MAP

Per la polmonite del Papa situazione stabile

ಎರಡು ಬಾರಿ ಉಸಿರಾಟದ ತೊಂದರೆಯ ನಂತರ ವಿಶ್ರಾಂತ ರಾತ್ರಿಯನ್ನು ಕಳೆದ ಪೋಪ್

ಪವಿತ್ರ ಪೀಠದ ಮಾಧ್ಯಮ ಕಚೇರಿಯ ಪತ್ರಿಕಾ ಹೇಳಿಕೆಯ ಪ್ರಕಾರ ಪೋಪ್ ಫ್ರಾನ್ಸಿಸ್ ಅವರು ಸೋಮವಾರ ರಾತ್ರಿ ಎರಡು ಬಾರಿ ಉಸಿರಾಟದ ಸಮಸ್ಯೆಯನ್ನು ಎದುರಿಸಿದರು. ಆದರೆ, ಅವರು ವಿಶ್ರಾಂತ ರಾತ್ರಿಯನ್ನು ಕಳೆದರು ಎಂದು ವರದಿಯಾಗಿದೆ.

ವರದಿ: ವ್ಯಾಟಿಕನ್ ನ್ಯೂಸ್

ಪವಿತ್ರ ಪೀಠದ ಮಾಧ್ಯಮ ಕಚೇರಿಯ ಪತ್ರಿಕಾ ಹೇಳಿಕೆಯ ಪ್ರಕಾರ ಪೋಪ್ ಫ್ರಾನ್ಸಿಸ್  ಅವರು ಸೋಮವಾರ ರಾತ್ರಿ ಎರಡು ಬಾರಿ ಉಸಿರಾಟದ ಸಮಸ್ಯೆಯನ್ನು ಎದುರಿಸಿದರು. ಆದರೆ, ಅವರು ವಿಶ್ರಾಂತ ರಾತ್ರಿಯನ್ನು ಕಳೆದರು ಎಂದು ವರದಿಯಾಗಿದೆ. 

ಫೆಬ್ರವರಿ 14 ರಿಂದ ಈವರೆಗೂ ನ್ಯುಮೋನಿಯ ಸಮಸ್ಯೆಗಾಗಿ ಪೋಪ್ ಫ್ರಾನ್ಸಿಸ್ ಅವರು ರೋಮ್ ನಗರದ ಜೆಮೆಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಸೋಮವಾರ ರಾತ್ರಿ, ಮಾಧ್ಯಮ ಕಚೇರಿಯ ಹೇಳಿಕೆಯ ಪ್ರಕಾರ, ಪೋಪ್ ಫ್ರಾನ್ಸಿಸ್ ಅವರಿಗೆ ಎರಡು ಬಾರಿ ಉಸಿರಾಟದ ತೊಂದರೆ ಕಾಣಿಸಿಕೊಂಡಿತು. ಶ್ವಾಸಕೋಶಗಳಲ್ಲಿ ದ್ರವ ತುಂಬಿಕೊಂಡ ಕಾರಣ ಅವರು ನ್ಯೂಮೋನಿಯಾಕ್ಕೆ ತುತ್ತಾಗಿದ್ದಾರೆ ಎಂದು ಮಾಧ್ಯಮ ಕಚೇರಿಯು ಹೇಳಿದರು.

ಈ ಕಾರಣದಿಂದಾಗಿ ಮತ್ತೆ ಸೋಮವಾರ ಪೋಪ್ ಫ್ರಾನ್ಸಿಸ್ ಅವರಿಗೆ ನಾನ್-ಇವೇಸಿವ್ ವೆಂಟಿಲೇಟರ್ ಅವರಿಗೆ ಆಳವಡಿಸಲಾಗಿದೆ. ಪೋಪ್ ಫ್ರಾನ್ಸಿಸ್ ಅವರ ರಕ್ತವನ್ನು ಪರೀಕ್ಷಿಸಲಾಗಿ, ಅವರ ರಕ್ತದಲ್ಲಿ ಯಾವುದೇ ಹೊಸ ರೀತಿಯ ಸೋಂಕು ಪತ್ತೆಯಾಗಿಲ್ಲ.

ಪೋಪ್ ಫ್ರಾನ್ಸಿಸ್ ಅವರ ಆರೋಗ್ಯ ಪರಿಸ್ಥಿತಿಯು ಇನ್ನೂ ವಿಷಮವಾಗಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವ್ಯಾಟಿಕನ್ ಮಾಧ್ಯಮವು ವರದಿ ಮಾಡಿದೆ.  

04 ಮಾರ್ಚ್ 2025, 09:31