MAP

ಜೆಮೆಲ್ಲಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂಧಿಗಳನ್ನು ವ್ಯಾಟಿಕನ್ನಿಗೆ ಬರಮಾಡಿಕೊಂಡ ಪೋಪ್ ಫ್ರಾನ್ಸಿಸ್

ಪೋಪ್ ಫ್ರಾನ್ಸಿಸ್ ಅವರು ರೋಮ್ ನಗರದ ಜೆಮೆಲ್ಲಿ ಆಸ್ಪತ್ರೆಯ ವೈದ್ಯರು ಹಾಗೂ ಆರೋಗ್ಯ ಸಿಬ್ಬಂಧಿಯನ್ನು ಬರಮಾಡಿಕೊಂಡಿದ್ದಾರೆ. ಪೋಪ್ ಫ್ರಾನ್ಸಿಸ್ ಅವರು ಫೆಬ್ರವರಿಯಿಂದ ಮಾರ್ಚ್ ತಿಂಗಳವರೆಗೂ ಸುಮಾರು ಒಂದೂವರೆ ತಿಂಗಳುಗಳ ಕಾಲ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಇಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡಿದ್ದರು.

ವರದಿ: ವ್ಯಾಟಿಕನ್ ನ್ಯೂಸ್

ಪೋಪ್ ಫ್ರಾನ್ಸಿಸ್ ಅವರು ರೋಮ್ ನಗರದ ಜೆಮೆಲ್ಲಿ ಆಸ್ಪತ್ರೆಯ ವೈದ್ಯರು ಹಾಗೂ ಆರೋಗ್ಯ ಸಿಬ್ಬಂಧಿಯನ್ನು ಬರಮಾಡಿಕೊಂಡಿದ್ದಾರೆ. ಪೋಪ್ ಫ್ರಾನ್ಸಿಸ್ ಅವರು ಫೆಬ್ರವರಿಯಿಂದ ಮಾರ್ಚ್ ತಿಂಗಳವರೆಗೂ ಸುಮಾರು ಒಂದೂವರೆ ತಿಂಗಳುಗಳ ಕಾಲ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಇಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡಿದ್ದರು.

ಸುಮಾರು 20 ನಿಮಿಷಗಳ ಕಾಲ ನಡೆದ ಈ ಭೇಟಿಯಲ್ಲಿ, ಪೋಪ್ ಫ್ರಾನ್ಸಿಸ್ ಅವರು "ಎ. ಜೆಮೆಲ್ಲಿ" ಪಾಲಿಕ್ಲಿನಿಕ್ ಫೌಂಡೇಶನ್, ಸ್ಯಾಕ್ರೊ ಕ್ಯೂರ್ ಕ್ಯಾಥೋಲಿಕ್ ವಿಶ್ವವಿದ್ಯಾಲಯ ಮತ್ತು ವ್ಯಾಟಿಕನ್ ಸಿಟಿ ರಾಜ್ಯದ ಆರೋಗ್ಯ ಮತ್ತು ನೈರ್ಮಲ್ಯ ನಿರ್ದೇಶನಾಲಯದ ವೈದ್ಯರು, ವ್ಯವಸ್ಥಾಪಕರು ಮತ್ತು ಸಿಬ್ಬಂದಿಯನ್ನು ಭೇಟಿಯಾದರು, ಒಟ್ಟು 70 ಜನರು, ಕಳೆದ ತಿಂಗಳು ಅವರ ಆಸ್ಪತ್ರೆ ವಾಸ್ತವ್ಯದ ಸಮಯದಲ್ಲಿ ಅವರಿಗೆ ಸಹಾಯ ಮಾಡಿದರು.

ಆಸ್ಪತ್ರೆಯಲ್ಲಿದ್ದ ವೇಳೆ ತಮಗೆ ಸೇವೆ ನೀಡಿದ ಎಲ್ಲಾ ವೈದ್ಯರು ಹಾಗೂ ಆರೋಗ್ಯ ಸಿಬ್ಬಂಧಿಗೆ ಪೋಪ್ ಫ್ರಾನ್ಸಿಸ್ ಅವರು ಈ ವೇಳೆ ವಯಕ್ತಿಕವಾಗಿ ಧನ್ಯವಾದಗಳನ್ನು ತಿಳಿಸಿದರು ಹಾಗೂ ಅವರ ಸೇವೆಯನ್ನು ಮುಂದುವರೆಸುವಂತೆ ಪ್ರೋತ್ಸಾಹವನ್ನು ನೀಡಿದರು.

ಪೋಪ್ ಆಸ್ಪತ್ರೆಯಿಂದ ಬಿಡುಗಡೆಯಾದಾಗಿನಿಂದ, ಅವರ ಆರೋಗ್ಯದಲ್ಲಿ ನಿಯಮಿತ ಚೇತರಿಕೆ ಕಂಡು ಬರುತ್ತಿದೆ ಎಂದು ವ್ಯಾಟಿಕನ್ ಮಾಧ್ಯಮ ಕಚೇರಿಯು ಹೇಳಿದೆ.

ಪೋಪ್ ಫ್ರಾನ್ಸಿಸ್ ಅವರು ಕಳೆದ ವಾರ ವ್ಯಾದಿಸ್ತರು ಹಾಗೂ ಆರೋಗ್ಯಕಾರ್ಯಕರ್ತರ ಜ್ಯೂಬಿಲಿ ಸಂದರ್ಭದಲ್ಲಿ ಸಾರ್ವಜನಿಕವಾಗಿ ಅಚ್ಚರಿಯ ಭೇಟಿಯನ್ನು ನೀಡಿದ್ದರು ಎಂಬುದನ್ನು ನಾವಿಲ್ಲಿ ಸ್ಮರಿಸಿಕೊಳ್ಳಬಹುದು.

ಪವಿತ್ರ ವಾರದಲ್ಲಿ ಪೋಪ್ ಫ್ರಾನ್ಸಿಸ್ ಅವರ ಪಾಲ್ಗೊಳ್ಳುವಿಕೆ

ವ್ಯಾಟಿಕನ್ನಿನಲ್ಲಿ ನಡೆಯುವ ಪವಿತ್ರವಾರದ ಆಚರಣೆಗಳಲ್ಲಿ ಪೋಪ್ ಫ್ರಾನ್ಸಿಸ್ ಅವರು ಪಾಲ್ಗೊಳ್ಳುತ್ತಾರೆ ಎಂಬುದನ್ನು ಈಗಲೇ ಹೇಳಲಾಗುವುದಿಲ್ಲ. ಆದರೆ ಈ ಕುರಿತ ಯಾವುದೇ ಮಾಹಿತಿಯನ್ನು ತಕ್ಷಣವೇ ನೀಡಲಾಗುತ್ತದೆ ಎಂದು ವ್ಯಾಟಿಕನ್ ಮಾಧ್ಯಮ ಕಚೇರಿಯು ಹೇಳಿದೆ.

ಇದೇ ವೇಳೆ ವ್ಯಾಟಿಕನ್ ಮಾಧ್ಯಮ ಕಚೇರಿಯು, ಪೋಪ್ ಫ್ರಾನ್ಸಿಸ್ ಅವರು ರೋಮ್ ನಗರದ ಕೊಲೊಸಿಯಂನಲ್ಲಿ ನಡೆಯಲಿರುವ ಶಿಲುಬೆಹಾದಿಗೆ ಚಿಂತನೆಯನ್ನು ಸಿದ್ಧಪಡಿಸಿದ್ದಾರೆ ಹಾಗೂ ಪವಿತ್ರವಾರದ ಆಚರಣೆಗಳಲ್ಲಿ ಯಾವ ಕಾರ್ಡಿನಲ್ಲುಗಳು ಪಾಲ್ಗೊಂಡು, ಮುನ್ನಡೆಸಬೇಕು ಎಂಬುದನ್ನೂ ಸಹ ಅವರು ಹೇಳಿದ್ದಾರೆ ಎಂದು ವ್ಯಾಟಿಕನ್ ಮಾಧ್ಯಮ ಕಚೇರಿಯು ವರದಿ ಮಾಡಿದೆ.

ಪವಿತ್ರ ಗುರುವಾರದಂದು ಕಾರ್ಡಿನಲ್ ಡೊಮಿನಿಕೋ ಕ್ಯಾಲ್ಕಾಗ್ನೋ ಅವರು ತೈಲಗಳ ಪವಿತ್ರೀಕರಣ ಬಲಿಪೂಜೆಯನ್ನು ಮುನ್ನಡೆಸಲಿದ್ದಾರೆ.

ಶುಭ ಶುಕ್ರವಾರದಂದು ಕಾರ್ಡಿನಲ್ ಕ್ಲಾಡಿಯೋ ಗುಗೆರೊಟ್ಟಿ ಅವರು ಶಿಲುಬೆಹಾದಿಯನ್ನು ಮುನ್ನಡೆಸಲಿದ್ದಾರೆ. ರೋಮ್ ನಗರದ ಕೊಲೋಸಿಯಂನಲ್ಲಿ ನಡೆಯುವ ಶಿಲುಬೆಹಾದಿಯನ್ನು ಪೋಪ್ ಫ್ರಾನ್ಸಿಸ್ ಅವರ ವಿಕಾರ್ ಜನರಲ್ ಕಾರ್ಡಿನಲ್ ಬಾಲ್ದೆಸ್ಸೆರಿ ರೈನಾ ಅವರು ಮುನ್ನಡೆಸಲಿದ್ದಾರೆ.

16 ಏಪ್ರಿಲ್ 2025, 18:12