ಶನಿವಾರ ಬೆಳಿಗ್ಗೆ ಅಂತ್ಯಕ್ರಿಯೆಗೆ ಮುಂಚಿತವಾಗಿ ವಿಶ್ವಗುರುವಿನ ಪಾರ್ಥೀವ ಶರೀರದ ಶವಪೆಟ್ಟಿಗೆಯನ್ನು ಮುಚ್ಚಲಾಯಿತು
ಆನ್ ಪ್ರೆಕೆಲ್
ವಿಶ್ವಗುರು ಫ್ರಾನ್ಸಿಸ್ ರವರ ಅಂತಿಮ ವಿದಾಯದ ಅಂತ್ಯಕ್ರಿಯೆಯ ದಿವ್ಯಬಲಿಪೂಜೆಯ ಮುನ್ನಾದಿನದಂದು, ಅವರ ಪಾರ್ಥೀವ ಶರೀರದ ಶವಪೆಟ್ಟಿಗೆಯನ್ನು ಸಾಂಭ್ರಮಿಕ ರೀತಿಯಲ್ಲಿ ಮುಚ್ಚಲಾಗಿದೆ.
ಬುಧವಾರದಿಂದ ವಿಶ್ವಗುರು ಸಂತ ಪೇತ್ರರ ಮಹಾದೇವಾಲಯದಲ್ಲಿ ವಾಸ್ತವ್ಯ ಹೂಡಿದ್ದರು. ಕಳೆದ ಮೂರು ದಿನಗಳಲ್ಲಿ ಒಟ್ಟು ಸುಮಾರು 250,000 ಜನಸಂದಣಿ ಸೇರಿದ್ದರಿಂದ, ಕೊನೆಯ ಶೋಕತಪ್ತರು ಗೌರವ ಸಲ್ಲಿಸುತ್ತಿದ್ದಂತೆ ಸಂತ ಪೇತ್ರರ ಮಹಾದೇವಾಲಯದ ಸ್ಥಳದಿಂದ ಖಾಲಿಯಾಯಿತು.
ಶವಪೆಟ್ಟಿಗೆಯನ್ನು ಮುಚ್ಚುವ ವಿಧಿ
ಮೃತ ಹೊಂದಿದ ವಿಶ್ವಗುರುವನ್ನು ಕನ್ಫೆಸಿಯೊ ಬಲಿಪೀಠದ ಮುಂದೆ, ಮರದ ಶವಪೆಟ್ಟಿಗೆಯಲ್ಲಿ, ಕೆಂಪು ಚಾಸುಬಲ್‌ನಲ್ಲಿ ಸುತ್ತಿ, ಧರ್ಮಾಧ್ಯಕ್ಷರ ಬಿಳಿ ಶಿರಸ್ತ್ರಾಣ ಮತ್ತು ಜಪಮಾಲೆಯನ್ನು ಕೈಯಲ್ಲಿ ಹಿಡಿದುಕೊಂಡು, ಶವಪೆಟ್ಟಿಗೆಯನ್ನು ನೆಲದ ಮಟ್ಟದಲ್ಲಿ, ಕ್ಯಾಟಫಾಲ್ಕ್ ಇಲ್ಲದೆ ಇರಿಸಲಾಗಿತ್ತು. ಇದು ವಿಶ್ವಗುರು ಫ್ರಾನ್ಸಿಸ್ ರವರ ಸ್ವಂತ ನಿರ್ಧಾರವಾಗಿತ್ತು.
ಕಾರ್ಡಿನಲ್-ಕ್ಯಾಮೆರ್ಲೆಂಗೊ ಕೆವಿನ್ ಫಾರೆಲ್ ರವರ ನೇತೃತ್ವದಲ್ಲಿ ನಡೆದ ಸಮಾರಂಭವು, ಜಾರ್ಜ್ ಮಾರಿಯೋ ಬರ್ಗೊಗ್ಲಿಯೊರವರ ಜೀವನದ ಹಂತಗಳು ಮತ್ತು ವಿಶ್ವಗುರುವಾಗಿ ಅವರ ಪ್ರಮುಖ ಚಟುವಟಿಕೆಗಳನ್ನು ಪಟ್ಟಿ ಮಾಡುವ ದಾಖಲೆಯನ್ನು ಓದುವುದರೊಂದಿಗೆ ಪ್ರಾರಂಭವಾಯಿತು. 266 ನೇ ವಿಶ್ವಗುರುಗಳ ಸ್ಮರಣೆಯು "ಧರ್ಮಸಭೆ ಮತ್ತು ಎಲ್ಲಾ ಮಾನವೀಯತೆಯ ಹೃದಯದಲ್ಲಿಹಾಗೇಯೇ ಉಳಿಯುತ್ತದೆ" ಎಂದು ಅದು ಹೇಳಿದೆ.
ಉಲ್ಲೇಖಿಸಲಾದ ಮೈಲಿಗಲ್ಲುಗಳಲ್ಲಿ 1980ರ ದಶಕದ ಅಂತ್ಯದಲ್ಲಿ ಜರ್ಮನಿಯಲ್ಲಿ ಅವರ ವಾಸ್ತವ್ಯ ಮತ್ತು ಅರ್ಜೆಂಟೀನಾದಲ್ಲಿ ಅವರ ಬಹುಮುಖಿ ಕೆಲಸ ಸೇರಿವೆ: "ಅವರು ತಮ್ಮ ಮಹಾಧರ್ಮಕ್ಷೇತ್ರದಲ್ಲಿ ಒಬ್ಬ ಸರಳ ಮತ್ತು ಜನಪ್ರಿಯ ಧರ್ಮಗುರುವಾಗಿದ್ದರು, ಅವರು ಮೆಟ್ರೋ ಮತ್ತು ಬಸ್‌ನಲ್ಲಿಯೂ ಸಹ ದೂರದವರೆಗೆ ಪ್ರಯಾಣಿಸಿದರು. ಅವನು ಒಂದು ಫ್ಲಾಟ್‌ನಲ್ಲಿ ವಾಸಿಸುತ್ತಿದ್ದು, ತಮ್ಮ ಆಹಾರವನ್ನು ತಾವೇ ಸಿದ್ದ ಮಾಡಿಕೊಳ್ಳುತ್ತಿದ್ದರು. ಏಕೆಂದರೆ ಅವರು ಒಬ್ಬ ಸಾಮಾನ್ಯ ವ್ಯಕ್ತಿಯಂತೆ ಭಾವಿಸಿದ್ದರಿಂದ ತನ್ನದೇ ಆದ ಆಹಾರವನ್ನು ತಯಾರಿಸುತ್ತಿದ್ದನು.”
ಮುಖವನ್ನು ಮುಚ್ಚುವ ವಿಧಿ
ಮಹಾಧರ್ಮಾಧ್ಯಕ್ಷರಾದ ಡಿಯಾಗೋ ರಾವೆಲ್ಲಿರವರು ವಿಶ್ವಗುರುಗಳ ಮುಖದ ಮೇಲೆ ಬಿಳಿ ರೇಷ್ಮೆ ಬಟ್ಟೆಯನ್ನು ಹರಡಿದರು, ಕಾರ್ಡಿನಲ್-ಕ್ಯಾಮೆರ್ಲೆಂಗೊ ಫಾರೆಲ್ ರವರು ವಿಶ್ವಗುರು ಫ್ರಾನ್ಸಿಸ್ ರವರ ಮೇಲೆ ಪವಿತ್ರ ನೀರನ್ನು ಸಿಂಪಡಿಸಿದರು. ನಂತರ ಅವರ ಪೋನ್ಶಿಪ್ ಸಮಯದಲ್ಲಿ ಮುದ್ರಿಸಲಾದ ನಾಣ್ಯಗಳು ಮತ್ತು ಪದಕಗಳನ್ನು ಹೊಂದಿರುವ ಚೀಲವನ್ನು ವಿಶ್ವಗುರುರವರೊಂದಿಗೆ ಶವಪೆಟ್ಟಿಗೆಯಲ್ಲಿ ಇರಿಸಲಾಯಿತು.
ನಂತರ ಸತುವಿನ ಶವಪೆಟ್ಟಿಗೆಯ ಮೇಲೆ ಮುಚ್ಚಳವನ್ನು ವಿಶ್ವಗುರು ಫ್ರಾನ್ಸಿಸ್ ರವರ ಶಿಲುಬೆ ಮತ್ತು ಲಾಂಛನ ಮತ್ತು ವಿಶ್ವಗುರುಗಳ ಹೆಸರು, ಅವರ ಜೀವಿತಾವಧಿ ಮತ್ತು ಪೆಟ್ರಿನ್ ಸೇವೆಯನ್ನು ಹೊಂದಿರುವ ಫಲಕದೊಂದಿಗೆ ಇರಿಸಲಾಯಿತು, ಈ ಎಲ್ಲಾ ವಿಧಿಗಳನ್ನು ಕೀರ್ತನೆಗಳನ್ನು ಹಡುವ ಸಮಯದಲ್ಲಿ ಮಾಡಲಾಯಿತು. ಸತುವಿನ ಶವಪೆಟ್ಟಿಗೆಯನ್ನು ಮುಚ್ಚಿದ ನಂತರ, ಕಾರ್ಡಿನಲ್-ಕ್ಯಾಮೆರ್ಲೆಂಗೊರವರು ಮತ್ತು ಪೇಪಲ್ ಹೌಸ್‌ಹೋಲ್ಡ್‌ನ ಪ್ರಿಫೆಕ್ಚರ್, ದೈವಾರಾಧವನಾ ವಿಧಿ ಆಚರಣೆಗಳ ಕಚೇರಿ ಮತ್ತು ವ್ಯಾಟಿಕನ್ ಅಧ್ಯಾಯದ ಮುದ್ರೆಗಳನ್ನು ಮುದ್ರಿಸಲಾಯಿತು. ನಂತರ ನಿಧನವಾಗಿರುವ ವಿಶ್ವಗುರುಗಳ ಶಿಲುಬೆ ಮತ್ತು ಲಾಂಛನವನ್ನು ಹೊಂದಿರುವ ಮರದ ಶವಪೆಟ್ಟಿಗೆಯನ್ನು ಮುಚ್ಚಲಾಯಿತು.