MAP

ಇಟಲಿಯ ಧರ್ಮಕ್ಷೇತ್ರಗಳ ಯಾತ್ರಿಕರಿಗೆ ಪ್ರಾರ್ಥನೆಯಲ್ಲಿ ಮುಂದುವರೆಯುವಂತೆ ಪ್ರೋತ್ಸಾಹಿಸಿದ ಪೋಪ್ ಫ್ರಾನ್ಸಿಸ್

ಇಟಲಿಯ ಗ್ರೊಸೆಟೋ, ಪಿಟಿಗ್ಲಿಯಾನೋ-ಸೊವಾನಾ-ಆರ್ಬೆತೆಲ್ಲೋ ಧರ್ಮಕ್ಷೇತ್ರಗಳ ಯಾತ್ರಿಕರಿಗೆ ಸಂದೇಶವನ್ನು ನೀಡಿರುವ ಪೋಪ್ ಫ್ರಾನ್ಸಿಸ್ ಅವರು ಪ್ರಾರ್ಥನೆಯಲ್ಲಿ ಮುಂದುವರೆಯುವಂತೆ ಪ್ರೋತ್ಸಾಹಿಸಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಇಟಲಿಯ ಗ್ರೊಸೆಟೋ, ಪಿಟಿಗ್ಲಿಯಾನೋ-ಸೊವಾನಾ-ಆರ್ಬೆತೆಲ್ಲೋ ಧರ್ಮಕ್ಷೇತ್ರಗಳ ಯಾತ್ರಿಕರಿಗೆ ಸಂದೇಶವನ್ನು ನೀಡಿರುವ ಪೋಪ್ ಫ್ರಾನ್ಸಿಸ್ ಅವರು ಪ್ರಾರ್ಥನೆಯಲ್ಲಿ ಮುಂದುವರೆಯುವಂತೆ ಪ್ರೋತ್ಸಾಹಿಸಿದ್ದಾರೆ. 

ಪೋಪ್ ಫ್ರಾನ್ಸಿಸ್ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿ ಎರಡು ವಾರಗಳು ಕಳೆಯುತ್ತಿರುವ ಹಿನ್ನೆಲೆಯಲ್ಲಿ ಅವರು ನಿಧಾನವಾಗಿ ತಮ್ಮ ದೈನಂದಿನ ಕಾರ್ಯಕ್ಕೆ ಮರಳುತ್ತಿದ್ದಾರೆ. ಇಟಲಿಯ ಗ್ರೊಸೆಟೋ, ಪಿಟಿಗ್ಲಿಯಾನೋ-ಸೊವಾನಾ-ಆರ್ಬೆತೆಲ್ಲೋ ಧರ್ಮಕ್ಷೇತ್ರಗಳ ಯಾತ್ರಿಕರಿಗೆ ಪೋಪ್ ಫ್ರಾನ್ಸಿಸ್ ಅವರು ಸಂದೇಶವನ್ನು ನೀಡಿದ್ದು, "ನಿಮ್ಮ ಈ ಪವಿತ್ರ ಯಾತ್ರೆಯು ನಿಮ್ಮ ವಿಶ್ವಾಸವನ್ನು ನವೀಕರಿಸಲಿ; ನೀವೆಲ್ಲರೂ ಒಂದಾಗಿ, ಪ್ರಭುವಿನೆಡೆಗೆ ಜೊತೆಯಾಗಿ ನಡೆಯುವಂತಾಗಲಿ" ಎಂದು ಹೇಳಿದ್ದಾರೆ.

ಮುಂದುವರೆದು ಮಾತನಾಡಿದ ಅವರು "ಈ ಜಗತ್ತಿನಲ್ಲಿ ಎಂಥದ್ದೇ ಕಷ್ಟಗಳು ಇರಬಹುದು, ನಮಗೆ ಬರಲೂ ಬಹುದು. ಆದರೆ, ನಾವು ಅತೀವ ಭರವಸೆಯಿಂದ ಪ್ರಾರ್ಥನೆಯಲ್ಲಿ ಮುಂದುವರೆಯುತ್ತಾ ಸಾಗಬೇಕು" ಎಂದು ಹೇಳುವ ಮೂಲಕ ಅವರು ಯಾತ್ರಿಕರಿಗೆ ಪ್ರೋತ್ಸಾಹದ ಮಾತುಗಳನ್ನಾಡಿದ್ದಾರೆ.

ಅಂತಿಮವಾಗಿ ಅವರು ಈ ಧರ್ಮಕ್ಷೇತ್ರಗಳನ್ನು ಮಾತೆ ಮರಿಯಮ್ಮನವರ ಮಧ್ಯಸ್ಥಿಕೆಗೆ ಅರ್ಪಿಸಿದ್ದಾರೆ.

09 ಏಪ್ರಿಲ್ 2025, 16:14