MAP

ಪೋಪ್: ಸಲೇಷಿಯನ್ನರು ಯುವ ಜನತೆಯನ್ನು ಯೇಸುವಿನೆಡೆಗೆ ಸೆಳೆಯಬೇಕು

ಸಂತ ಫ್ರಾನ್ಸಿಸ್ ಡಿ ಸೇಲ್ಸ್ ಧಾರ್ಮಿಕ ಸಭೆಯ ಸದಸ್ಯರು ತಮ್ಮ ೨೯ನೇ ಸಾರ್ವತ್ರಿಕ ಸಭೆಯನ್ನು ಹಮ್ಮಿಕೊಳ್ಳಲಿರುವ ಹಿನ್ನೆಲೆಯಲ್ಲಿ ಅವರನ್ನು ಉದ್ದೇಶಿಸಿ ಮಾತನಾಡಿರುವ ಪೋಪ್ ಫ್ರಾನ್ಸಿಸ್ ಅವರು ಯೇಸುಕ್ರಿಸ್ತರೆಡೆಗೆ ಪ್ರೀತಿಯನ್ನು ಹೆಚ್ಚಿಸಿಕೊಳ್ಳಿವಂತೆ ಹಾಗೂ ಯುವ ಜನತೆಯನ್ನೂ ಸಹ ಕ್ರಿಸ್ತರೆಡೆಗೆ ಸೆಳೆಯುವಂತೆ ಕರೆ ನೀಡಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಸಂತ ಡಾನ್ರ್ ಬೋಸ್ಕೋ ಧಾರ್ಮಿಕ ಸಭೆಯ ಸದಸ್ಯರು ತಮ್ಮ ೨೯ನೇ ಸಾರ್ವತ್ರಿಕ ಸಭೆಯನ್ನು ಹಮ್ಮಿಕೊಳ್ಳಲಿರುವ ಹಿನ್ನೆಲೆಯಲ್ಲಿ ಅವರನ್ನು ಉದ್ದೇಶಿಸಿ ಮಾತನಾಡಿರುವ ಪೋಪ್ ಫ್ರಾನ್ಸಿಸ್ ಅವರು ಯೇಸುಕ್ರಿಸ್ತರೆಡೆಗೆ ಪ್ರೀತಿಯನ್ನು ಹೆಚ್ಚಿಸಿಕೊಳ್ಳಿವಂತೆ ಹಾಗೂ ಯುವ ಜನತೆಯನ್ನೂ ಸಹ ಕ್ರಿಸ್ತರೆಡೆಗೆ ಸೆಳೆಯುವಂತೆ ಕರೆ ನೀಡಿದ್ದಾರೆ. 

ಡಾನ್ ಬೋಸ್ಕೋ ಧಾರ್ಮಿಕ ಸಭೆಯವರು ಇಟಲಿಯ ಟ್ಯೂರಿನ್ ನಗರದಲ್ಲಿ ತಮ್ಮ ಸಭೆಯ ಸಾರ್ವತ್ರಿಕ ಸಭೆಯನ್ನು ಹಮ್ಮಿಕೊಳ್ಳುತ್ತಿದ್ದಾರೆ. ಇದೇ ವೇಳೆ ತಮ್ಮ ಧಾರ್ಮಿಕ ಸಭೆಯಿಂದ ಮೊದಲ ಬಾರಿಗೆ ಅರ್ಜೆಂಟೀನಾ ದೇಶಕ್ಕೆ ಮಿಷನರಿಗಳನ್ನು ಕಳುಹಿಸಿದಕ್ಕೆ 150 ವರ್ಷಗಳಾದ ಹಿನ್ನೆಲೆಯಲ್ಲಿ ಇದನ್ನೂ ಸಹ ಅವರು ಆಚರಿಸುತ್ತಿದ್ದಾರೆ. 

ವ್ಯಾಟಿಕನ್ನಿನ ತಮ್ಮ ಅಧಿಕೃತ ನಿವಾಸ ಕಾಸಾ ಸಾಂತ ಮಾರ್ತಾದಲ್ಲಿ ವಿಶ್ರಾಂತಿಯನ್ನು ತೆಗೆದುಕೊಳ್ಳುತ್ತಿರುವ ಪೋಪ್ ಫ್ರಾನ್ಸಿಸ್ ಅವರು ಅಲ್ಲಿಂದಲೇ ಈ ಧಾರ್ಮಿಕ ಸಭೆಯ ಸದಸ್ಯರಿಗೆ ಸಂದೇಶವನ್ನು ನೀಡಿದ್ದಾರೆ. 

2025 ರಲ್ಲಿ ಅಂದರೆ ಇದೇ ವರ್ಷ ಮಾಲ್ಟಾದಲ್ಲಿ ಜನಿಸಿದ ಫಾದರ್ ಫೇಬಿಯೋ ಅಟ್ಟರ್ಡ್ ಅವರು ಸಲೇಷಿಯನ್ ಸಭೆಯ ರೆಕ್ಟರ್ ಮೇಜರ್ ಆಗಿ ಚುನಾಯಿತರಾಗಿದ್ದರು.

"ಪವಿತ್ರಾತ್ಮರನ್ನು ಆಲಿಸಿ, ಬದ್ಧತೆ ಹಾಗೂ ಪ್ರೀತಿಯಿಂದ ಮುನ್ನಡೆಯುವಂತೆ ಹಾಗೂ ಜನತೆಯನ್ನು ವಿಶೇಷವಾಗಿ ಯುವ ಜನತೆಯನ್ನು ಮುನ್ನಡೆಸುವಂತೆ" ಪೋಪ್ ಫ್ರಾನ್ಸಿಸ್ ಅವರು ಈ ಸಭೆಯ ಸದಸ್ಯರಿಗೆ ಕರೆ ನೀಡಿದ್ದಾರೆ. ಮುಂದುವರೆದು ಮಾತನಾಡಿರುವ ಅವರು ಸಾರ್ವತ್ರಿಕ ಸಭೆಗಾಗಿ ಅವರು ಆರಿಸಿಕೊಂಡಿರುವ ಶೀರ್ಷಿಕೆಗೆ ಹರ್ಷವನ್ನು ವ್ಯಕ್ತಪಡಿಸಿದ್ದಾರೆ. ಈ ಮೂಲಕ ಅವರು ಯೇಸು ಕ್ರಿಸ್ತರೆಡೆಗೆ ಯುವ ಜನತೆಯನ್ನು ಸೆಳೆಯುವ ಕಾರ್ಯವನ್ನು ಮುಂದುವರೆಸುವಂತೆ ಹೇಳಿದರು.

ಅಂತಿಮವಾಗಿ ಪೋಪ್ ಫ್ರಾನ್ಸಿಸ್ ಅವರು "ನಿಮ್ಮನ್ನೂ ಹಾಗೂ ನಿಮ್ಮ ಸಾರ್ವಜನಿಕ ಸಭೆಯನ್ನು ನಾನು ಹೃದಯಾಂತರಾಳದಿಂದ ಆಶೀರ್ವದಿಸುತ್ತೇನೆ" ಎಂದು ಹೇಳಿದ್ದಾರೆ.   

07 ಏಪ್ರಿಲ್ 2025, 16:34