MAP

202 202  

ಕಾರ್ಡಿನಲ್ ಕ್ರಜೇವ್ಸ್ಕಿ: ಉಕ್ರೇನ್ ದೇಶಕ್ಕೆ ನನ್ನ ಭೇಟಿಗೆ ಬೆಂಬಲ ಸೂಚಿಸಲು ಪೋಪ್ ಕರೆ ಮಾಡಿದರು

ಪೋಪ್ ಫ್ರಾನ್ಸಿಸ್ ಅವರು ತಮ್ಮ ಪೇಪಲ್ ಅಲ್ಮೊನೇರ್ (ದಾನ ವಿತರಕ) ಕಾರ್ಡಿನಲ್ ಕೊನ್ರಾಡ್ ಕ್ರಜೇವ್ಸ್ಕಿ ಅವರಿಗೆ ಕರೆ ಮಾಡಿ, ಉಕ್ರೇನ್ ದೇಶಕ್ಕೆ ಅವರು ಪೋಪರ ಉಡುಗೊರೆಯಾದ ನಾಲ್ಕು ಆ್ಯಂಬುಲೆನ್ಸ್ಗಳನ್ನು ನೀಡಲು ಹೋಗಿರುವ ಹಿನ್ನೆಲೆ ಅವರಿಗೆ ಬೆಂಬಲವನ್ನು ಸೂಚಿಸಿದ್ದಾರೆ ಹಾಗೂ ಇದೇ ವೇಳೆ ಉಕ್ರೇನ್ ಜನತೆಗೆ ತಮ್ಮ ಆಶೀರ್ವಾದವನ್ನು ನೀಡಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಜಪೋರಿಝಿಯಾದಲ್ಲಿ ಒಂದು ಕಷ್ಟಕರವಾದ ದಿನದ ಸಮಯದಲ್ಲಿ, ಪೋಪ್ ಫ್ರಾನ್ಸಿಸ್ ಅವರಿಗೆ ಕರೆ ಮಾಡಿದಾಗ ಕಾರ್ಡಿನಲ್ ಕ್ರೇಜೆವ್ಸ್ಕಿ ಅವರು ಆಹಾರ ಸಹಾಯವನ್ನು ವಿತರಿಸುತ್ತಿದ್ದರು ಎಂದು ಹೇಳಿದರು.

"ಇದು ಪವಿತ್ರ ತಂದೆಯಿಂದ ಬಂದ ಅನಿರೀಕ್ಷಿತ ಕರೆ" ಎಂದು ಕಾರ್ಡಿನಲ್ ಹೇಳಿದರು. "ಉಕ್ರೇನ್‌ನಲ್ಲಿ ಸೇವಾಕಾರ್ಯ ಹೇಗೆ ನಡೆಯುತ್ತಿದೆ ಎಂದು ಅವರು ತಿಳಿದುಕೊಳ್ಳಲು ಬಯಸಿದ್ದರು. ಅವರು ಎಲ್ಲರಿಗೂ ಶುಭಾಶಯ ಹೇಳಲು ಹೇಳಿದರು ಮತ್ತು ಅವರ ಆಶೀರ್ವಾದವನ್ನು ನೀಡಿದರು. ಇಲ್ಲಿ ತುಂಬಾ ಚಳಿ ಇದೆ ಎಂದು ನಾನು ಉತ್ತರಿಸಿದೆ, ಮತ್ತು ಅವರು ತಮ್ಮ ಹರ್ಷಚಿತ್ತದಿಂದ, 'ನಿಮಗೆ ಹೇಗೆ ಬೆಚ್ಚಗಿರಬೇಕೆಂದು ತಿಳಿದಿದೆ' ಎಂದು ಹೇಳಿದರು."

ವಿನಿಮಯವನ್ನು ವಿವರಿಸುವಾಗ ಕಾರ್ಡಿನಲ್ ಕ್ರೇಜೆವ್ಸ್ಕಿ ಮುಗುಳ್ನಗುತ್ತಾ, ಫೋನ್ ಕರೆ ಎಲ್ಲರ ಹೃದಯಗಳನ್ನು ಬೆಚ್ಚಗಾಗಿಸುವ ತಕ್ಷಣದ ಪರಿಣಾಮವನ್ನು ಬೀರಿತು ಎಂದು ಹೇಳಿದರು.

ನಂತರ ಕಾರ್ಡಿನಲ್ ದಿನದ ಬದ್ಧತೆಗಳ ಬಗ್ಗೆ ಚಿಂತಿಸಿದರು, ನಾಲ್ಕು ಗಂಟೆಗಳ ನಂತರ ಪ್ರಾರಂಭವಾದ ಆಹಾರ ವಿತರಣೆಗಾಗಿ ಬೆಳಿಗ್ಗೆ 5 ಗಂಟೆಯಿಂದ ಕಾಯುತ್ತಿದ್ದ ಬಡ ಜನರ ಸಾಲನ್ನು ನೆನಪಿಸಿಕೊಂಡರು - ಇದು ಜನರು ಎದುರಿಸುತ್ತಿರುವ ಗಂಭೀರ ಕಷ್ಟಗಳ ಸಂಕೇತವಾಗಿದೆ" ಎಂದು ಹೇಳಿದರು.

"ಇದು ಬಹಳ ಅರ್ಥಪೂರ್ಣವಾದ ಭೇಟಿಯಾಗಿತ್ತು" ಎಂದು ಹೇಳಿದ ಅವರು "ಆ ಜನರ ದೃಷ್ಟಿಯಲ್ಲಿ, ನಾನು ಭರವಸೆ ಮತ್ತು ಪ್ರೀತಿಯನ್ನು ಕಂಡೆ, ಮತ್ತು ಚಳಿಯ ಹೊರತಾಗಿಯೂ, ಅವರು ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಈ ವಿಪತ್ತು ಶೀಘ್ರದಲ್ಲೇ ಕೊನೆಗೊಳ್ಳಲಿ ಎಂದು ಅವರು ಆಶಿಸುತ್ತಾರೆ" ಎಂದು ಕಾರ್ಡಿನಲ್ ಕೊನ್ರಾಡ್ ಕ್ರಜೇವ್ಸ್ಕಿ ಅವರು ಹೇಳಿದರು.

09 ಏಪ್ರಿಲ್ 2025, 17:26