ಐಕ್ಯತೆಯ ಪ್ರಾರ್ಥನೆಗಳಿಗಾಗಿ ಧನ್ಯವಾದ ತಿಳಿಸಿದ ಪೋಪ್ ಫ್ರಾನ್ಸಿಸ್
ವರದಿ: ವ್ಯಾಟಿಕನ್ ನ್ಯೂಸ್
ಗರಿಗಳ ಭಾನುವಾರಂದು ಪೋಪ್ ಫ್ರಾನ್ಸಿಸ್ ಅವರು ಭಕ್ತಾಧಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ವೇಳೆ ಅವರು ಪ್ರಭುವಿನ ಯಾತನೆಯಿಂದ ಸ್ಪೂರ್ತಿಗೊಂಡು, ಅವರ ದೈವಿಕ ಅಪ್ಪುಗೆಯಿಂದ ಆವೃತ್ತರಾಗಯವಂತೆ ಭಕ್ತಾಧಿಗಳಿಗೆ ಕರೆ ನೀಡಿದ್ದಾರೆ.
ದುಃಖ ಮತ್ತು ದೌರ್ಬಲ್ಯದ ಸಮಯದಲ್ಲಿ "ಹತಾಶೆಗೆ ಒಳಗಾಗದಂತೆ ಅಥವಾ ಕಹಿಯಿಂದ ನಮ್ಮನ್ನು ಮುಚ್ಚಿಕೊಳ್ಳದಂತೆ" ನಮಗೆ ಸಹಾಯ ಮಾಡುವ ದೇವರ ದಯೆಯ ಅಪ್ಪುಗೆಯನ್ನು ಭಕ್ತಧಿಗಳಿಗೆ ನೆನಪಿಸುತ್ತಾ ಪೋಪ್ ಫ್ರಾನ್ಸಿಸ್ ಗರಿಗಳ ಭಾನುವಾರವನ್ನು ಆಚರಿಸಿದರು.
ಪತ್ರಕರ್ತರಿಗೆ ವ್ಯಾಟಿಕನ್ ಮಾಧ್ಯಮ ಕಚೇರಿಯು ಪೋಪ್ ಫ್ರಾನ್ಸಿಸ್ ಅವರು ಸಂದೇಶದ ಪ್ರತಿಗಳನ್ನು ವಿತರಿಸಿದರು. ಪೋಪ್ ಫ್ರಾನ್ಸಿಸ್ ಅವರು ತಮ್ಮ ಸಂದೇಶದಲ್ಲಿ ಭಕ್ತಾಧಿಗಳಿಗೆ ಲೂಕನ ಶುಭಸಂದೇಶದ ಚಿಂತನೆಯ ಕುರಿತು ವಿವರಿಸಿದ್ದಾರೆ.
ಪೋಪ್ ಫ್ರಾನ್ಸಿಸ್ ಅವರು ತಮ್ಮ ಪ್ರಬೋಧನೆಯಲ್ಲಿ ಪ್ರಭುವಿನ ಕರುಣೆಯ ಕುರಿತು ಹಾಗೂ ಅವರ ಪಾಡುಗಳ ಕುರಿತು ನಾವು ಧ್ಯಾನಿಸಬೇಕು ಹಾಗೂ ಅವರಿಂದ ನಾವು ದಯೆಯ ಸ್ಪೂರ್ತಿಯನ್ನು ಪಡೆಯಬೇಕು ಎಂದು ಹೇಳಿದ್ದಾರೆ. ಕೊನೆಯದಾಗಿ ಪೋಪ್ ಫ್ರಾನ್ಸಿಸ್ ಅವರು ತಮಗಾಗಿ ಪ್ರಾರ್ಥಿಸುವಂತೆ ಹಾಗೂ ಯಾತನೆ ಪಡುತ್ತಿರುವ ಎಲ್ಲರಿಗಾಗಿಯೂ ಪ್ರಾರ್ಥಿಸುವಂತೆ ಕರೆ ನೀಡಿದರು.