MAP

ಸಂತ ಪೇತ್ರರ ಚೌಕಕ್ಕೆ ಅಚ್ಚರಿಯ ಭೇಟಿ ನೀಡಿದ ಪೋಪ್ ಫ್ರಾನ್ಸಿಸ್

ವ್ಯಾದಿಸ್ತರು ಹಾಗೂ ಆರೋಗ್ಯ ಕಾರ್ಯಕರ್ತರ ಜ್ಯೂಬಿಲಿ ಬಲಿಪೂಜೆ ಮುಗಿದ ನಂತರ ಪೋಪ್ ಫ್ರಾನ್ಸಿಸ್ ಅವರು ಸಂತ ಪೇತ್ರರ ಚೌಕಕ್ಕೆ ಅಚ್ಚರಿಯ ಭೇಟಿಯನ್ನು ನೀಡಿದ್ದಾರೆ. "ಒಳ್ಳೆಯ ಭಾನುವಾರ ನಿಮ್ಮದಾಗಲಿ. ದೇವರು ನಿಮ್ಮನ್ನು ಆಶೀರ್ವದಿಸಲಿ" ಎಂದು ಭಕ್ತಾಧಿಗಳಿಗೆ ಶುಭಾಶಯವನ್ನು ಕೋರಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಇದೇ ಮೊದಲ ಬಾರಿಗೆ ಪೋಪ್ ಫ್ರಾನ್ಸಿಸ್ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಪೋಪ್ ಫ್ರಾನ್ಸಿಸ್ ಅವರು ಇಂದು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆ ಎಂಬ ಕುರಿತು ಯಾವುದೇ ಪೂರ್ವಯೋಜನೆ ಇರಲಿಲ್ಲ. ಆದರೂ ಅವರು ಇಂದು ಸಂತ ಪೇತ್ರರ ಚೌಕಕ್ಕೆ ಭೇಟಿಯನ್ನು ನೀಡುವ ಮೂಲಕ ಅಚ್ಚರಿ ಮೂಡಿಸಿದರು.

ಶುಭಸಂದೇಶ ಪ್ರಸಾರ ಆಯೋಗದ ಪ್ರೋ-ಪ್ರಿಫೆಕ್ಟ್ ಆಗಿರುವ ಆರ್ಚ್'ಬಿಷಪ್ ರಿನೋ ಫಿಶೆಲ್ಲಾ ಅವರು ವ್ಯಾದಿಸ್ತರು ಹಾಗೂ ಆರೋಗ್ಯಕಾರ್ಯಕರ್ತರ ಜ್ಯೂಬಿಲಿ ಬಲಿಪೂಜೆಯನ್ನು ಅರ್ಪಿಸಿದರು. 

"ಉತ್ತಮ ಭಾನುವಾರ ನಿಮ್ಮದಾಗಲಿ. ನಿಮಗೆಲ್ಲರಿಗೂ ಧನ್ಯವಾದಗಳು" ಎಂದು ಹೇಳಿದ ನಂತರ ಪೋಪ್ ಫ್ರಾನ್ಸಿಸ್ ಅವರು ತಮ್ಮ ನಿವಾಸ ಕಾಸಾ ಸಾಂತ ಮಾರ್ತಾಕ್ಕೆ ಹಿಂತಿರುಗಿದರು.

ಭಕ್ತಾಧಿಗಳು ಪೋಪ್ ಫ್ರಾನ್ಸಿಸ್ ಅವರನ್ನು ಕಂಡೊಡನೆ ಹರ್ಷಚಿತ್ತರಾಗಿ, "ಪೋಪ್ ಚಿರಾಯುವಾಗಲಿ" ಎಂಬ ಘೋಷವಾಕ್ಯಗಳನ್ನು ಕೂಗಿದರು. 
 
06 ಏಪ್ರಿಲ್ 2025, 16:47