ಪೋಪ್ :ಕರುಣೆಯ ಸೇವಾಕರ್ತರು ದೇವರ ಪ್ರೀತಿಗೆ ಸಾಕ್ಷಿಗಳಾಗುತ್ತಾರೆ
ವರದಿ: ವ್ಯಾಟಿಕನ್ ನ್ಯೂಸ್
ಜ್ಯೂಬಿಲಿಗಾಗಿ ರೋಮ್ ನಗರಕ್ಕೆ ಯಾತ್ರಿಕರಾಗಿ ಬಂದಿರುವ ಮಿಷನರೀಸ್ ಆಫ್ ಮರ್ಸಿ ಧಾರ್ಮಿಕ ಸಭೆಯ ಸಹೋದರ ಸಹೋದರಿಯರಿಗೆ ಸಂದೇಶವನ್ನು ಕಳುಹಿಸಿರುವ ಪೋಪ್ ಫ್ರಾನ್ಸಿಸ್ ಅವರು ಪರಿವರ್ತನೆ ಹಾಗೂ ಕ್ಷಮೆಯ ಮೂಲಕ ದೇವರು ನಮ್ಮ ಕಣ್ಣೀರನ್ನು ಒರೆಸುತ್ತಾರೆ ಎಂದು ಹೇಳಿದ್ದಾರೆ.
ಶನಿವಾರ ಪೋಪ್ ಫ್ರಾನ್ಸಿಸ್ ಅವರು ಈ ಸಂದೇಶವನ್ನು ನೀಡಿದ್ದು, ಪಾಪನಿವೇದನೆಯನ್ನು ಕೇಳುವವರಾಗಿ ಅವರು ಸಲ್ಲಿಸುತ್ತಿರುವ ಸೇವೆಗೆ ಅವರನ್ನು ಅಭಿನಂದಿಸಿದರು ಹಾಗೂ ಅವರಿಗೆ ಧನ್ಯವಾದಗಳನ್ನು ತಿಳಿಸಿದರು.
2016 ರಲ್ಲಿ ಪೋಪ್ ಫ್ರಾನ್ಸಿಸ್ ಅವರು ವಿಶ್ವದ ವಿವಿಧ ಧರ್ಮಕ್ಷೇತ್ರಗಳಿಂದ ಹಲವು ಗುರುಗಳನ್ನು ನೇಮಿಸಿ, ಅವರಿಗೆ ಪಾಪನಿವೇದನೆಯನ್ನು ಕೇಳುವ ಹಾಗೂ ಪವಿತ್ರ ಪೀಠಕ್ಕೆ ಮಾತ್ರ ಕ್ಷಮಿಸಲು ಅಧಿಕಾರ ಇರುವಂತಹ ಪಾಪಗಳನ್ನೂ ಸಹ ಕ್ಷಮಿಸುವಂತೆ ಅಧಿಕಾರವನ್ನಿತ್ತರು.
"ನಿಮ್ಮ ಸೇವೆಯ ಮೂಲಕ ನೀವು ತಂದೆಯಾದ ದೇವರ ಅನಂತ ಹಾಗೂ ನಿಷ್ಕಳಂಕ ಪ್ರೀತಿಗೆ ಸಾಕ್ಷಿಗಳಾಗಿರಿ ಹಾಗೂ ಎಲ್ಲರನ್ನೂ ಕ್ಷಮಿಸುವ ಮೂಲಕ ಅವರು ದೇವರಿಗೆ ಹತ್ತಿರವಾಗುವಂತೆ, ಮನ ಪರಿವರ್ತನೆ ಹೊಂದುವಂತೆ ನೆರವಾಗಿರಿ" ಎಂದು ಹೇಳಿದ್ದಾರೆ.