ಕಾರ್ಡಿನಲ್ ಕ್ರಾಜೆವ್ಸ್ಕಿ ಪೋಪ್ ರವರ 4 ಆಂಬ್ಯುಲೆನ್ಸ್‌ಗಳ ಉಡುಗೊರೆಯನ್ನು ಉಕ್ರೇನ್‌ಗೆ ತರುತ್ತಾರೆ.
ವರದಿ: ವ್ಯಾಟಿಕನ್ ನ್ಯೂಸ್
ಯುದ್ಧದಿಂದ ಗುರುತಿಸಲ್ಪಟ್ಟ ಮತ್ತೊಂದು ಪಾಸ್ಕ ಹಬ್ಬವನ್ನು ಉಕ್ರೇನ್ ಎದುರಿಸುತ್ತಿರುವಾಗ, ಪೋಪ್ ಫ್ರಾನ್ಸಿಸ್ ಮೂರು ವರ್ಷಗಳ ಹಿಂದೆ "ಮಾನವೀಯತೆಗಾಗಿ ನೋವಿನ ಮತ್ತು ಅಪಮಾನದ ವಾರ್ಷಿಕೋತ್ಸವ" ಎಂದು ಕರೆಯುವುದರ ಮೂಲಕ ಇಂದಿಗೂ ಬಳಲುತ್ತಿರುವ ಜನರಿಗೆ ತಮ್ಮ ಕ್ರಿಯೆಗಳ ಮೂಲಕ ತಮ್ಮ ನಿಕಟತೆಯನ್ನು ತೋರಿಸುತ್ತಲೇ ಇದ್ದಾರೆ.
ದಾನಧರ್ಮಗಳ ಸೇವೆಗಳ ಸಮಿತಿಯು 2024 ಜಗದ್ಗುರುಗಳ ಊರ್ಬಿ ಎತ್ ಆರ್ಬಿ ಸಂದೇಶದ ಉಲ್ಲೇಖವನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಜಗದ್ಗುರುಗಳ ನುಡಿಯುವಂತೆ, 'ಇಡೀ ಪ್ರಪಂಚವು ಯುದ್ಧಗಳಿಂದ ತಮ್ಮ ಕದಗಳನ್ನು ಮುಚ್ಚಿಕೊಳ್ಳುತಿದೆ ಆದರೆ ಯೇಸುಕ್ರಿಸ್ತರು ಮಾತ್ರ ಈ ಕದಗಳನ್ನು ತೆರೆದು ಜೀವವನ್ನು ನೀಡುವವರಾಗಿದ್ದಾರೆ'.
ಈ ನಾಲ್ಕು ಆಂಬುಲೆನ್ಸ್ ಗಳು ವ್ಯಾಟಿಕನ್ ರಾಜ್ಯದ ಲಾಂಛನವನ್ನು ಹೊಂದಿದ್ದು ತೀವ್ರ ಯುದ್ಧದ ಹಾನಿಯನ್ನು ಅನುಭವಿಸಿದ ಪ್ರದೇಶಗಳಿಗೆ ಸೇರಿವೆ. ಕಾಡಿನಲ್ಲಿ ಕೊಂಡ್ರಾಡ್ ಕಚೇಸುಕ್ಕಿ ಜಗದ್ಗುರುಗಳ ದಾನ ಧರ್ಮಾಧಿಕಾರಿ ಉಕ್ರೇನಲ್ಲಿ ಕೆಲವು ದಿನಗಳು ಜನರೊಂದಿಗೆ ನೆಲೆಸಿದ್ದು, ಅವರೊಡನೆ ಪ್ರಾರ್ಥಿಸುತ್ತಾ, ಜಗದ್ಗುರುಗಳ ಆರೈಕೆ ಮತ್ತು ಕಾಳಜಿಯನ್ನು ಸಾಕಾರಗೊಳಿಸುತ್ತಾರೆ.
ಜಗದ್ಗುರುಗಳು ಈ ಜುಬಿಲಿ ವರ್ಷದ ‘ಸ್ಪೆಸ್ ನಾನ್ ಕಾನ್ಫಂಡಿಟ್’ ಇದರಲ್ಲಿ ಬರೆಯುವ ಹಾಗೆ, 'ಭರವಸೆಯ ಮೊದಲನೇ ಚಿಹ್ನೆ ಪ್ರಪಂಚದಲ್ಲಿ ಶಾಂತಿಗಾಗಿ ಹಾತೊರೆಯುವುದಾಗಿದೆ. ಆದರೆ ಯುದ್ಧಗಳ ಮೂಲಕ ಈ ಆಸೆಯೂ ಕಮರಿ ಹೋಗುತ್ತಿದೆ.... ಶಾಂತಿಯ ಅಗತ್ಯತೆ ನಮ್ಮೆಲ್ಲರಿಗೂ ಸವಾಲನ್ನು ಎಸಗುತಿದೆ ಮತ್ತು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದರ ಮೂಲಕ ಶಾಂತಿಯನ್ನು ಪ್ರಚುರಪಡಿಸಬೇಕಾಗಿದೆ.
ಜಗದ್ಗುರುಗಳ ಈ ನಾಲ್ಕು ಆಂಬುಲೆನ್ಸ್ ಗಳ ಕೊಡುಗೆ ಪ್ರಭು ಕ್ರಿಸ್ತರನ್ನು ಹೊಲುವ ಪವಿತ್ರ ಜುಬಿಲಿ ವರ್ಷದ ಭರವಸೆಯ ಪ್ರತೀಕವಾಗಿದೆ.