MAP

ಶನಿವಾರ ಬೆಳಿಗ್ಗೆಯವರೆಗೂ ಸಾರ್ವಜನಿಕ ದರ್ಶನಕ್ಕಾಗಿ ಪೋಪ್ ಫ್ರಾನ್ಸಿಸ್ ಅವರ ಪಾರ್ಥೀವ ಶರೀರವನ್ನು ಇರಿಸಲಾಗುವುದು

ಬುಧವಾರ ಬೆಳಿಗ್ಗೆ ಪೋಪ್ ಫ್ರಾನ್ಸಿಸ್ ಅವರ ಪಾರ್ಥೀವ ಶರೀರವನ್ನು ಸಂತ ಪೇತ್ರರ ಮಹಾದೇವಾಲಯಕ್ಕೆ ವರ್ಗಾಯಿಸಲಾಗುವುದು. ಶನಿವಾರ ಬೆಳಿಗ್ಗೆ ಅವರನ್ನು ಸಮಾಧಿ ಮಾಡುವವರೆಗೂ ಅವರ ಪಾರ್ಥೀವ ಶರೀರವನ್ನು ಸಾರ್ವಜನಿಕ ದರ್ಶನಕ್ಕಾಗಿ ಇರಿಸಲಾಗುವುದು.

ವರದಿ: ವ್ಯಾಟಿಕನ್ ನ್ಯೂಸ್

ಬುಧವಾರ ಬೆಳಿಗ್ಗೆ ಪೋಪ್ ಫ್ರಾನ್ಸಿಸ್ ಅವರ ಪಾರ್ಥೀವ ಶರೀರವನ್ನು ಸಂತ ಪೇತ್ರರ ಮಹಾದೇವಾಲಯಕ್ಕೆ ವರ್ಗಾಯಿಸಲಾಗುವುದು. ಶನಿವಾರ ಬೆಳಿಗ್ಗೆ ಅವರನ್ನು ಸಮಾಧಿ ಮಾಡುವವರೆಗೂ ಅವರ ಪಾರ್ಥೀವ ಶರೀರವನ್ನು ಸಾರ್ವಜನಿಕ ದರ್ಶನಕ್ಕಾಗಿ ಇರಿಸಲಾಗುವುದು.

ಪೋಪ್ ಫ್ರಾನ್ಸಿಸ್ ಅವರ ಅಂತಿಮ ಸಂಸ್ಕಾರದ ಬಲಿಪೂಜೆಯು ಏಪ್ರಿಲ್ 26, 2025 ರಂದು ಬೆಳಿಗ್ಗೆ 10:00 ಗಂಟೆಗೆ ವ್ಯಾಟಿಕನ್ನಿನ ಸಂತ ಪೇತ್ರರ ಮಹಾದೇವಾಲಯದ ಆವರಣದಲ್ಲಿ ನೆರವೇರುತ್ತದೆ ಎಂದು ವ್ಯಾಟಿಕನ್ ಮಾಧ್ಯಮ ಕಚೇರಿಯು ವರದಿ ಮಾಡಿದೆ.

ಕಾರ್ಡಿನಲ್ಲುಗಳ ಪರಿಷತ್ತಿನ ಡೀನ್ ಆಗಿರುವ ಕಾರ್ಡಿನಲ್ ಇವಾನ್ನಿ ಬತ್ತಿಸ್ತಾ ರೇ ಅವರು ಈ ಬಲಿಪೂಜೆಯನ್ನು ಅರ್ಪಿಸಲಿದ್ದಾರೆ. ಈ ಬಲಿಪೂಜೆಯಲ್ಲಿ ಜಗತ್ತಿನಾದ್ಯಂತ ಇರುವ ಪೇಟ್ರಿಯಾರ್ಕ್'ಗಳು, ಕಾರ್ಡಿನಲ್ಲುಗಳು, ಮಹಾಧರ್ಮಾಧ್ಯಕ್ಷರುಗಳು, ಧರ್ಮಾಧ್ಯಕ್ಷರುಗಳು ಹಾಗೂ ಗುರುಗಳು ಭಾಗವಹಿಸಲಿದ್ದಾರೆ.

ಪ್ರಾರ್ಥನೆಗಳೊಂದಿಗೆ ಆರಂಭವಾಗುವ ಬಲಿಪೂಜೆಯು, ಕೊನೆಯಲ್ಲಿ ಒಂಬತ್ತು ದಿನಗಳ ಶೋಕಾಚರಣೆ ಆರಂಭವಾಗುತ್ತದೆ. ತದನಂತರ ಪೋಪ್ ಫ್ರಾನ್ಸಿಸ್ ಅವರ ಪಾರ್ಥೀವ ಶರೀರವನ್ನು ಸಂತ ಪೇತ್ರರ ಮಹಾದೇವಾಲಯಕ್ಕೆ ಹಾಗೂ ನಂತರ ಸಂತ ಮೇರಿ ಮೇಜರ್ ಮಹಾದೇವಾಲಯಕ್ಕೆ ಸಮಾಧಿ ಮಾಡಲು ತೆಗೆದುಕೊಂಡು ಹೋಗಲಾಗುತ್ತದೆ.

ಬುಧವಾರ ಪೋಪ್ ಫ್ರಾನ್ಸಿಸ್ ಅವರ ಪಾರ್ಥೀವ ಶರೀರವನ್ನು ಹೊಂದಿರುವ ಪೆಟ್ಟಿಗೆಯನ್ನು ಮೆರವಣಿಗೆಯಲ್ಲಿ ಕಾಸಾ ಸಾಂತ ಮಾರ್ತ ಪ್ರಾರ್ಥನಾಲಯದಿಂದ ಸಂತ ಪೇತ್ರರ ಮಹಾದೇವಾಲಯಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ.

ಅಂದು ಕ್ಯಾಮರಲೆಂಗೋ ಕಾರ್ಡಿನಲ್ ಕೆವಿನ್ ಫಾರೆಲ್ ಅವರು ಪ್ರಾರ್ಥನೆಯ ನೇತೃತ್ವವನ್ನು ವಹಿಸಲಿದ್ದು, ಪ್ರಾರ್ಥನೆ ಮುಕ್ತಾಯವಾದ ನಂತರ ಸಾರ್ವಜನಿಕರು ಪೋಪ್ ಫ್ರಾನ್ಸಿಸ್ ಅವರಿಗೆ ಅಂತಿಮ ವಿದಾಯ ಹಾಗೂ ಗೌರರವನ್ನು ಸಲ್ಲಿಸಬಹುದಾಗಿದೆ.

22 ಏಪ್ರಿಲ್ 2025, 13:30