ಶುಭ ಸಂದೇಶದ ವ್ಯಕ್ತಿ ಚಿತ್ರಣಗಳು: ಒಳ್ಳೆಯ ಕಳ್ಳ
ವರದಿ: ವ್ಯಾಟಿಕನ್ ನ್ಯೂಸ್
ಶುಭ ಸಂದೇಶದ ವ್ಯಕ್ತಿ ಚಿತ್ರಣಗಳ ಸಾಲಿನಲ್ಲಿ ಪೋಪ್ ಫ್ರಾನ್ಸಿಸ್ ಅವರು ಎರಡನೆಯ ಸರಣಿಯಲ್ಲಿ ಒಳ್ಳೆಯ ಕಳ್ಳನ ಕುರಿತು ನಿರೂಪಿಸಿದ್ದಾರೆ.
ಪೋಪ್ ಫ್ರಾನ್ಸಿಸ್ ಅವರು ಯೇಸು ಕ್ರಿಸ್ತರ ಬದುಕಿನಲ್ಲಿ ಬಂದು ಹೋದ ವಿವಿಧ ವ್ಯಕ್ತಿಗಳ ವ್ಯಕ್ತಿ ಚಿತ್ರಣಗಳನ್ನು ವ್ಯಾಖ್ಯಾನಿಸಿದ್ದಾರೆ. ಪೋಪ್ ಫ್ರಾನ್ಸಿಸ್ ಅವರ ಈ ವ್ಯಾಖ್ಯಾನಗಳನ್ನು ವಿಡಿಯೋ ಸರಣಿಗಳಾಗಿ ಈಸ್ಟರ್ ಹಬ್ಬಕ್ಕೆ ಪ್ರಸಾರ ಮಾಡಲು ವ್ಯಾಟಿಕನ್ನಿನ ಮಾಧ್ಯಮ ಸಂವಹನ ಪೀಠ, ವ್ಯಾಟಿಕನ್ ಗ್ರಂಥಾಲಯ ಹಾಗೂ ರೋಮ್ ನಗರದ ಸಾರ್ವಜನಿಕ ಪ್ರಸರಣ ಸಂಸ್ಥೆ ರಾಯ್ ಕುಲ್ಚುರಾ ನಿರ್ಧರಿಸಿದೆ. ಹದಿನೆಂಟು ಎಪಿಸೋಡುಗಳ ಈ ಸರಣಿಯನ್ನು ಪೋಪ್ ಫ್ರಾನ್ಸಿಸ್ ಅವರು ವ್ಯಾಖ್ಯಾನಿಸಿ ನಿರೂಪಿಸಿದ್ದಾರೆ ಎಂದು ಹೇಳಲಾಗಿದೆ.
ಅಂದ್ರೇಯ ತೊರ್ನಿಯೆಲ್ಲಿ ಹಾಗೂ ಲುಚಿಯೋ ಬ್ರುನೆಲ್ಲಿ ಅವರು ಈ ಸರಣಿಯನ್ನು ಸೃಷ್ಟಿಸಿದ್ದು, ರೆನಾಟೋ ಸರಿಸೋಲಾ ಅವರು ಇದನ್ನು ನಿರ್ದೇಶಿಸಿ, ಚಿತ್ರೀಕರಿಸಿದ್ದಾರೆ. ಮಿಖಿಲೆಂಜಲೋ ಪಾರ್ಮಕ್ಕಿ ಅವರು ಇದಕ್ಕೆ ಹಿನ್ನೆಲೆ ಸಂಗೀತವನ್ನು ನೀಡಿದ್ದಾರೆ.
ಈ ವಿಡಿಯೋ ಸರಣಿಗಳ ಇಂಗ್ಲೀಷ್ ಅನುವಾದಕ್ಕಾಗಿ ನೀವು ಕ್ಲೋಸ್ಡ್ ಕ್ಯಾಪ್ಷನ್ ಅನ್ನು ಉಪಯೋಗಿಸಬಹುದು.
ವ್ಯಾಟಿಕನ್ನಿನ ಸಂಪಾದಕೀಯ ನಿರ್ದೇಶಕರಾಗಿರುವಂತಹ ಅಂದ್ರೇಯ ತೊರ್ನಿಯೆಲ್ಲಿ ಅವರು ಈ ಕುರಿತು ಮಾತನಾಡಿ "ಪೋಪ್ ಫ್ರಾನ್ಸಿಸ್ ಅವರು ಇನ್ನೂ ಚೇತರಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಅವರ ಧ್ವನಿಯನ್ನು ನಾವು ಹೆಚ್ಚು ಕೇಳಲಾಗುತ್ತಿಲ್ಲ. ಈ ಸಂದರ್ಭದಲ್ಲಿ ಈ ವಿಡಿಯೋ ಸರಣಿಗಳು ಪೋಪ್ ಫ್ರಾನ್ಸಿಸ್ ಅವರ ಧ್ವನಿಯನ್ನು ನಾವು ಹೆಚ್ಚು ಕೇಳಲು ಅವಕಾಶ ಮಾಡಿಕೊಡುತ್ತವೆ" ಎಂದು ಹೇಳಿದ್ದಾರೆ.