MAP

ಕಾಸ ಸಾಂತ ಮಾರ್ತಾದಲ್ಲಿ ಚೇತರಿಸಿಕೊಳ್ಳುತ್ತಿರುವ ಪೋಪ್ ಫ್ರಾನ್ಸಿಸ್

ಪೋಪ್ ಫ್ರಾನ್ಸಿಸ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ತೆಗೆದುಕೊಂಡು ಬಂದ ಬಳಿಕ ಇದೀಗ ಅವರ ಅಧಿಕೃತ ನಿವಾಸ ಕಾಸಾ ಸಾಂತ ಮಾರ್ತಾದಲ್ಲಿ ಚೇತರಿಸಿಕೊಳ್ಳುವುದನ್ನು ಮುಂದುವರೆಸಿದ್ದಾರೆ ಎಂದು ವ್ಯಾಟಿಕನ್ ಮಾಧ್ಯಮ ಕಚೇರಿಯು ತಿಳಿಸಿದೆ.

ವರದಿ: ವ್ಯಾಟಿಕನ್ ನ್ಯೂಸ್

ಪೋಪ್ ಫ್ರಾನ್ಸಿಸ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ತೆಗೆದುಕೊಂಡು ಬಂದ ಬಳಿಕ ಇದೀಗ ಅವರ ಅಧಿಕೃತ ನಿವಾಸ ಕಾಸಾ ಸಾಂತ ಮಾರ್ತಾದಲ್ಲಿ ಚೇತರಿಸಿಕೊಳ್ಳುವುದನ್ನು ಮುಂದುವರೆಸಿದ್ದಾರೆ ಎಂದು ವ್ಯಾಟಿಕನ್ ಮಾಧ್ಯಮ ಕಚೇರಿಯು ತಿಳಿಸಿದೆ.

ಇದೇ ವೇಳೆ ಮುಂದಿನ ತ್ರಿಕಾಲ ಪ್ರಾರ್ಥನೆಯಲ್ಲಿ ಬದಲಾವಣೆ ಆಗಬಹದು ಎಂದು ಪೋಪ್ ಫ್ರಾನ್ಸಿಸ್ ಅವರು ಘೋಷಿಸಿದ್ದಾರೆ. ಕಳೆದ ಹಲವು ವಾರಗಳಿಂದ ನಡೆದಂತೆ ತ್ರಿಕಾಲ ಪ್ರಾರ್ಥನೆಯು ನಡೆಯುವುದಿಲ್ಲ. ಅದರಲ್ಲಿ ಕೊಂಚ ಬದಲಾವಣೆ ಇರಬಹುದು. ಈ ಬದಲಾವಣೆಯ ಕುರಿತು ನಿಮಗೆ ಮಾಹಿತಿಯನ್ನು ಮುಂದೆ ನೀಡಲಾಗುವುದು ಎಂದು ಹೇಳಿದ್ದಾರೆ.

ಪೋಪ್ ಫ್ರಾನ್ಸಿಸ್ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಳ್ಳುತ್ತಿದೆ. ದಿನೇ ದಿನೇ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವ್ಯಾಟಿಕನ್ ಮಾಧ್ಯಮ ಕಚೇರಿಯು ಹೇಳಿದೆ.

ಪೋಪ್ ಫ್ರಾನ್ಸಿಸ್ ಅವರ ಆರೋಗ್ಯದಲ್ಲಿ ಉಸಿರಾಟ, ಚಲನಶೀಲತೆ ಮತ್ತು ಧ್ವನಿ ಸಂಬಂಧಿತ ಸುಧಾರಣೆಗಳು ಸ್ವಲ್ಪಮಟ್ಟಿಗೆ ಕಂಡುಬಂದಿವೆ ಎಂದು ಪತ್ರಿಕಾ ಕಚೇರಿ ತಿಳಿಸಿದೆ.

ಇತ್ತೀಚಿನ ರಕ್ತ ಪರೀಕ್ಷೆಗಳು ಅವರ ಶ್ವಾಸಕೋಶದ ಸೋಂಕಿನಲ್ಲಿ ಸ್ವಲ್ಪ ಸುಧಾರಣೆಯನ್ನು ಸೂಚಿಸುತ್ತವೆ ಎಂದು ವ್ಯಾಟಿಕನ್ ಪ್ರಕಟಣೆಯು ತಿಳಿಸಿದೆ.

ಪವಿತ್ರ ತಂದೆ ಪೋಪ್ ಫ್ರಾನ್ಸಿಸ್ ಅವರ ಆರೋಗ್ಯದ ಕುರಿತ ಮಾಹಿತಿಯನ್ನು ಮುಂದಿನ ವಾರ ಮತ್ತೆ ನೀಡಲಾಗುವುದು. 

04 ಏಪ್ರಿಲ್ 2025, 16:51