MAP

ಪೋಪ್ ಫ್ರಾನ್ಸಿಸ್ ನಿಧನ

ಪವಿತ್ರ ತಂದೆ ಪೋಪ್ ಫ್ರಾನ್ಸಿಸ್ ಅವರು ಇಂದು ಬೆಳಿಗ್ಗೆ ತಮ್ಮ ಅಧಿಕೃತ ನಿವಾಸ ಕಾಸ ಸಂತ ಮಾರ್ತದಲ್ಲಿ ನಿಧನರಾದರೆಂದು ವ್ಯಾಟಿಕನ್ ಮಾಧ್ಯಮವು ತಿಳಿಸಿದೆ.

ವರದಿ: ವ್ಯಾಟಿಕನ್ ನ್ಯೂಸ್

ಪೋಪ್ ಫ್ರಾನ್ಸಿಸ್ ಅವರು ನಿಧನರಾಗಿದ್ದಾರೆ ಎಂದು ಕಾರ್ಡಿನಲ್ ಕೆವಿನ್ ಫಾರೆಲ್ ಅವರು ಇಂದು ಈ ಕೆಳಗಿನ ಮಾತುಗಳೊಂದಿಗೆ ಘೋಷಿಸಿದರು.

"ಆತ್ಮೀಯ ಸಹೋದರ ಸಹೋದರಿಯರೇ, ನಮ್ಮ ಪವಿತ್ರ ತಂದೆ ಪೋಪ್ ಫ್ರಾನ್ಸಿಸ್ ಅವರ ನಿಧನವನ್ನು ನಾನು ತೀವ್ರ ದುಃಖದಿಂದ ಘೋಷಿಸುತ್ತಿದ್ದೇನೆ. ಇಂದು ಬೆಳಿಗ್ಗೆ 7:35 ಕ್ಕೆ, ಪೋಪ್ ಫ್ರಾನ್ಸಿಸ್ ಅವರು ಸ್ವರ್ಗೀಯ ತಂದೆಯ ಮನೆಗೆ ಮರಳಿದರು. ಅವರ ಇಡೀ ಜೀವನವು ಭಗವಂತನ ಮತ್ತು ಅವರ ಧರ್ಮಸಭೆಯ ಸೇವೆಗೆ ಸಮರ್ಪಿತವಾಗಿತ್ತು. ಅವರು ಸುವಾರ್ತೆಯ ಮೌಲ್ಯಗಳನ್ನು ನಿಷ್ಠೆ, ಧೈರ್ಯ ಮತ್ತು ಸಾರ್ವತ್ರಿಕ ಪ್ರೀತಿಯಿಂದ, ವಿಶೇಷವಾಗಿ ಬಡವರು ಮತ್ತು ಅತ್ಯಂತ ಅಂಚಿನಲ್ಲಿರುವವರ ಪರವಾಗಿ ಬದುಕಲು ನಮಗೆ ಕಲಿಸಿದರು. ಅವರ ಆತ್ಮವನ್ನು ಪ್ರಭುವಿನ ಅನಂತ ಪ್ರೀತಿ ಹಾಗೂ ಕರುಣೆಗೆ ಕೃತಜ್ಞತೆಯಿಂದ ಸಮರ್ಪಿಸುತ್ತೇವೆ."

ಪೋಪ್ ಫ್ರಾನ್ಸಿಸ್ ಅವರು ಫೆಬ್ರವರಿ ತಿಂಗಳಲ್ಲಿ ನ್ಯುಮೋನಿಯಾಕ್ಕೆ ಚಿಕಿತ್ಸೆ ಪಡೆದುಕೊಳ್ಳಲು ರೋಮ್ ನಗರದ ಜೆಮೆಲ್ಲಿ ಆಸ್ಪತ್ರೆಗೆ ದಾಖಲಾಗುದ್ದರು. ಸುಮಾರು 33 ದಿನಗಳ ಕಾಲ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದು, ಕಳೆದ ಎರಡು ವಾರಗಳ ಹಿಂದೆ ವ್ಯಾಟಿಕನ್ನಿಗೆ ಮರಳಿದ್ದರು.

21 ಏಪ್ರಿಲ್ 2025, 10:56