ಭರವಸೆಯಿಂದಿರುವಂತೆ ಓಪುಸ್ ದೇಯಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿದ ಪೋಪ್ ಫ್ರಾನ್ಸಿಸ್
ವರದಿ: ವ್ಯಾಟಿಕನ್ ನ್ಯೂಸ್
ಯೂನಿವ್ 2025 ಅಂತರಾಷ್ಟ್ರೀಯ ಕಾಂಗ್ರೆಸ್'ನಲ್ಲಿ ಭಾಗವಹಿಸಲು ಆಗಮಿಸಿರುವ ಓಪುಸ್ ದೇಯಿ ವಿದ್ಯಾರ್ಥಿಗಳನ್ನು ಕುರಿತು ಪೋಪ್ ಫ್ರಾನ್ಸಿಸ್ ಅವರು ಸಂದೇಶವನ್ನು ನೀಡಿದ್ದಾರೆ. ಯೇಸುಕ್ರಿಸ್ತರ ಶುಭಸಂದೇಶವನ್ನು ಈ ಜಗತ್ತಿನ ಭರವಸೆಯ ಸಂದೇಶವಾಗಿ ತರಬೇಕೆಂದು ಅವರಿಗೆ ಕರೆ ನೀಡಿದ್ದಾರೆ.
ಪತ್ರದ ಮೂಲಕ ಪೋಪ್ ಫ್ರಾನ್ಸಿಸ್ ಅವರು ಈ ವಿದ್ಯಾರ್ಥಿಗಳಿಗೆ ಸಂದೇಶವನ್ನು ನೀಡಿದ್ದಾರೆ.
ಸ್ಪ್ಯಾನಿಷ್ ಭಾಷೆಯಲ್ಲಿ ಬರೆದಿರುವ ಪತ್ರದಲ್ಲಿ ಪೋಪ್ ಫ್ರಾನ್ಸಿಸ್ ಅವರು ಓಪುಸ್ ದೇಯಿ ವಿದ್ಯಾರ್ಥಿಗಳಿಗೆ ಯೇಸು ಕ್ರಿಸ್ತರ ಶುಭ ಸಂದೇಶವನ್ನು ಈ ಜಗತ್ತಿಗೆ ನೀವು ಭರವಸೆಯ ಸಂದೇಶವನ್ನಾಗಿ ತರಬೇಕು ಎಂದು ಕರೆ ನೀಡಿದ್ದಾರೆ. ಈ ವರ್ಷ ಓಪುಸ್ ದೇಯಿ ತಮ್ಮ ಸಂಸ್ಥಾಪಕರಾದ ಸಂತ ಹೊಸೆ ಮರಿಯ ಎಸ್ಕ್ರೀವಾ ಅವರ ಯಾಜಕದೀಕ್ಷೆಯ ನೂರು ವರ್ಷಗಳ ಆಚರಣೆಯನ್ನು ನಡೆಸುತ್ತಿದೆ.
"ನಿಮ್ಮ ಸಂತೋಷದಲ್ಲಿ ನಾನು ಭಾಗಿಯಾಗುತ್ತೇನೆ" ಎಂದು ಪತ್ರದಲ್ಲಿ ಹೇಳಿರುವ ಪೋಪ್ ಫ್ರಾನ್ಸಿಸ್ ಅವರು, "ಈ ತೀರ್ಥಯಾತ್ರೆ ಮತ್ತು ಸಹೋದರತ್ವದ ಭೇಟಿಯ ಸಮಯವು ಮರಣ ಹೊಂದಿದ ಮತ್ತು ಪುನರುತ್ಥಾನಗೊಂಡ ಯೇಸುಕ್ರಿಸ್ತನ ಸುವಾರ್ತೆಯನ್ನು ಎಲ್ಲರಿಗೂ ತರಲು ನಿಮ್ಮನ್ನು ಪ್ರೇರೇಪಿಸಲಿ ಎಂದು ಭಗವಂತನನ್ನು ಕೇಳಿಕೊಳ್ಳುತ್ತೇನೆ ಎಂದು ನುಡಿದಿದ್ದಾರೆ.
ಅಂತಿಮವಾಗಿ ಪೋಪ್ ಫ್ರಾನ್ಸಿಸ್ ಅವರು "ಪ್ರಭು ನಿಮ್ಮನ್ನು ಆಶೀರ್ವದಿಸಲಿ ಹಾಗೂ ಮಾತೆ ಮರಿಯಮ್ಮನವರು ನಿಮ್ಮನ್ನು ಅವರ ಮಧ್ಯಸ್ಥಿಕೆಯಿಂದ ಪೊರೆಯಲಿ" ಎಂಬ ಸಂದೇಶದೊಂದಿಗೆ ಪೋಪ್ ಫ್ರಾನ್ಸಿಸ್ ಅವರು ತಮ್ಮ ಪತ್ರವನ್ನು ಮುಕ್ತಾಯಗೊಳಿಸುತ್ತಾರೆ.