MAP

ಪೋಪರ ಮಾರ್ಚ್ ತಿಂಗಳ ಪ್ರಾರ್ಥನಾ ಉದ್ದೇಶ: ಭಿಕ್ಕಟ್ಟಿನಲ್ಲಿರುವ ಕುಟುಂಬಗಳಿಗಾಗಿ

ಪೋಪ್ ಫ್ರಾನ್ಸಿಸ್ ಅವರು ಮಾರ್ಚ್ ತಿಂಗಳ ತಮ್ಮ ಪ್ರಾರ್ಥನಾ ಉದ್ದೇಶವನ್ನು ಬಿಡುಗಡೆ ಮಾಡಿದ್ದು, ಭಿಕ್ಕಟ್ಟಿನಲ್ಲಿರುವ ಕುಟುಂಬಗಳಿಗಾಗಿ ಪ್ರಾರ್ಥಿಸುವಂತೆ ಕೋರಿದ್ದಾರೆ. ಯಾವುದೇ ಕುಟುಂಬ ಸಂಪೂರ್ಣವಲ್ಲ. ನಮ್ಮದೇ ಕುಟುಂಬಗಳ ಸದಸ್ಯರನ್ನು ನಾವು ಕ್ಷಮಿಸುವ ಮೂಲಕ ಮಾದರಿಯಾಗಬೇಕಿದೆ ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಪೋಪ್ ಫ್ರಾನ್ಸಿಸ್ ಅವರು ದಿ ಪೋಪ್ ವಿಡಿಯೋ ಮೂಲಕ ಪ್ರತಿ ತಿಂಗಳು ಪ್ರಾರ್ಥನಾ ಉದ್ದೇಶವನ್ನು ಹೇಳುತ್ತಾ, ವಿಶ್ವ ಧರ್ಮಸಭೆ ಈ ಉದ್ದೇಶಕ್ಕಾಗಿ ಆ ತಿಂಗಳು ಪ್ರಾರ್ಥಿಸುವಂತೆ ಕರೆ ನೀಡುತ್ತಾರೆ. ಈ ತಿಂಗಳ ಅವರ ಸಂದೇಶವನ್ನು ಅವರು ಆಸ್ಪತ್ರೆಗೆ ದಾಖಲಾಗುವ ಮುಂಚೆಯೇ ರೆಕಾರ್ಡ್ ಮಾಡಲಾಗಿತ್ತು. ಅದನ್ನು ಇದೀಗ ಪ್ರಸಾರ ಮಾಡಲಾಗುತ್ತಿದೆ. 

"ನಮ್ಮೆಲ್ಲರಿಗೂ ಸಂಪೂರ್ಣ, ಸಂತೋಷಕರ ಹಾಗೂ ಅತ್ಯುತ್ತಮ ಕುಟುಂಬ ಬೇಕು ಎಂಬ ಬಯಕೆ ಇರುತ್ತದೆ. ಅದು ತಪ್ಪಲ್ಲ. ಆದರೆ, ಜಗತ್ತಿನಲ್ಲಿ ಯಾವ ಕುಟುಂಬವೂ ಸಹ ಸಂಪೂರ್ಣವಲ್ಲ" ಎಂದು ಹೇಳಿರುವ ಪೋಪ್ ಫ್ರಾನ್ಸಿಸ್ ಅವರು "ಈ ಸಂಪೂರ್ಣತೆಗಾಗಿ ನಾವು ಹಂಬಲಿಸಬೇಕಿದೆ" ಎಂದು ಹೇಳಿದರು. ಮುಂದುವರೆದು ಮಾತನಾಡಿದ ಅವರು "ಕುಟುಂಬಗಳಿಗೆ ತಮ್ಮದೇ ಆದ ಸಂತೋಷ ಹಾಗೂ ದುಃಖಗಳಿರುತ್ತವೆ" ಎಂದು ಹೇಳಿದ್ದಾರೆ. 

ಇದೇ ವೇಳೆ ಪೋಪ್ ಫ್ರಾನ್ಸಿಸ್ ಅವರು ವಿಶ್ವದಲ್ಲಿನ ಭಿಕ್ಕಟ್ಟನ್ನು ಎದುರಿಸುತ್ತಿರುವ ಎಲ್ಲಾ ಕುಟುಂಬಗಳಿಗಾಗಿ ಈ ತಿಂಗಳು ಪ್ರಾರ್ಥಿಸುವಂತೆ ಅಖಿಲ ಧರ್ಮಸಭೆಗೆ ಕರೆ ನೀಡಿದ್ದಾರೆ.

ಕುಟುಂಬಗಳಲ್ಲಿ ಇರುವ ಭಿಕ್ಕಟ್ಟುಗಳನ್ನು ಹೋಗಲಾಡಿಸಲು ಇರುವ ಒಂದೇ ದಾರಿಯೆಂದರೆ ನಾವು ನಮ್ಮದೇ ಕುಟುಂಬ ಸದಸ್ಯರುಗಳನ್ನು ಕ್ಷಮಿಸಬೇಕು ಹಾಗೂ ಆ ಮೂಲಕ ಕೌಟುಂಬಿಕ ಸಂತೋಷ ಹಾಗೂ ಐಕ್ಯತೆಯಲ್ಲಿ ಭಾಗವಹಿಸಬೇಕು ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದಾರೆ. 

04 ಮಾರ್ಚ್ 2025, 16:22