ಪವಿತ್ರ ವಾರಕ್ಕೆ ಮುಂಚಿತವಾಗಿ ಸಂತ ಮೇರಿ ಮೇಜರ್ ದೇವಾಲಯದಲ್ಲಿ ಪ್ರಾರ್ಥಿಸಿದ ಪೋಪ್ ಫ್ರಾನ್ಸಿಸ್
ವರದಿ: ವ್ಯಾಟಿಕನ್ ನ್ಯೂಸ್
ಪವಿತ್ರ ವಾರವು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಪೋಪ್ ಫ್ರಾನ್ಸಿಸ್ ಅವರು ರೋಮ್ ನಗರದ ಸಂತ ಮೇರಿ ಮೇಜರ್ ದೇವಾಲಯದಲ್ಲಿ ಪ್ರಾರ್ಥಿಸಿದ್ದಾರೆ.
ವ್ಯಾಟಿಕನ್ ಮಾಧ್ಯಮ ಕಚೇರಿಯ ವರದಿಯ ಪ್ರಕಾರ ಪೋಪ್ ಫ್ರಾನ್ಸಿಸ್ ಅವರು ಸಂತ ಮೇರಿ ಮೇಜರ್ ದೇವಾಲಯದಲ್ಲಿ ಮಾತೆ ಮರಿಯಮ್ಮನವರ ಸ್ವರೂಪದ ಮುಂದೆ ಪ್ರಾರ್ಥಿಸಿದರು.
ಪೋಪ್ ಫ್ರಾನ್ಸಿಸ್ ಅವರು ಈ ದೇವಾಲಯದೆಡೆಗೆ ವಿಶೇಷ ಭಕ್ತಿಯನ್ನು ಹೊಂದಿದ್ದಾರೆ. ರೋಮ್ ನಗರದ ಜೆಮೆಲ್ಲಿ ಆಸ್ಪತ್ರೆಯಿಂದ ಹಿಂತಿರುಗುವ ವೇಳೆ ದೇವಾಲಯದ ಹೊರಗಡೆ ಕೆಲವು ಸೆಕೆಂಡುಗಳ ಕಾಲ ನಿಂತು ಪೋಪ್ ಫ್ರಾನ್ಸಿಸ್ ಅವರು ಪ್ರಾರ್ಥಿಸಿದರು. ಅವರು ತಂದಿದ ಹೂಗುಚ್ಛವನ್ನು ಈ ದೇವಾಲಯದ ಪ್ರಧಾನ ಗುರುಗಳಿಗೆ ನೀಡಿದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಪೋಪ್ ಫ್ರಾನ್ಸಿಸ್ ಅವರು ಪೋಪ್ ಆದಾಗಿನಿಂದಲೂ ಸಹ ಪ್ರತಿ ಬಾರಿ ಪ್ರೇಷಿತ ಪ್ರಯಾಣವನ್ನು ಕೈಗೊಳ್ಳುವ ಮೊದಲು ಹಾಗೂ ಪ್ರೇಷಿತ ಪ್ರಯಾಣವನ್ನು ಮುಗಿಸಿ ಬಂದ ನಂತರ ಈ ದೇವಾಲಯಕ್ಕೆ ಬಂದು ಮಾತೆ ಮರಿಯಮ್ಮನವರ ಸ್ವರೂಪದ ಮುಂದೆ ಪ್ರಾರ್ಥಿಸುವ ವಾಡಿಕೆಯನ್ನಿರಿಸಿಕೊಂಡಿದ್ದಾರೆ.