ಕಾರ್ಡಿನಲ್ ಬೊರವರು: 'ವಿಶ್ವಗುರು ಫ್ರಾನ್ಸಿಸ್ ರವರು ಏಷ್ಯಾದ ಜನರ ಬಗ್ಗೆ ಆಳವಾದ ಗೌರವವನ್ನು ಹೊಂದಿದ್ದರು'
ಡೆಬೊರಾ ಕ್ಯಾಸ್ಟೆಲ್ಲಾನೊ ಲುಬೊವ್
ವಿಶ್ವಗುರು ಫ್ರಾನ್ಸಿಸ್ ರವರು ಮುರಿದ, ಮರೆತುಹೋದ ಮತ್ತು ನಾಡಿನ ಎಲ್ಲರೊಂದಿಗೆ ಸಂಬಂಧ ಹೊಂದಿದ್ದರು. ಲೋಕವು ಪಕ್ಕಕ್ಕೆ ತಳ್ಳಿದವರಿಗೆ, ಅವರು ತನ್ನ ಹೃದಯದಲ್ಲಿ ಸ್ಥಳಾವಕಾಶ ಮಾಡಿಕೊಟ್ಟರು. ಈಗ, ಜಗತ್ತು ಅವರ ನೆನಪಿನಲ್ಲಿ ಶೋಕಿಸುತ್ತಿರುವಾಗ, ನಾವು ಯಾವಾಗಲೂ ಮಹಾನ್ ಪ್ರೀತಿಯನ್ನು ಅನುಸರಿಸುವ ದುಃಖವನ್ನು ಅನುಭವಿಸುತ್ತೇವೆ.
ವ್ಯಾಟಿಕನ್ ಸುದ್ಧಿಗೆ ನೀಡಿದ ವ್ಯಾಪಕ ಸಂದರ್ಶನದಲ್ಲಿ, ಯಾಂಗೂನ್‌ನ ಮಹಾಧರ್ಮಾಧ್ಯಕ್ಷರು ಮತ್ತು ಮ್ಯಾನ್ಮಾರ್‌ನ ಧರ್ಮಾಧ್ಯಕ್ಷರುಗಳ ಸಮ್ಮೇಳನದ ಅಧ್ಯಕ್ಷರೂ, ಏಷ್ಯಾದ ಧರ್ಮಾಧ್ಯಕ್ಷರುಗಳ ಸಮ್ಮೇಳನಗಳ ಒಕ್ಕೂಟದ ಅಧ್ಯಕ್ಷರಾಗಿ ಎರಡು ಅವಧಿಗೆ ಸೇವೆ ಸಲ್ಲಿಸಿದ ಕಾರ್ಡಿನಲ್ ಚಾರ್ಲ್ಸ್ ಮೌಂಗ್ ಬೊರವರು, ಏಪ್ರಿಲ್ 21 ರಂದು ಪ್ರಭುವಿನ ಬಳಿಗೆ ಹಿಂದಿರುಗಿದ ನಂತರ ದಿವಂಗತ ವಿಶ್ವಗುರು ಫ್ರಾನ್ಸಿಸ್ ರವರನ್ನು ಈ ರೀತಿ ಸ್ಮರಿಸಿದರು.
ಕಾರ್ಡಿನಲ್ ಬೊರವರು ವಿಶ್ವಗುರು ಫ್ರಾನ್ಸಿಸ್ ರವರಿಂದ ಮ್ಯಾನ್ಮಾರ್‌ನ ಮೊದಲ ಕಾರ್ಡಿನಲ್ ಆಗಿ ನೇಮಕಗೊಂಡ ಸಂತೋಷವನ್ನು ಪಡೆದರು ಮತ್ತು ನವೆಂಬರ್ 2017ರಲ್ಲಿ ಪೂಜ್ಯ ತಂದೆಯನ್ನು ತಮ್ಮ ರಾಷ್ಟ್ರಕ್ಕೆ ಸ್ವಾಗತಿಸಿದರು.
ವಿಶ್ವಗುರು ಫ್ರಾನ್ಸಿಸ್ ರವರ ಐತಿಹಾಸಿಕ ಪ್ರೇಷಿತ ಪ್ರಯಾಣವನ್ನು ನೆನಪಿಸಿಕೊಂಡ ಕಾರ್ಡಿನಲ್ ರವರು, "ನಮ್ಮ ದೇಶಕ್ಕೆ ಭೇಟಿ ನೀಡದಂತೆ ವಿವಿಧ ವಲಯಗಳಿಂದ ಬಂದ ಒತ್ತಡದ ಹೊರತಾಗಿಯೂ ಮತ್ತು ಅನೇಕ ಸವಾಲುಗಳು ಎದುರಾಗಿದ್ದರೂ, ವಿಶ್ವಗುರು ಫ್ರಾನ್ಸಿಸ್ ರವರು ಬರಲು ನಿರ್ಧರಿಸಿದರು, ನಮ್ಮ ದೇಶಕ್ಕೆ ಆಗಮಿಸುವ ವಿಶ್ವಗುರುಗಳ ದೃಢ ನಿರ್ಧಾರ, ವಿಶ್ವಗುರುವು ನಮ್ಮ ಜನರ ದುಃಖದ ಮೇಲೆ ಪ್ರಜ್ವಲವಾದ ಜ್ಯೋತಿಯ ಬೆಳಕನ್ನು ಬೆಳಗಿಸಿದಂತಿತ್ತು" ಎಂದು ಹೇಳಿದರು.
ವಾಸ್ತವವಾಗಿ, "ವಿಶ್ವಗುರು ಫ್ರಾನ್ಸಿಸ್ ರವರು ಏಷ್ಯಾದ ಜನರ ಬಗ್ಗೆ ಆಳವಾದ ಪ್ರೀತಿಯನ್ನು ಹೊಂದಿದ್ದರು ಮತ್ತು ಮ್ಯಾನ್ಮಾರ್ ಜನರ ಮೇಲೆ ಅಪಾರ ಪ್ರೀತಿಯನ್ನು ಹೊಂದಿದರು ಎಂದು ಕಾರ್ಡಿನಲ್ ರವರು ನೆನಪಿಸಿಕೊಳ್ಳುತ್ತಾರೆ.
ಅನೇಕ ವರ್ಷಗಳಿಂದ, ವಿಶ್ವಗುರುಗಳು ಮ್ಯಾನ್ಮಾರ್‌ಗೆ ಶಾಂತಿ ಮತ್ತು ಸಹಾಯಕ್ಕಾಗಿ ನಿರಂತರವಾಗಿ ಮನವಿ ಮಾಡಿದ್ದಾರೆ ಮತ್ತು ಅವರ ನಿಧನಕ್ಕೂ ಮುಂಚೆಯೇ, ದುರಂತ ಭೂಕಂಪದಿಂದ ಹಾನಿಗೊಳಗಾದ ಎಲ್ಲರಿಗೂ ಸಂತಾಪ ಸೂಚಿಸಿದ್ದಲ್ಲದೆ, ಬಳಲುತ್ತಿರುವ ಜನರಿಗೆ ಸಹಾಯ ಮಾಡಲು ಅವರು ಜೀವನಾಂಶವನ್ನೂ ಸಹ ನೀಡಿದರು.