಯ ಭೇಟಿಯನ್ನು ನೀಡದ ಬಳಿಕ ವ್ಯಾಟಿಕನ್ ಮಾಧ್ಯಮ ಕಚೇರಿಯು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಅದಾಗ್ಯೂ ಪೋಪ್ ಫ್ರಾನ್ಸಿಸ್ ಅವರ ಉಸಿರಾಟಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ಮುಂದುವರೆದಿದೆ ಎಂದು ಮಾಧ್ಯಮ ಕಚೇರಿಯು ತಿಳಿಸಿದೆ.
ಹಗಲಿನಲ್ಲಿ ಪೋಪ್ ಫ್ರಾನ್ಸಿಸ್ ಅವರು ಕೃತಕ ಆಮ್ಲಜನಕದೊಂದಿಗೆ ಉಸಿರಾಡುತ್ತಾರೆ. ರಾತ್ರಿ ವೇಳೆಯಲ್ಲಿ ಅವರಿಗೆ ಆಮ್ಲಜನಕದ ಮತ್ತೊಂದು ವಿಧದ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದು ವ್ಯಾಟಿಕನ್ ಮಾಧ್ಯಮ ಕಚೇರಿಯು ಮಾಹಿತಿಯನ್ನು ಪ್ರಕಟಿಸಿದೆ.
ಸೋಮವಾರ, ಪೋಪ್ ಅವರು ಕಾಸಾ ಸಾಂತಾ ಮಾರ್ತದಲ್ಲಿ ವ್ಯಾಟಿಕನ್ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೊ ಪರೋಲಿನ್ ಅವರನ್ನು ಬರಮಾಡಿಕೊಂಡರು ಹಾಗೂ ಚರ್ಚೆಯನ್ನು ನಡೆಸಿದರು.
ನಾಳೆ ಪೋಪ್ ಫ್ರಾನ್ಸಿಸ್ ಅವರು ಸಾರ್ವಜನಿಕ ಭೇಟಿಯಲ್ಲಿ ಭಾಗವಹಿಸುವುದಿಲ್ಲ. ಆದರೆ, ಎಂದಿನಂತೆ ಈ ಭೇಟಿಯಲ್ಲಿ ಪೋಪ್ ಫ್ರಾನ್ಸಿಸ್ ಅವರ ಸಂದೇಶವನ್ನು ಓದಲಾಗುವುದು.