MAP

ವಿಶ್ರಾಂತ ರಾತ್ರಿಯನ್ನು ಕಳೆದ ಪೋಪ್ ಫ್ರಾನ್ಸಿಸ್

ಪೋಪ್ ಫ್ರಾನ್ಸಿಸ್ ಅವರು ಜೆಮೆಲ್ಲಿ ಆಸ್ಪತ್ರೆಯಲ್ಲಿ ವಿಶ್ರಾಂತ ರಾತ್ರಿಯನ್ನು ಕಳೆದಿದ್ದಾರೆ ಎಂದು ವ್ಯಾಟಿಕನ್ ಮಾಧ್ಯಮ ಕಚೇರಿಯು ವರದಿ ಮಾಡಿದೆ.

ವರದಿ: ವ್ಯಾಟಿಕನ್ ನ್ಯೂಸ್

ಪೋಪ್ ಫ್ರಾನ್ಸಿಸ್ ಅವರು ಜೆಮೆಲ್ಲಿ ಆಸ್ಪತ್ರೆಯಲ್ಲಿ ವಿಶ್ರಾಂತ ರಾತ್ರಿಯನ್ನು ಕಳೆದಿದ್ದಾರೆ ಎಂದು ವ್ಯಾಟಿಕನ್ ಮಾಧ್ಯಮ ಕಚೇರಿಯು ವರದಿ ಮಾಡಿದೆ.

ಸೋಮವಾರ ಬೆಳಿಗ್ಗೆ ಎದ್ದ ನಂತರ ಪೋಪ್ ಫ್ರಾನ್ಸಿಸ್ ಅವರು ತಮ್ಮ ಥೆರಪಿಗಳನ್ನು ಮುಂದುವರೆಸಿದರು. ರಾತ್ರಿ ಅವರಿಗೆ ನಾನ್-ಇವೇಸಿವ್ ವೆಂಟಿಲೇಟರ್ ಅನ್ನು ಆಳವಡಿಸಲಾಗಿತ್ತು. ಪೋಪ್ ಫ್ರಾನ್ಸಿಸ್ ಅವರು ವಿಷಮ ಆರೋಗ್ಯ ಸ್ಥಿತಿಯಲ್ಲಿದ್ದರೂ ಸಹ ಅವರು ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಆದರೆ, ಪರಿಣಾಮಕಾರಿ ಚಿಕಿತ್ಸೆಯನ್ನು ಮುಂದುವರೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಪೋಪ್ ಫ್ರಾನ್ಸಿಸ್ ಅವರು ಕೂರಿಯಾದ ಆಧ್ಯಾತ್ಮಿಕ ಕ್ರಮಗಳನ್ನು ವಿಡಿಯೋ ಮೂಲಕ ವೀಕ್ಷಿಸುವ ಮೂಲಕ, ಕೂರಿಯಾದ ಇತರ ಸದಸ್ಯರೊಂದಿಗೆ ಐಕ್ಯಮತ್ಯವನ್ನು ವ್ಯಕ್ತಪಡಿಸಿದ್ದಾರೆ. ಭಾನುವಾರ ಮಧ್ಯಾಹ್ನ ಪೋಪ್ ಆರನೇ ಪೌಲರ ಸಭಾಂಗಣದಲ್ಲಿ ಈ ಆಧ್ಯಾತ್ಮಿಕ ಕ್ರಮಗಳನ್ನು ಪೋಪರ ನಿವಾಸದ ಅಧಿಕೃತ ಪ್ರಬೋಧಕರಾಗಿರುವ ಕಪುಚಿನ್ ಸಭೆಯ ಫಾದರ್ ರೊಬೆರ್ತೊ ಪಸೋಲಿನಿ ಅವರು ಆರಂಭಿಸಿದ್ದಾರೆ.

ಅರ್ಜೆಂಟೀನಾದಲ್ಲಿ ಉಂಟಾಗಿರುವ ಪ್ರವಾಹಗಳ ಕುರಿತು ಪೋಪ್ ಫ್ರಾನ್ಸಿಸ್ ಅವರಿಗೆ ಮಾಹಿತಿಯನ್ನು ನೀಡಲಾಗಿದೆ. ಅದಕ್ಕೆ ಅವರು ಅಲ್ಲಿನ ಜನತೆಯೊಂದಿಗೆ ಐಕ್ಯಮತ್ಯವನ್ನು ವ್ಯಕ್ತಪಡಿಸಿದ್ದಾರೆ.     

11 ಮಾರ್ಚ್ 2025, 05:22