MAP

ದೈವ ಕರೆ ದಿನಕ್ಕೆ ಪೋಪ್ ಸಂದೇಶ: ಎಲ್ಲೆಡೆ ಕ್ರಿಸ್ತರ ಇರುವಿಕೆಯನ್ನು ಸಾರಬೇಕು

ಮುಂಬರುವ ವಿಶ್ವ ದೈವಕರೆಗಳಿಗಾಗಿ ಪ್ರಾರ್ಥನಾ ದಿನಕ್ಕೆ ಪೋಪ್ ಫ್ರಾನ್ಸಿಸ್ ಅವರು ಸಂದೇಶವನ್ನು ನೀಡಿದ್ದಾರೆ. ಇದೇ ವೇಳೆ ಅವರು ಹೃದಯಲ್ಲಿ ದೇವರ ಧ್ವನಿಗೆ ಕರೆ ನೀಡಬೇಕು ಎಂದು ಯುವ ಜನತೆಗೆ ಕರೆ ನೀಡಿದ್ದಾರೆ.

ವರದಿ: ಡೆವಿನ್ ವಾಟ್ಕಿನ್ಸ್

ಮುಂಬರುವ ವಿಶ್ವ ದೈವಕರೆಗಳಿಗಾಗಿ ಪ್ರಾರ್ಥನಾ ದಿನಕ್ಕೆ ಪೋಪ್ ಫ್ರಾನ್ಸಿಸ್ ಅವರು ಸಂದೇಶವನ್ನು ನೀಡಿದ್ದಾರೆ. ಇದೇ ವೇಳೆ ಅವರು ಹೃದಯಲ್ಲಿ ದೇವರ ಧ್ವನಿಗೆ ಕರೆ ನೀಡಬೇಕು ಎಂದು ಯುವ ಜನತೆಗೆ ಕರೆ ನೀಡಿದ್ದಾರೆ.  

ಪೋಪ್ ಫ್ರಾನ್ಸಿಸ್ ಅವರು ರೋಮ್ ನಗರದ ಜೆಮೆಲ್ಲಿ ಆಸ್ಪತ್ರೆಯಲ್ಲಿ ನ್ಯುಮೋನಿಯಾಕ್ಕೆ ಚಿಕಿತ್ಸೆಯನ್ನು ಪಡೆಯುತ್ತಿರುವ ಹೊತ್ತಿನಲ್ಲಿ ಮೇ 11 ರಂದು ನಡೆಯಲಿರುವ ವಿಶ್ವ ದೈವಕರೆಗಳಿಗಾಗಿ ಪ್ರಾರ್ಥನಾ ದಿನಕ್ಕೆ ಸಂದೇಶವನ್ನು ಬಿಡುಗಡೆಗೊಳಿಸಿದ್ದಾರೆ.

"ಭರವಸೆಯ ಯಾತ್ರಿಕರು: ಜೀವನದ ಉಡುಗೊರೆ" ಎಂಬ ಶೀರ್ಷಿಕೆಯ ಪೋಪ್ ಅವರ ಸಂದೇಶವು, ಪ್ರತಿಯೊಂದು ವೃತ್ತಿಯೂ - ಅದು ದೀಕ್ಷೆ ಪಡೆದ ಸೇವೆಯಾಗಿರಲಿ, ಪವಿತ್ರ ಜೀವನವಾಗಿರಲಿ ಅಥವಾ ಸಾಮಾನ್ಯ ಜನರಾಗಿರಲಿ - ಪ್ರತಿಯೊಬ್ಬ ವ್ಯಕ್ತಿಗೂ ದೇವರ ಭರವಸೆಯ ಸಂಕೇತವನ್ನು ಜಗತ್ತಿಗೆ ನೀಡಬೇಕು ಎಂದು ನೆನಪಿಸುತ್ತದೆ ಎಂದು ಪೋಪ್ ಫ್ರಾನ್ಸಿಸ್ ಹೇಳಿದರು.

ಅಭದ್ರತೆ, ಗುರುತಿನ ಬಿಕ್ಕಟ್ಟುಗಳು, ಇತರರನ್ನು ಅನ್ಯಾಯವಾಗಿ ನಡೆಸಿಕೊಳ್ಳುವುದು ಮತ್ತು ಸಾಮಾನ್ಯ ಉದಾಸೀನತೆಯ ಹಿನ್ನೆಲೆಯನ್ನು ಗಮನಿಸಿದರೆ, ಯುವಜನರು ಭವಿಷ್ಯವನ್ನು ನೋಡುವಾಗ ಆಗಾಗ್ಗೆ ನಿರಾಶೆ ಮತ್ತು ಗೊಂದಲವನ್ನು ಅನುಭವಿಸುತ್ತಾರೆ ಎಂದು ಅವರು ಗಮನಿಸಿದರು.

"ಆದರೂ ಮಾನವ ಹೃದಯವನ್ನು ಬಲ್ಲ ಭಗವಂತ ನಮ್ಮ ಅನಿಶ್ಚಿತತೆಯಲ್ಲಿ ನಮ್ಮನ್ನು ಕೈಬಿಡುವುದಿಲ್ಲ" ಎಂದು ಪೋಪ್ ಹೇಳಿದರು. "ನಾವು ಪ್ರೀತಿಸಲ್ಪಟ್ಟಿದ್ದೇವೆ, ಕರೆಯಲ್ಪಟ್ಟಿದ್ದೇವೆ ಮತ್ತು ಭರವಸೆಯ ಯಾತ್ರಿಕರಾಗಿ ಕಳುಹಿಸಲ್ಪಟ್ಟಿದ್ದೇವೆ ಎಂದು ಅವರು ನಮಗೆ ತಿಳಿಸಬೇಕೆಂದು ಅವರು ಬಯಸುತ್ತಾರೆ ಎಂದು ಹೇಳಿದರು.

19 ಮಾರ್ಚ್ 2025, 15:13