ರಾತ್ರಿಯಿಡೀ ವಿಶ್ರಾಂತಿ ತೆಗೆದುಕೊಂಡ ಪೋಪ್ ಫ್ರಾನ್ಸಿಸ್; ಅರೋಗ್ಯ ಸ್ಥಿರ
ವರದಿ: ವ್ಯಾಟಿಕನ್ ನ್ಯೂಸ್
ಪವಿತ್ರ ಪೀಠದ ಮಾಧ್ಯಮ ಕಚೇರಿಯ ಪ್ರಕಟಣೆಯ ಪ್ರಕಾರ ಪೋಪ್ ಫ್ರಾನ್ಸಿಸ್ ಅವರು ಕಳೆದ ರಾತ್ರಿಯನ್ನು ವಿಶ್ರಾಂತಿಯಿಂದ ಕಳೆದಿದ್ದು, ಅವರ ಆರೋಗ್ಯ ಸ್ಥಿರವಾಗಿದೆ.
ಭಾನುವಾರ ವಿಶ್ವ ಸ್ವಯಂಸೇವಕರ ಜ್ಯೂಬಿಲಿ ಬಲಿಪೂಜೆಯನ್ನು ವ್ಯಾಟಿಕನ್ನಿನ ಸಮಗ್ರ ಮಾನವ ಅಭಿವೃದ್ಧಿ ಪೀಠ ಉಸ್ತುವಾರಿಗಳಾಗಿರುವ ಕಾರ್ಡಿನಲ್ ಮೈಕಲ್ ಸೆಝರ್ನಿ ಅವರು ಬಲಿಪೂಜೆಯನ್ನು ಅರ್ಪಿಸಲಿದ್ದಾರೆ ಹಾಗೂ ಇದೇ ವೇಳೆ ಅವರು ಪೋಪ್ ಫ್ರಾನ್ಸಿಸ್ ಅವರ ಪ್ರಬೋಧನೆಯನ್ನು ಜನತೆಗೆ ಓದಿ ಹೇಳಲಿದ್ದಾರೆ. ನಾಳೆ ಸಂತ ಪೇತ್ರರ ಚೌಕದಲ್ಲಿ ಕಾರ್ಡಿನಲ್ ಸೆಝರ್ನಿ ಅವರು ಬಲಿಪೂಜೆಯನ್ನು ಅರ್ಪಿಸಲಿದ್ದಾರೆ.
ಕಳೆದ ಹಲವು ದಿನಗಳಿಂದ ಪೋಪ್ ಫ್ರಾನ್ಸಿಸ್ ಅವರು ರೋಮ್ ನಗರದ ಜೆಮೆಲ್ಲಿ ಆಸ್ಪತ್ರೆಯಲ್ಲಿ ಉಸಿರಾಟದ ಸಮಸ್ಯೆಗಾಗಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಪ್ರಸ್ತುತ ಅವರ ಆರೋಗ್ಯ ಪರಿಸ್ಥಿತಿ ಸ್ಥಿರವಾಗಿದೆ ಎಂದು ವ್ಯಾಟಿಕನ್ ಮಾಧ್ಯಮ ಕಚೇರಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಪೋಪ್ ಫ್ರಾನ್ಸಿಸ್ ಅವರು ಪ್ರಾರ್ಥನೆ ಹಾಗೂ ವಿಶ್ರಾಂತಿಯನ್ನು ತೆಗೆದುಕೊಳ್ಳುವ ಮೂಲಕ ಸಮಯವನ್ನು ಕಳೆಯುತ್ತಿದ್ದಾರೆ ಎಂದು ವ್ಯಾಟಿಕನ್ ಮಾಧ್ಯಮ ಕಚೇರಿಯು ತಿಳಿಸಿದೆ.