MAP

ಸ್ಟ್ರೋಕ್ ಹಾಗೂ ಹೃದಯಾಘಾತದಿಂದ ಪೋಪ್ ಫ್ರಾನ್ಸಿಸ್ ನಿಧನ

ವ್ಯಾಟಿಕನ್ ನಗರ ರಾಜ್ಯದ ಆರೋಗ್ಯ ಮತ್ತು ನೈರ್ಮಲ್ಯ ನಿರ್ದೇಶನಾಲಯದ ನಿರ್ದೇಶಕರಾಗಿರುವ ಡಾ. ಅಂದ್ರೇಯ ಅರ್ಕೇಂಜಲಿ ಅವರು ಪೋಪ್ ಫ್ರಾನ್ಸಿಸ್ ಅವರ ನಿಧನದ ವೈದ್ಯಕೀಯ ಪ್ರಮಾಣ ಪತ್ರವನ್ನು ಬಿಡುಗಡೆ ಮಾಡಿದ್ದಾರೆ. ತಮ್ಮ ಪ್ರಮಾಣ ಪತ್ರದಲ್ಲಿ ಅವರು ಸ್ಟ್ರೋಕ್ ಹಾಗೂ ಹೃದಯಾಘಾತದಿಂದ ಪೋಪ್ ಫ್ರಾನ್ಸಿಸ್ ನಿಧನ ಹೊಂದಿದ್ದಾರೆ ಎಂದು ದೃಢೀಕರಿಸಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ವೈದ್ಯಕೀಯ ವರದಿಯ ಪ್ರಕಾರ, ಪೋಪ್ ಅವರಿಗೆ ಮಲ್ಟಿಮೈಕ್ರೋಬಿಯಲ್ ದ್ವಿಪಕ್ಷೀಯ ನ್ಯುಮೋನಿಯಾ, ಮಲ್ಟಿಪಲ್ ಬ್ರಾಂಕಿಯಕ್ಟೇಸಸ್, ಅಧಿಕ ರಕ್ತದೊತ್ತಡ ಮತ್ತು ಟೈಪ್ II ಮಧುಮೇಹದಿಂದ ಉಂಟಾದ ತೀವ್ರ ಉಸಿರಾಟದ ವೈಫಲ್ಯದ ಹಿಂದಿನ ಇತಿಹಾಸವಿತ್ತು.

ಅವರ ಸಾವನ್ನು ಎಲೆಕ್ಟ್ರೋಕಾರ್ಡಿಯೋಗ್ರಾಫಿಕ್ ಥಾನಟೋಗ್ರಫಿ ಮೂಲಕ ದೃಢಪಡಿಸಲಾಯಿತು. "ನನ್ನ ಜ್ಞಾನ ಮತ್ತು ತೀರ್ಪಿನ ಪ್ರಕಾರ, ಸಾವಿನ ಕಾರಣಗಳು ಮೇಲೆ ಹೇಳಿದಂತೆ ಎಂದು ನಾನು ಈ ಮೂಲಕ ಘೋಷಿಸುತ್ತೇನೆ" ಎಂದು ಡಾ. ಅರ್ಕಾಂಜೆಲಿ ಬರೆದಿದ್ದಾರೆ.

22 ಏಪ್ರಿಲ್ 2025, 13:47