MAP

ಪೋಪರ ಉಡುಗೊರೆಯಾದ 4 ಆ್ಯಂಬುಲೆನ್ಸ್'ಗಳನ್ನು ಉಕ್ರೇನ್'ಗೆ ತಂದ ಕಾರ್ಡಿನಲ್ ಕ್ರಜೇವ್ಸ್ಕಿ

ಪೋಪ್ ಫ್ರಾನ್ಸಿಸ್ ಅವರು ತಮ್ಮ ಪೇಪಲ್ ಅಲ್ಮೊನೆರ್ ಆದ ಕಾರ್ಡಿನಲ್ ಕೊನ್ರಾಡ್ ಕ್ರಜೇವ್ಸ್ಕಿ ಅವರನ್ನು 4 ನೂತನ ಆ್ಯಂಬುಲೆನ್ಸ್'ಗಳೊಂದಿಗೆ ಉಕ್ರೇನ್ ದೇಶಕ್ಕೆ ಕಳುಹಿಸಿದ್ದಾರೆ. ಈ ಆ್ಯಂಬುಲೆನ್ಸ್'ಗಳು ಯುದ್ಧಪೀಡಿತ ಪ್ರದೇಶಗಳಲ್ಲಿ ಜೀವಗಳನ್ನು ಉಳಿಸಲು ನೆರವಾಗುತ್ತವೆ.

ವರದಿ: ವ್ಯಾಟಿಕನ್ ನ್ಯೂಸ್

ಪೋಪ್ ಫ್ರಾನ್ಸಿಸ್ ಅವರು ತಮ್ಮ ಪೇಪಲ್ ಅಲ್ಮೊನೆರ್ ಆದ ಕಾರ್ಡಿನಲ್ ಕೊನ್ರಾಡ್ ಕ್ರಜೇವ್ಸ್ಕಿ ಅವರನ್ನು 4 ನೂತನ ಆ್ಯಂಬುಲೆನ್ಸ್'ಗಳೊಂದಿಗೆ ಉಕ್ರೇನ್ ದೇಶಕ್ಕೆ ಕಳುಹಿಸಿದ್ದಾರೆ. ಈ ಆ್ಯಂಬುಲೆನ್ಸ್'ಗಳು ಯುದ್ಧಪೀಡಿತ ಪ್ರದೇಶಗಳಲ್ಲಿ ಜೀವಗಳನ್ನು ಉಳಿಸಲು ನೆರವಾಗುತ್ತವೆ. 

ಉಕ್ರೇನ್ ಜನತೆ ಮತ್ತೊಮ್ಮೆ ಯುದ್ಧದ ಕಾರ್ಮೋಡದ ಛಾಯೆಯಲ್ಲೇ ಮತ್ತೊಂದು ಈಸ್ಟರ್ ಆಚರಣೆಗೆ ಸಜ್ಜಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪೋಪ್ ಫ್ರಾನ್ಸಿಸ್ ಅವರು ಮತ್ತೊಮ್ಮೆ ಉಕ್ರೇನ್ ಜನತೆಗೆ ತಮ್ಮ ಸಾಮೀಪ್ಯವನ್ನು ಹಾಗೂ ಪ್ರಾರ್ಥನೆಗಳನ್ನು ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಪೋಪ್ ಫ್ರಾನ್ಸಿಸ್ ಅವರು ತಮ್ಮ ಪೇಪಲ್ ಅಲ್ಮೊನೇರ್ ಕಾರ್ಡಿನಲ್ ಕೊನ್ರಾಡ್ ಕ್ರಜೇವ್ಸ್ಕಿ ಅವರನ್ನು ಉಕ್ರೇನ್ ದೇಶಕ್ಕೆ 4 ನೂತನ ಆ್ಯಂಬುಲೆನ್ಸ್'ಗಳೊಂದಿಗೆ ಕಳುಹಿಸಿದ್ದಾರೆ.

ಈ ಆ್ಯಂಬುಲೆನ್ಸ್'ಗಳು ಯುದ್ಧ ನಿರತ ಉಕ್ರೇನ್'ನಲ್ಲಿ ಜೀವಗಳನ್ನು ಉಳಿಸಲು ನೆರವಾಗಲಿವೆ.

ಪೋಪ್ ಫ್ರಾನ್ಸಿಸ್ ಅವರು ಉಕ್ರೇನ್ ದೇಶದಲ್ಲಿ ಯುದ್ಧ ಆರಂಭವಾದಾಗಿನಿಂದ ಈವರೆಗೂ ಅಲ್ಲಿ ಯುದ್ಧವನ್ನು ನಿಲ್ಲಿಸುವಂತೆ ಕರೆ ನೀಡಿದ್ದಾರೆ. ಸಾಕಷ್ಟು ಬಾರಿ ಅವರು ಕೇವಲ ಶಾಂತಿಗಾಗಿ ಕರೆ ನೀಡದೆ ರಾಜತಾಂತ್ರಿಕವಾಗಿಯೂ ಸಹ ಯುದ್ಧವನ್ನು ನಿಲ್ಲಿಸಲು ಅವಿರತ ಪ್ರಯತ್ನಗಳನ್ನು ಮಾಡುತ್ತಲೇ ಬಂದಿದ್ದಾರೆ. ಪೋಪ್ ಫ್ರಾನ್ಸಿಸ್ ಅವರು ಯುದ್ಧ ಎಂದಿಗೂ ಸೋಲಾಗಿದೆ ಎಂದು ಹೇಳುತ್ತಾ, ಇದರಿಂದ ನಲುಗುವ ಜನತೆಗಾಗಿ, ವಿಶೇಷವಾಗಿ ಮಕ್ಕಳಿಗಾಗಿ ತಮ್ಮ ಕಾಳಜಿಯನ್ನು ವ್ಯಕ್ತಪಡಿಸುತ್ತಲೇ ಬಂದಿದ್ದಾರೆ.

ಪೋಪ್ ಫ್ರಾನ್ಸಿಸ್ ಅವರು ಉಡುಗೊರೆಯಾಗಿ ನೀಡಿರುವ ನೂತನ ಅ್ಯಂಬುಲೆನ್ಸ್ಗಳ ಮೇಲೆ ವ್ಯಾಟಿಕನ್ನಿನ ಲಾಂಛನವಿದೆ ಎಂದು ವ್ಯಾಟಿಕನ್ನಿನ ದಾನ ಆಯೋಗವು ಪ್ರಕಟಣೆಯಲ್ಲಿ ತಿಳಿಸಿದೆ.      

07 ಏಪ್ರಿಲ್ 2025, 16:55