ಪೋಪ್ ಫ್ರಾನ್ಸಿಸ್: ದೇವರಿಂದ ನಮ್ಮನ್ನು ಹಿಡಿದಿಟ್ಟುಕೊಂಡಿರುವ ಎಲ್ಲಾ ಭಾರಗಳಿಂದ ನಾವು ಮುಕ್ತರಾಗಬೇಕು
ವರದಿ: ವ್ಯಾಟಿಕನ್ ನ್ಯೂಸ್
ಪೋಪ್ ಫ್ರಾನ್ಸಿಸ್ ಅವರು ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವ ಕಾರಣ ಅವರು ಇಂದು ಸಾರ್ವಜನಿಕ ಭೇಟಿಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಆದರೆ, ಈ ಸಂದರ್ಭದಲ್ಲಿ ಅವರ ಸಂದೇಶವನ್ನು ಭಕ್ತಾಧಿಗಳಿಗೆ ಓದಲಾಯಿತು. ತಮ್ಮ ಸಂದೇಶದಲ್ಲಿ ಪೋಪ್ ಫ್ರಾನ್ಸಿಸ್ ಅವರು "ದೇವರಿಂದ ನಮ್ಮನ್ನು ಹಿಡಿದಿಟ್ಟುಕೊಂಡಿರುವ ಎಲ್ಲಾ ಭಾರಗಳಿಂದ ನಾವು ಮುಕ್ತರಾಗಬೇಕು ಹಾಗೂ ಆ ಮೂಲಕ ಶಾಂತಿ ಹಾಗೂ ಸಂತೋಷದಿಂದ ಬಾಳಬೇಕು" ಎಂದು ಹೇಳಿದ್ದಾರೆ.
ಪೋಪ್ ಫ್ರಾನ್ಸಿಸ್ ಅವರು ತಮ್ಮ ಈ ಸಂದೇಶವನ್ನು ಪ್ರಕಟಿಸುವಂತೆ ವ್ಯಾಟಿಕನ್ ಮಾಧ್ಯಮ ಕಚೇರಿಗೆ ಸೂಚಿಸಿದ್ದಾರೆ.
ವೈದ್ಯರು ಪೋಪ್ ಫ್ರಾನ್ಸಿಸ್ ಅವರಿಗೆ ಸರಿಯಾದ ವಿಶ್ರಾಂತಿಯ ಅಗತ್ಯವಿದೆ. ಅವರು ಎರಡು ತಿಂಗಳುಗಳ ಕಾಲ ವಿಶ್ರಾಂತಿಯನ್ನು ಪಡೆದುಕೊಳ್ಳಬೇಕು ಎಂದು ಹೇಳಿರುವ ಹಿನ್ನೆಲೆಯಲ್ಲಿ ಪೋಪ್ ಫ್ರಾನ್ಸಿಸ್ ಅವರು ಸಾರ್ವಜನಿಕ ಭೇಟಿ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ.
ಇದೇ ವೇಳೆ ಪೋಪ್ ಫ್ರಾನ್ಸಿಸ್ ಅವರು ಸಂತ ಮಾರ್ಕನ ಶುಭಸಂದೇಶಲ್ಲಿ ಧನಿಕನೊಬ್ಬ "ಗುರುವೇ, ನಿತ್ಯಜೀವವನ್ನು ಪಡೆದುಕೊಳ್ಳಲು ನಾನೇನು ಮಾಡಬೇಕು" ಎಂಬ ಪ್ರಶ್ನೆಯನ್ನು ಕೇಳುವ ವೃತ್ತಾಂತದ ಕುರಿತು ಮಾತನಾಡಿ, ಚಿಂತನೆಯನ್ನು ನೀಡಿದ್ದಾರೆ. "ಪ್ರಭು ಕ್ರಿಸ್ತರು ಆತನಿಗೆ ಎಲ್ಲವನ್ನು ಮಾರಿ, ತಮ್ಮನ್ನು ಹಿಂಬಾಲಿಸವಂತೆ ಹೇಳುತ್ತಾರೆ. ಆದರೆ, ಆತನಿಗೆ ಅದು ಸಾಧ್ಯವಾಗುವುದಿಲ್ಲ. ಅಂತೆಯೇ ನಾವೂ ಸಹ ದೇವರ ಬಳಿಗೆ ಹೋಗುವುದರಿಂದ ನಮ್ಮನ್ನು ಹಿಡಿದಿಟ್ಟುಕೊಂಡಿರುವ ಎಲ್ಲಾ ರೀತಿಯ ಭಾರಗಳನ್ನು ಬಿಡಬೇಕು. ಅವುಗಳಿಂದ ಮುಕ್ತವಾಗಬೇಕು" ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದಾರೆ.
"ಪ್ರೀತಿ, ಪ್ರಖ್ಯಾತಿ ಅಥವಾ ಬೇರೆ ಯಾವುದೇ ಆಗಲಿ, ಅವುಗಳನ್ನು ನಾವು ಖರೀದಿಸಬಾರದು. ಬದಲಿಗೆ, ನಾವು ಎಲ್ಲವುಗಳಿಂದ ಮುಕ್ತರಾಗಿ, ದೇವರಿಗಾಗಿ ಹಾಗೂ ಅವರ ಸಾಮ್ರಾಜ್ಯಕ್ಕಾಗಿ ಹಾತೊರೆಯಬೇಕು" ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದಾರೆ.