MAP

ಸಂತ ಪೇತ್ರರ ಬಸಿಲಿಕಾಕ್ಕೆ ಅಚ್ಚರಿಯ ಭೇಟಿಯನ್ನು ನೀಡಿದ ಪೋಪ್ ಫ್ರಾನ್ಸಿಸ್

ಪೋಪ್ ಫ್ರಾನ್ಸಿಸ್ ಅವರು ಜೆಮೆಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ತಮ್ಮ ನಿವಾಸ ಕಾಸ ಸಂತ ಮಾರ್ತದಲ್ಲಿ ವಿಶ್ರಾಂತಿಯನ್ನು ತೆಗೆದುಕೊಳ್ಳುತ್ತಿದ್ದಾರೆ. ಅವರು ಚೇತರಿಸಿಕೊಳ್ಳುತ್ತಿರುವ ಹೊತ್ತಿನಲ್ಲೇ ಸಂತ ಪೇತ್ರರ ಬಸಿಲಿಕಾಕ್ಕೆ ಪೋಪ್ ಫ್ರಾನ್ಸಿಸ್ ಅವರು ಅಚ್ಚರಿಯ ಭೇಟಿಯನ್ನು ನೀಡಿದ್ದಾರೆ. ಪೋಪ್ ಸಂತ ಹತ್ತನೇ ಭಕ್ತಿನಾಥರ ಸಮಾಧಿಯ ಬಳಿ ಪ್ರಾರ್ಥಿಸಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಈ ಹಿಂದೆ, ಅಂದರೆ ಕಳೆದ ವಾರ ಪೋಪ್ ಫ್ರಾನ್ಸಿಸ್ ಅವರು ವ್ಯಾದಿಸ್ತರು ಹಾಗೂ ಆರೋಗ್ಯಕಾರ್ಯಕರ್ತರ ಜ್ಯೂಬಿಲಿ ಬಲಿಪೂಜೆಯ ನಂತರ ಸಂತ ಪೇತ್ರರ ಬಸಿಲಿಕಾಕ್ಕೆ ಅಚ್ಚರಿಯ ಭೇಟಿಯನ್ನು ನೀಡಿದ್ದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು.

ಪೋಪ್ ಅವರ ಭೇಟಿ ಸಂಕ್ಷಿಪ್ತವಾಗಿದ್ದರೂ, ಬೆಸಿಲಿಕಾದಲ್ಲಿ ಅವರ ಉಪಸ್ಥಿತಿಯ ಸುದ್ದಿ ಬೇಗನೆ ಹರಡಿತು ಮತ್ತು ಭಕ್ತಾಧಿಗಳು ಅವರನ್ನು ಸ್ವಾಗತಿಸಲು ಒಟ್ಟುಗೂಡಿದರು. ಅವರಲ್ಲಿ ಫ್ಯಾಬ್ರಿಕಾ ಡಿ ಸ್ಯಾನ್ ಪಿಯೆಟ್ರೋ ಪ್ರಸ್ತುತ ಕೈಗೊಂಡಿರುವ ಒಂದೆರಡು ಯೋಜನೆಗಳಲ್ಲಿ ರಕ್ಷಣಾತ್ಮಕ ಪರದೆಗಳ ಹಿಂದೆ ಕೆಲಸ ಮಾಡುತ್ತಿರುವ ಕೆಲವು ಕೆಲಸಗಾರರೂ ಸಹ ಇದ್ದರು. ಅವರೂ ಸಹ ಪೋಪ್ ಅವರ ಕೈಕುಲುಕಲು ಸಾಧ್ಯವಾಯಿತು.

ಅವರ ಆಶೀರ್ವಾದ ಪಡೆಯಲು ಮಕ್ಕಳು ಹತ್ತಿರ ಬಂದರು, ಮತ್ತು ಜುಬಿಲಿಗಾಗಿ ರೋಮ್‌ಗೆ ಭೇಟಿ ನೀಡುವ ಯಾತ್ರಿಕರ ಗುಂಪುಗಳು ಅವರನ್ನು ನೋಡಲು ಮುಂದೆ ಬಂದವು.

ಕೊನೆಯಲ್ಲಿ ಪೋಪ್ ಫ್ರಾನ್ಸಿಸ್ ಅವರು ಪೋಪ್ ಸಂತ ಹತ್ತನೇ ಭಕ್ತಿನಾಥರ ಸಮಾಧಿಯ ಬಳಿ ಪ್ರಾರ್ಥಿಸಲು ತೆರಳಿದರು.

10 ಏಪ್ರಿಲ್ 2025, 17:38