MAP

ಲ್ಯಾಟರನ್ ವಿಶ್ವವಿದ್ಯಾನಿಲಯಕ್ಕೆ ಬೆಂಬಲ ನೀಡುವಂತೆ ಧರ್ಮಾಧ್ಯಕ್ಷರಿಗೆ ಪೋಪ್ ಫ್ರಾನ್ಸಿಸ್ ಕರೆ

ಪೋಪ್ ಫ್ರಾನ್ಸಿಸ್ ಅವರು ವಿಶ್ವ ಧರ್ಮಸಭೆಯ ಸಂಶೋಧನೆಯ ಆಗರವಾಗಿರುವ ಲ್ಯಾಟರನ್ ವಿಶ್ವವಿದ್ಯಾನಿಲಯಕ್ಕೆ ನೆರವು ಹಾಗೂ ಬೆಂಬಲವನ್ನು ನೀಡುವಂತೆ ವಿಶ್ವದಾದ್ಯಂತ ಎಲ್ಲಾ ಧರ್ಮಾಧ್ಯಕ್ಷರುಗಳಿಗೆ ಕರೆ ನೀಡಿದ್ದಾರೆ. ಈ ತಮ್ಮ ಸಂದೇಶವನ್ನು ಅವರು ಎಲ್ಲಾ ದೇಶಗಳ ಪ್ರೇಷಿತ ರಾಯಭಾರ ಕಚೇರಿಗಳಿಗೆ ಕಳುಹಿಸಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಪೋಪ್ ಫ್ರಾನ್ಸಿಸ್ ಅವರು ವಿಶ್ವ ಧರ್ಮಸಭೆಯ ಸಂಶೋಧನೆಯ ಆಗರವಾಗಿರುವ ಲ್ಯಾಟರನ್ ವಿಶ್ವವಿದ್ಯಾನಿಲಯಕ್ಕೆ ನೆರವು ಹಾಗೂ ಬೆಂಬಲವನ್ನು ನೀಡುವಂತೆ ವಿಶ್ವದಾದ್ಯಂತ ಎಲ್ಲಾ ಧರ್ಮಾಧ್ಯಕ್ಷರುಗಳಿಗೆ ಕರೆ ನೀಡಿದ್ದಾರೆ. ಈ ತಮ್ಮ ಸಂದೇಶವನ್ನು ಅವರು ಎಲ್ಲಾ ದೇಶಗಳ ಪ್ರೇಷಿತ ರಾಯಭಾರ ಕಚೇರಿಗಳಿಗೆ ಕಳುಹಿಸಿದ್ದಾರೆ.  

ಲ್ಯಾಟರನ್ ವಿಶ್ವವಿದ್ಯಾಲಯವು ವಸಂತ ಕಾಲದ ಕಾರ್ಯಕ್ರಮಗಳಿಗೆ ಸಿದ್ಧವಾಗುತ್ತಿದ್ದು, ತನ್ನ ವಿವಿಧ ಕೋರ್ಸುಗಳಿಗೆ ಜಾಹೀರಾತನ್ನು ವಿದ್ಯಾರ್ಥಿಗಳಿಗೆ ನೀಡಲು ಸನ್ನಧ್ಧವಾಗುತ್ತಿದೆ. ಇದು ವಿವಿಧ ಪದವಿ ಕೋರ್ಸುಗಳಿಗೆ ಪ್ರವೇಶಾತಿಯನ್ನು ನೀಡುತ್ತಿದೆ. 

ಲ್ಯಾಟರನ್ ವಿಶ್ವವಿದ್ಯಾನಿಲಯದ ಮುಂಬರುವ ಕಾರ್ಯಕ್ರಮಗಳ ಪಟ್ಟಿಯಲ್ಲಿ ದೈವಶಾಸ್ತ್ರದ ಕುರಿತ ಅಂತರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜಿಸುತ್ತಿದೆ. ಕಳೆದ ವಾರ ನಡೆದ ದೈವಶಾಸ್ತ್ರಜ್ಞರ ಸಭೆಯಲ್ಲಿ ಈ ಕುರಿತು ಪ್ರಸ್ತಾಪವಾಗಿದ್ದು, ಇದರಲ್ಲಿ ವಿವಿಧ ದೇಶಗಳಿಂದ ದೈವಶಾಸ್ತ್ರಜ್ಞರು ಪಾಲ್ಗೊಳ್ಳಲಿದ್ದಾರೆ. 

ಪೊಂಟಿಫಿಕಲ್ ಲ್ಯಾಟರನ್ ವಿಶ್ವವಿದ್ಯಾನಿಲಯವು ತನ್ನ ಆರಂಭದಿಂದ ಈವರೆಗೂ ಸಹ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿಕೊಂಡು ಬಂದಿದೆ. ವಿಶೇಷವಾಗಿ ಧರ್ಮಸಭೆಯ ಸೇವಾಕಾರ್ಯದಲ್ಲಿ ತನ್ನದೇ ಆದ ಕೊಡುಗೆಯನ್ನೂ ಸಹ ನೀಡಿದೆ. ಧರ್ಮಸಭೆಯ ಅತ್ಯುತ್ತಮ ವಿಶ್ವವಿದ್ಯಾನಿಲಯಗಳಲ್ಲಿ ಇದೊಂದಾಗಿದೆ.

ವಿಶ್ವದ ವಿವಿಧ ದೇಶಗಳ ಪ್ರೇಷಿತ ರಾಯಭಾರಿ ಕಚೇರಿಗಳಿಗೆ ಪತ್ರವನ್ನು ಬರೆದಿರುವ ಪೋಪ್ ಫ್ರಾನ್ಸಿಸ್ ಅವರು "ಧರ್ಮಸಭೆಯ ಸುವಾರ್ತಾ ಪ್ರಸಾರ ಕಾರ್ಯದಲ್ಲಿ ಲ್ಯಾಟರನ್ ವಿಶ್ವವಿದ್ಯಾನಿಯಲದ ಕೊಡುಗೆ ಮಹತ್ತರವಾಗಿದೆ. ಇದಕ್ಕಾಗಿ ನಾವು ಇದನ್ನು ಬೆಂಬಲಿಸಬೇಕು. ಏಕೆಂದರೆ ನಮಗೆ ಉತ್ತಮ ದೈವಶಾಸ್ತ್ರೀಯ ಹಾಗೂ ಆಧ್ಯಾತ್ಮಿಕ ಬುನಾದಿ ಇದ್ದರೆ ಮಾತ್ರ, ಧರ್ಮಸಭೆಯು ಸುವಾರ್ತಾ ಪ್ರಸಾರ ಕಾರ್ಯವನ್ನು ಪರಿಣಾಮಕಾರಿಯಾಗಿ ಮಾಡಬಹುದು ಎಂದು ಪೋಪ್ ಫ್ರಾನ್ಸಿಸ್ ಅವರು ತಮ್ಮ ಸಂದೇಶದಲ್ಲಿ ಹೇಳಿದ್ದಾರೆ.

ಲ್ಯಾಟರನ್ ವಿಶ್ವವಿದ್ಯಾನಿಲಯವು ಕಳೆದ 250 ವರ್ಷಗಳಿಂದ ಧರ್ಮಸಭೆಗೆ ಅತ್ಯುತ್ತಮ ದೈವಶಾಸ್ತ್ರಜ್ಞರನ್ನು ನೀಡುತ್ತಾ ಬರುತ್ತಿದೆ ಎಂಬುದನ್ನು ನಾವಿಲ್ಲಿ ಗಮನಿಸಬೇಕು.   

07 ಏಪ್ರಿಲ್ 2025, 17:53