ಪೋಪ್: ವ್ಯಾದಿಸ್ತರ ಹಾಸಿಗೆಯೂ ಸಹ ಪವಿತ್ರ ಸ್ಥಳವಾಗಿ ಪರಿವರ್ತನೆಯಾಗಬಹುದು
ವರದಿ: ವ್ಯಾಟಿಕನ್ ನ್ಯೂಸ್
ವ್ಯಾದಿಸ್ತರ ಜ್ಯೂಬಿಲಿ ಹಿನ್ನೆಲೆಯಲ್ಲಿ ಪೋಪ್ ಫ್ರಾನ್ಸಿಸ್ ಅವರು ತಮ್ಮ ಪ್ರಬೋಧನೆಯಲ್ಲಿ ಚಿಂತನೆಯನ್ನು ಹಂಚಿಕೊಂಡಿದ್ದಾರೆ. ವ್ಯಾದಿಸ್ತರನ್ನು ಉದ್ದೇಶಿಸಿ ಮಾತನಾಡಿದ ವಿಶ್ವಗುರುಗಳು ವ್ಯಾದಿಸ್ತರ ಹಾಸಿಗೆಯೂ ಸಹ ಪವಿತ್ರ ಸ್ಥಳವಾಗಿ ಪರಿವರ್ತನೆಯಾಗಬಹುದು ಎಂದು ಹೇಳುವ ಮೂಲಕ ವಿಶ್ವದ ಎಲ್ಲಾ ವ್ಯಾದಿಸ್ತರಿಗೆ ಭರವಸೆಯನ್ನು ತುಂಬಿದ್ದಾರೆ. ಇಲ್ಲಿ ದಾನಶೀಲತೆಯ ಅನ್ಯತೆಯನ್ನು ಸುಟ್ಟುಹಾಕಿ, ಕೃತಜ್ಞತೆಯು ಭರವಸೆಯನ್ನು ಹುಟ್ಟುಹಾಕುತ್ತದೆ ಎಂದು ಹೇಳಿದ್ದಾರೆ.
ಪೋಪ್ ಫ್ರಾನ್ಸಿಸ್ ಅವರು ಇದೇ ಮೊದಲ ಬಾರಿಗೆ ಆಸ್ಪತ್ರೆಯಿಂದ ಬಂದ ನಂತರ ಜ್ಯೂಬಿಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಪೋಪ್ ಫ್ರಾನ್ಸಿಸ್ ಅವರ ಪ್ರಬೋಧನೆಯನ್ನು ಆರ್ಚ್'ಬಿಷಪ್ ರಿನೋ ಫಿಶೆಲ್ಲಾ ಅವರು ಜೋರಾಗಿ ನರೆದಿದ್ದ ಭಕ್ತಾಧಿಗಳಿಗಾಗಿ ಓದಿದರು. ಪೋಪ್ ಫ್ರಾನ್ಸಿಸ್ ತಮ್ಮ ಪ್ರಬೋಧನೆಯಲ್ಲಿ ಅಂದು ದಾಸ್ಯದಲ್ಲಿದ್ದ ಇಸ್ರಯೇಲರ ಪರಿಸ್ಥಿತಿಯನ್ನು ಅವಲೋಕಿಸುವಂತೆ ಕರೆ ನೀಡಿದರು. ಅಂದು ಇಸ್ರಯೇಲರು ನೂರಾರು ಸಂಕಷ್ಟಗಳಿಗೆ ತುತ್ತಾಗಿದ್ದರು. ಅವರಲ್ಲಿ ಭರವಸೆ ಎಂಬುದೇ ಇರದಾಗಿತ್ತು. ಅವರ ಸಂಕಷ್ಟದಲ್ಲಿಯೇ ಅವರು ಒಂದು ಹೊಸ ರಾಷ್ಟ್ರವಾದರು" ಎಂದು ಹೇಳಿದರು.
ಪೋಪ್ ಫ್ರಾನ್ಸಿಸ್ ಅವರು ತಮ್ಮ ಪ್ರಬೋಧನೆಯಲ್ಲಿ ಇಂದಿನ ಶುಭಸಂದೇಶದ ಉಲ್ಲೇಖವನ್ನು ಮಾಡಿ, ಪಾಪವನ್ನು ಮಾಡಿದ ಮಹಿಳೆಯನ್ನು ಜನರು ಕಲ್ಲುಗಳಿಂದ ಹೊಡೆಯುವಾಗ, ಯೇಸು ಕ್ರಿಸ್ತರು ತಮ್ಮ ಆಂತರಿಕ ಅಧಿಕಾರದಿಂದ ಕಲ್ಲು ಹೊಡೆಯುವವರಿಗೆ "ನಿಮ್ಮಲ್ಲಿ ಯಾವುದೇ ಪಾಪ ಮಾಡದವರು ಆಕೆಗೆ ಕಲ್ಲನ್ನು ಹೊಡೆಯಬಹುದು" ಎಂದು ಹೇಳಿದಾಗ, ಆ ಜನರು ಅಲ್ಲಿಂದ ಹೊರಟು ಹೋದರು. "ಯೇಸು ಸ್ವಾಮಿ ಆಕೆಯನ್ನು ಕುರಿತು ಆಕೆಯ ಪಾಪಗಳನ್ನು ಕ್ಷಮಿಸಲಾಗಿದೆ. ಆಕೆ ರಕ್ಷಣೆಯನ್ನು ಹೊಂದಿದ್ದಾಳೆ" ಎಂದು ಹೇಳಿದರು.
ಈ ಎರಡೂ ಸನ್ನಿವೇಷಗಳನ್ನು ಸಮೀಕರಿಸುತ್ತಾ ಮಾತನಾಡಿರುವ ಪೋಪ್ ಫ್ರಾನ್ಸಿಸ್ ಅವರು "ದೇವರು ನಾವು ಉತ್ತಮರಾಗುವವರೆಗೂ ಕಾಯುವುದಿಲ್ಲ. ಅವರು ನಮ್ಮ ಗಾಯಗಳ ಆಳಕ್ಕೆ, ಅವುಗಳ ಒಳಗೆ ಇಳಿದು ಬರುತ್ತಾರೆ. ಅವರು ನಮ್ಮ ಯಾತನೆಯನ್ನು ನೋಡುವುದಿಲ್ಲ, ಬದಲಿಗೆ ನಮ್ಮ ಬಾಗಿಲುಗಳನ್ನು ತಟ್ಟುತ್ತಾರೆ" ಎಂದು ಹೇಳಿದ್ದಾರೆ.
ಪೋಪ್ ಫ್ರಾನ್ಸಿಸ್ ಅವರು ಇದೇ ವೇಳೆ ವ್ಯಾದಿಸ್ತರ ಕುರಿತು ಹಾಗೂ ಅವರು ಅನುಭವಿಸುವ ಕಷ್ಟಗಳ ಕುರಿತು ಮಾತನಾಡಿದರು. ಇದೇ ವೇಳೆ ತಮ್ಮದೇ ಸ್ವಂತ ಖಾಯಿಲೆಯ ಕುರಿತೂ ಸಹ ಅವರು ಮಾತನಾಡಿದರು. ವ್ಯಾದಿಸ್ತರನ್ನು ಹಾಗೂ ಯಾತನೆಯನ್ನು ಅನುಭವಿಸುತ್ತಿರುವ ಎಲ್ಲರಿಗೂ ವೈದ್ಯಕೀಯ ಸೇವೆಯನ್ನು ನೀಡುತ್ತಿರುವ ವೈದ್ಯರು, ದಾದಿಯರು ಹಾಗೂ ಆರೋಗ್ಯ ಕ್ಷೇತ್ರದ ಎಲ್ಲಾ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು ವ್ಯಾದಿಸ್ತರ ಮೇಲೆ ಕರುಣೆಯನ್ನು ಹೊಂದುವಂತೆ ಕೇಳಿಕೊಂಡಿದ್ದಾರೆ.