ಪೋಪ್ ಫ್ರಾನ್ಸಿಸ್ ಅವರ ಪಾರ್ಥೀವ ಶರೀರವನ್ನು ಹೊಂದಿರುವ ಪೆಟ್ಟಿಗೆಯನ್ನು ಶುಕ್ರವಾರ ಸಂಜೆ ವಿಧಿವಿಧಾನಗಳೊಂದಿಗೆ ಮುದ್ರಿಸಲಾಗುವುದು
ಶನಿವಾರ ಬೆಳಿಗ್ಗೆ ಪೋಪ್ ಅಂತ್ಯಕ್ರಿಯೆಗೆ ಮುಂಚಿತವಾಗಿ, ಕಾರ್ಡಿನಲ್ ಕೆವಿನ್ ಫಾರೆಲ್, ದಿವಂಗತ ಪೋಪ್ ಫ್ರಾನ್ಸಿಸ್ ಅವರ ಪಾರ್ಥೀವ ಶರೀರವನ್ನು ಹೊಂದಿರುವ ಪೆಟ್ಟಿಗೆಯನ್ನು ಮುಚ್ಚಲಾಗುವ ವಿಧಿಯ ಅಧ್ಯಕ್ಷತೆ ವಹಿಸಲಿದ್ದಾರೆ.
ಹಲವಾರು ಕಾರ್ಡಿನಲ್‌ಗಳು ಮತ್ತು ಜಗದ್ಗುರುಗಳ ಕಾರ್ಯದರ್ಶಿಗಳು ಈ ಪ್ರಾರ್ಥನಾ ವಿಧಿಯಲ್ಲಿ ಭಾಗವಹಿಸಲಿದ್ದಾರೆ ಮತ್ತು ವ್ಯಾಟಿಕನ್ ನ್ಯೂಸ್‌ನ ಚಾನೆಲ್‌ಗಳಲ್ಲಿ ಪ್ರಸಾರವಾಗಲಿದೆ. ಇದು ದಿವಂಗತ ಜಗದ್ಗುರುಗಳಿಗೆ ಹತ್ತಾರು ಸಾವಿರ ಜನರು ತಮ್ಮ ಗೌರವವನ್ನು ಸಲ್ಲಿಸುವುದರ ಮೂಲಕ ಸಂತ ಪೇತ್ರರ ಬೆಸಿಲಿಕಾದಲ್ಲಿ ಸಾರ್ವಜನಿಕ ವೀಕ್ಷಣೆಯನ್ನು ಮುಕ್ತಾಯಗೊಳಿಸಲಾಗುತ್ತದೆ.
ಪೋಪ್ ಫ್ರಾನ್ಸಿಸ್ ಅವರ ಪಾರ್ಥೀವ ಶರೀರವನ್ನು ಸಾರ್ವಜನಿಕ ದರ್ಶನಕ್ಕಾಗಿ ಬುಧವಾರ ಬೆಳಿಗ್ಗೆ ವ್ಯಾಟಿಕನ್ ಬೆಸಿಲಿಕಾದಲ್ಲಿ ತೆರೆದಾಗಿನಿಂದ 24 ಗಂಟೆಗಳಲ್ಲಿ 50,000 ಕ್ಕೂ ಹೆಚ್ಚು ಜನರು ಪಾಪನಿವೇದನೆಯ ಬಲಿಪೀಠವನ್ನು ದಾಟಿ ತಮ್ಮ ಗೌರವವನ್ನು ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.
ಗುರುವಾರ ಬೆಳಿಗ್ಗೆ 5:30 ರವರೆಗೆ ತೆರೆದಿದ್ದ ಸಂತ ಪೇತ್ರರ ಬೆಸಿಲಿಕಾ, ಒಂದೂವರೆ ಗಂಟೆಗಳ ಕಾಲ ಮುಚ್ಚಿ ನಂತರ ಬೆಳಿಗ್ಗೆ 7:00 ಗಂಟೆಗೆ ಮತ್ತೆ ತೆರೆಯಲಾಯಿತು.
ಶುಕ್ರವಾರ ಕಾರ್ಡಿನಲ್‌ಗಳಾದ ಜಿಯೋವಾನಿ ಬ್ಯಾಟಿಸ್ಟಾ ರೆ, ಪಿಯೆಟ್ರೊ ಪರೋಲಿನ್, ರೋಜರ್ ಮಹೋನಿ, ಡೊಮೆನಿಕ್ ಮಾಂಬರ್ಟಿ, ಮೌರೊ ಗ್ಯಾಂಬೆಟ್ಟಿ, ಬಾಲ್ಡಸ್ಸಾರೆ ರೀನಾ ಮತ್ತು ಕೊನ್ರಾಡ್ ಕ್ರಜೆವ್ಸ್ಕಿ ಪೋಪ್ ಫ್ರಾನ್ಸಿಸ್ ಅವರ ಪಾರ್ಥೀವ ಶರೀರವನ್ನು ಹೊಂದಿರುವ ಪೆಟ್ಟಿಗೆಯನ್ನು ವಿಧಿವಿಧಾನಗಳೊಂದಿಗೆ ಮುಚ್ಚಲಾಗುವ ವಿಧಿಯಲ್ಲಿ ಹಾಜರಿರಲು ಆರಾಧನಾವಿಧಿಯ ಆಚರಣೆಗಳ ಕಚೇರಿ ವಿನಂತಿಸಿದೆ.
ಪೋಪ್ ಫ್ರಾನ್ಸಿಸ್ ಅವರ ಅಂತಿಮ ಸಂಸ್ಕಾರದ ಬಲಿಪೂಜೆಯು ಏಪ್ರಿಲ್ 26, 2025 ರಂದು ಬೆಳಿಗ್ಗೆ 10:00 ಗಂಟೆಗೆ ವ್ಯಾಟಿಕನ್ನಿನ ಸಂತ ಪೇತ್ರರ ಮಹಾದೇವಾಲಯದ ಆವರಣದಲ್ಲಿ ನೆರವೇರುತ್ತದೆ. ಈ ಮೂಲಕ ಪ್ರಾಚೀನ ಸಂಪ್ರದಾಯವಾದ ನೊವೆಮ್ಡಿಯಲ್ಸ್ ಅಂದರೆ ಪ್ರಾರ್ಥನೆಗಳೊಂದಿಗೆ ಆರಂಭವಾಗುವ ಬಲಿಪೂಜೆಯು, ಕೊನೆಯಲ್ಲಿ ಒಂಬತ್ತು ದಿನಗಳ ಶೋಕಾಚರಣೆ ಮತ್ತು ದಿವಂಗತ ಜಗದ್ಗುರುಗಳ ಆತ್ಮಕ್ಕೆ ಶಾಂತಿಗಾಗಿ ಅರ್ಪಿಸುವ ಪವಿತ್ರ ಬಲಿಪೂಜೆಯನ್ನು ಗುರುತಿಸುತ್ತದೆ.
ನೊವೆಮ್ಡಿಯಲ್ಸ್ ಬಲಿಪೂಜೆಯು ಪ್ರತಿದಿನ ಸಂಜೆ 5:00 ಗಂಟೆಗೆ ಸಂತ ಪೇತ್ರರ ಬೆಸಿಲಿಕಾದಲ್ಲಿ ನಡೆಯಲಿದೆ, ಏಪ್ರಿಲ್ 28 ರ ಭಾನುವಾರ ಬೆಳಿಗ್ಗೆ 10:30 ಕ್ಕೆ ಸಂತ ಪೇತ್ರರ ಚೌಕದಲ್ಲಿ ನಡೆಯುವ ದೈವಿಕ ಕರುಣೆಯ ಬಲಿಪೂಜೆಯನ್ನು ಹೊರತುಪಡಿಸಿ.