ಜೆಮೆಲ್ಲಿ ಆಸ್ಪತ್ರೆಯಲ್ಲಿ ವಿಶ್ರಾಂತ ರಾತ್ರಿಯನ್ನು ಕಳೆದ ಪೋಪ್ ಫ್ರಾನ್ಸಿಸ್
ವರದಿ: ವ್ಯಾಟಿಕನ್ ನ್ಯೂಸ್
ಪೋಪ್ ಫ್ರಾನ್ಸಿಸ್ ಅವರು ನ್ಯೂಮೋನಿಯಕ್ಕಾಗಿ ರೋಮ್ ನಗರದ ಜೆಮೆಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಕಳೆದ ರಾತ್ರಿ ಅವರು ವಿಶ್ರಾಂತಿಯಿಂದ ಕಳೆದಿದ್ದು, ಅವರ ಎದೆಯ ಎಕ್ಸ್-ರೇ ತೆಗೆಯಲಾಗಿ ಅವರು ಗುಣಮುಖರಾಗುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ವ್ಯಾಟಿಕನ್ ಮಾಧ್ಯಮ ಕಚೇರಿಯು ವರದಿ ಮಾಡಿದೆ. ಆದರೂ ಸಹ, ಅವರ ಪರಿಸ್ಥಿತಿ ಗಂಭಿರವಾಗಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಮುಂದುವರೆಸಬೇಕು ಎಂದು ಹೇಳಿದ್ದಾರೆ.
ಪೋಪ್ ಫ್ರಾನ್ಸಿಸ್ ಅವರ ಎದೆಯ ಎಕ್ಸ್-ರೇ ತೆಗೆದಾಗ, ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂಬುದು ಕಂಡು ಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಮಧ್ಯಾಹ್ನ, ಆಧ್ಯಾತ್ಮಿಕ ವ್ಯಾಯಾಮಗಳನ್ನು ಅನುಸರಿಸುವುದನ್ನು ಮುಂದುವರೆಸಿದ ನಂತರ, ಅವರು ಪ್ರಾರ್ಥನೆ, ವಿಶ್ರಾಂತಿ ಮತ್ತು ಹೆಚ್ಚಿನ ದೈಹಿಕ ಚಿಕಿತ್ಸೆಯನ್ನು ಮುಂದುವರಿಸಿದರು.
ಇಂದು, ಮಾರ್ಚ್ 13, 2025, ಪೋಪ್ ಫ್ರಾನ್ಸಿಸ್ ಅವರು ಮಾರ್ಚ್ 13, 2013 ರಂದು ಪೋಪ್ ಆಗಿ ಆಯ್ಕೆಯಾಗಿ 12 ವರ್ಷಗಳ ವಾರ್ಷಿಕೋತ್ಸವವಾಗಿದೆ.