MAP

ಪೋಪ್ ಫ್ರಾನ್ಸಿಸ್ ಅವರ ಆರೋಗ್ಯ ಸ್ಥಿರವಾಗಿದೆ

ಪೋಪ್ ಫ್ರಾನ್ಸಿಸ್ ಅವರು ಡಬಲ್ ನ್ಯುಮೋನಿಯಾದಿಂದ ಬಳಲುತ್ತಿದ್ದು, ಅದರಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿಯು ಸ್ಥಿರವಾಗಿದೆ ಎಂದು ವ್ಯಾಟಿಕನ್ ಮಾಧ್ಯಮ ಕಚೇರಿಯು ಪ್ರಕಟಣೆಯಲ್ಲಿ ಹೇಳಿದೆ.

ವರದಿ: ವ್ಯಾಟಿಕನ್ ನ್ಯೂಸ್

ಪೋಪ್ ಫ್ರಾನ್ಸಿಸ್ ಅವರು ಡಬಲ್ ನ್ಯುಮೋನಿಯಾದಿಂದ ಬಳಲುತ್ತಿದ್ದು, ಅದರಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿಯು ಸ್ಥಿರವಾಗಿದೆ ಎಂದು ವ್ಯಾಟಿಕನ್ ಮಾಧ್ಯಮ ಕಚೇರಿಯು ಪ್ರಕಟಣೆಯಲ್ಲಿ ಹೇಳಿದೆ. 

ವ್ಯಾಟಿಕನ್ನಿನ ಮಾಧ್ಯಮ ಆಯೋಗದ ನಿರ್ದೇಶಕರಾಗಿರುವ ಮತ್ತಿಯೋ ಬ್ರೂನಿ ಅವರು ಪೋಪ್ ಫ್ರಾನ್ಸಿಸ್ ಅವರ ಆರೋಗ್ಯದ ಕುರಿತು ಪ್ರಕಟಣೆಯಲ್ಲಿ ಮಾಹಿತಿಯನ್ನು ನೀಡಿದ್ದು, ಅವರ ರಕ್ತ ಪರಿಚಲನೆ ಸಾಮಾನ್ಯವಾಗಿದೆ, ಅವರ ಶ್ವಾಸಕೋಶಗಳ ಎಕ್ಸ್-ರೇ ಅವರು ಗುಣ ಹೊಂದುತ್ತಿದ್ದಾರೆ ಎಂಬುದನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ.

ಪೋಪ್ ಅವರು ತಮ್ಮ ವೈದ್ಯರು ಸೂಚಿಸಿದ ವಿವಿಧ ಚಿಕಿತ್ಸೆಗಳನ್ನು ಮುಂದುವರಿಸುತ್ತಿದ್ದಾರೆ ಎಂದು ಬ್ರೂನಿ ಹೇಳಿದರು. ಅವರ ಮೋಟಾರ್ ಕೌಶಲ್ಯ, ಉಸಿರಾಟ ಮತ್ತು ಅವರ ಧ್ವನಿಯ ಬಳಕೆಯಲ್ಲಿ ಸುಧಾರಣೆ ಕಾಣುತ್ತಿದೆ. ಹೆಚ್ಚಿನ ಹರಿವಿನ ಆಮ್ಲಜನಕೀಕರಣವನ್ನು ಮುಖ್ಯವಾಗಿ ರಾತ್ರಿಯಲ್ಲಿ ಮತ್ತು ಅಗತ್ಯವಿರುವಂತೆ ಬಳಸಲಾಗುತ್ತದೆ.

ಪೋಪ್ ಫ್ರಾನ್ಸಿಸ್ ಅವರು ಕಾರ್ಯ ನಿರ್ವಹಿಸುವುದನ್ನು ಮುಂದುವರೆಸಿದ್ದಾರೆ. ಅವರನ್ನು ಭೇಟಿ ಮಾಡಲು ಯಾವುದೇ ವಿಶೇಷ ವ್ಯಕ್ತಿಗಳ ಬಂದಿಲ್ಲ. ಮುಂದುವರೆದು, ಬುಧವಾರದ ಸಾರ್ವಜನಿಕ ಭೇಟಿಯಲ್ಲಿ ಪೋಪ್ ಫ್ರಾನ್ಸಿಸ್ ಅವರು ಭಾಗವಹಿಸುವುದಿಲ್ಲ. ಬದಲಾಗಿ, ಅವರ ಸಂದೇಶವನ್ನು ಭಕ್ತಾಧಿಗಳಿಗೆ ಓದಲಾಗುತ್ತದೆ ಎಂದು ಮತ್ತಿಯೋ ಬ್ರೂನಿ ಅವರು ತಿಳಿಸಿದ್ದಾರೆ. 

01 ಏಪ್ರಿಲ್ 2025, 17:01