ಡೊಮಿನಿಕನ್ ದೇಶದ ಡ್ಯಾನ್ಸ್ ಕ್ಲಬ್ ಒಂದರಲ್ಲಿ ನಡೆದ ಅವಘಡಕ್ಕೆ ಸಂತಾಪವನ್ನು ವ್ಯಕ್ತಪಡಿಸಿದ್ದ ಪೋಪ್ ಫ್ರಾನ್ಸಿಸ್
ವರದಿ: ವ್ಯಾಟಿಕನ್ ನ್ಯೂಸ್
ಡೊಮಿನಿಕನ್ ರಿಪಬ್ಲಿಕ್ ದೇಶದ ಸಂತು ಡುಮ್ಮಿಂಗೋ ನಗರದಲ್ಲಿ ಅಲ್ಲಿನ ಕ್ಲಬ್ ಒಂದರಲ್ಲಿ ರಾತ್ರಿ ವೇಳೆ ಚಾವಣಿ ಕುಸಿದು ಬಿದ್ದ ಪರಿಣಾಮ ಸುಮಾರು 200 ಜನರು ಮೃತ ಹೊಂದಿದ್ದಾರೆ. ಈ ಅಪಘಾತದಲ್ಲಿ ಮೃತ ಹೊಂದಿದ ಎಲ್ಲರಿಗೂ ವಿಶ್ವಗುರು ಫ್ರಾನ್ಸಿಸ್ ಅವರು ಸಂತಾಪವನ್ನು ಸೂಚಿಸಿದ್ದಾರೆ.
ಜೆಟ್ ಸೆಟ್ ಎಂಬ ನೈಟ್ ಕ್ಲಬ್ ನಲ್ಲಿ ಛಾವಣಿ ಕುಸಿದು ಬಿದ್ದ ಪರಿಣಾಮ ಸುಮಾರು 300 ಜನರು ಮೃತ ಹೊಂದಿದ್ದಾರೆ ಎಂದು ಡೊಮಿನಿಕನ್ ರಿಪಬ್ಲಿಕ್ ದೇಶದ ಮಾಧ್ಯಮಗಳು ವರದಿ ಮಾಡಿವೆ. ಚಾವಣಿಯ ಅವಶೇಷಗಳಡಿ ಸಿಲುಕಿದ್ದ ಸುಮಾರು 155 ಜನರನ್ನು ರಕ್ಷಿಸಲಾಗಿದೆ ಎಂದು ಇಲ್ಲಿನ ಅಧಿಕಾರಿಗಳು ಹೇಳಿದ್ದಾರೆ. ತುರ್ತು ಸೇವಾ ಸಂಸ್ಥೆಗಳು ರಕ್ಷಣಾ ಕಾರ್ಯವನ್ನು ಇನ್ನೂ ಮುಂದುವರಿಸಿದೆ.
ವಿಶ್ವಗುರು ಫ್ರಾನ್ಸಿಸ್ ಅವರು ಸಂತ ದೊಮಿಂಗೋ ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷರಿಗೆ ಟೆಲಿಗ್ರಾಂ ಸಂದೇಶವನ್ನು ಕಳುಹಿಸಿದ್ದು ಮೃತ ಹೊಂದಿದ ಎಲ್ಲರಿಗೂ ತಮ್ಮ ಸಂತಾಪಗಳನ್ನು ಸೂಚಿಸಿದ್ದಾರೆ ಹಾಗೂ ಮೃತ ಹೊಂದಿದ ಕುಟುಂಬಸ್ಥರಿಗೆ ತಮ್ಮ ಐಕ್ಯತೆಯನ್ನು ಹಾಗೂ ಸಾಮೀಪ್ಯವನ್ನು ವ್ಯಕ್ತಪಡಿಸಿದ್ದಾರೆ. ದೇವರು ಈ ಕುಟುಂಬಗಳಿಗೆ ಶೋಕವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ಈ ಅಪಘಾತದಿಂದ ಕಷ್ಟಕ್ಕೀಡಾಗಿರುವ ಹಾಗೂ ನಷ್ಟಕ್ಕೀಡಾಗಿರುವ ಜನರಿಗೆ ವಿಶ್ವಗುರು ಫ್ರಾನ್ಸಿಸ್ ಅವರು ತಮ್ಮ ಪ್ರೇಷಿತ ಆಶೀರ್ವಾದವನ್ನು ನೀಡಿದ್ದಾರೆ ಹಾಗೂ ಈ ವೇಳೆ ನಂಬಿಕೆಯನ್ನು ಕಳೆದುಕೊಳ್ಳದಂತೆ ಅವರಿಗೆ ಧೈರ್ಯವನ್ನು ತುಂಬಿದ್ದಾರೆ.
ಈ ಅಪಘಾತದ ಕುರಿತು ಇಲ್ಲಿನ ಅಧಿಕಾರಿಗಳು ಮಾತನಾಡಿದ್ದು ಎಲ್ಲರನ್ನೂ ರಕ್ಷಿಸುತ್ತೇವೆ ಎಂಬ ಭರವಸೆಯನ್ನು ನೀಡಿದ್ದಾರೆ. ಆದರೆ ಕಳೆದ 24 ಗಂಟೆಗಳಲ್ಲಿ ಯಾರನ್ನು ರಕ್ಷಿಸದ ಪರಿಣಾಮ ಎಲ್ಲರಲ್ಲಿಯೂ ಆತಂಕ ಮನೆ ಮಾಡಿದೆ. ಇಲ್ಲಿನ ಸರ್ಕಾರವು ಅವಶೇಷಗಳಲ್ಲಿ ಇರುವ ಎಲ್ಲರನ್ನೂ ರಕ್ಷಿಸುತ್ತೇವೆ ಎಂದು ಹೇಳಿದೆ.