MAP

ಜನರ ಪ್ರಾರ್ಥನೆ ಹಾಗೂ ಬೆಂಬಲಕ್ಕಾಗಿ ಸಂತೋಷವನ್ನು ವ್ಯಕ್ತಪಡಿಸಿದ ಪೋಪ್ ಫ್ರಾನ್ಸಿಸ್

ಪೋಪ್ ಫ್ರಾನ್ಸಿಸ್ ಅವರು ಇಟಲಿಯ ವಿವಿಧ ಧರ್ಮಕ್ಷೇತ್ರಗಳ ಭಕ್ತಾಧಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ನನಗಾಗಿ ಪ್ರಾರ್ಥಿಸಿ, ನನ್ನೊಡನೆ ಐಕ್ಯತೆಯನ್ನು ವ್ಯಕ್ತಪಡಿಸಿದ ನಿಮಗೆಲ್ಲರಿಗೂ ನಾನು ಆಭಾರಿಯಾಗಿದ್ದೇನೆ ಎಂದು ಹೇಳಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಪೋಪ್ ಫ್ರಾನ್ಸಿಸ್ ಅವರು ಇಟಲಿಯ ವಿವಿಧ ಧರ್ಮಕ್ಷೇತ್ರಗಳ ಭಕ್ತಾಧಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ನನಗಾಗಿ ಪ್ರಾರ್ಥಿಸಿ, ನನ್ನೊಡನೆ ಐಕ್ಯತೆಯನ್ನು ವ್ಯಕ್ತಪಡಿಸಿದ ನಿಮಗೆಲ್ಲರಿಗೂ ನಾನು ಆಭಾರಿಯಾಗಿದ್ದೇನೆ ಎಂದು ಹೇಳಿದ್ದಾರೆ.

ರೋಮ್ ನಗರಕ್ಕೆ ಜ್ಯೂಬಿಲಿ ವರ್ಷದ ಅಂಗವಾಗಿ ಇಟಲಿಯ ವಿವಿಧ ಧರ್ಮಕ್ಷೇತ್ರಗಳಿಂದ ಬಂದಿರುವ ಯಾತ್ರಿಕರನ್ನು ಜೆಮೆಲ್ಲಿ ಆಸ್ಪತ್ರೆಯಿಂದಲೇ ಉದ್ದೇಶಿಸಿ ಪೋಪ್ ಫ್ರಾನ್ಸಿಸ್ ಅವರು ಮಾತನಾಡಿದ್ದಾರೆ. ನಾನು ಅನಾರೋಗ್ಯದಲ್ಲಿದ ಸಮಯದಲ್ಲಿ ನೀವು ನನ್ನೊಂದಿಗೆ ಐಕ್ಯತೆ ಹಾಗೂ ಸಾಮಿಪ್ಯವನ್ನು ವ್ಯಕ್ತಪಡಿಸಿದ್ದೀರಿ. ಇದರಿಂದ ನನಗೆ ಆನಂದವಾಗಿದೆ. ಇದೇ ಸಾಮೀಪ್ಯ ಹಾಗೂ ಐಕ್ಯತೆಯನ್ನು ನಿಮ್ಮ ಧರ್ಮಾಧ್ಯಕ್ಷರೊಡನೆ ಹಾಗೂ ಗುರುಗಳೊಡನೆಯೂ ಸಹ ವ್ಯಕ್ತಪಡಿಸಬೇಕೆಂದು ನಾನು ವಿನಂತಿಸಿಕೊಳ್ಳುತ್ತೇನೆ ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದಾರೆ.

"ಈ ಸಂದರ್ಭದಲ್ಲಿ ನಾನು ನಿಮ್ಮ ಜೊತೆ ಭೌತಿಕವಾಗಿ ಇರದೆ ಇದ್ದರೂ ಸಹ ನಾನು ಆತ್ಮಿಕವಾಗಿ ನಿಮ್ಮೊಂದಿಗಿದ್ದೇನೆ. ನೀವು ಫಲಪ್ರದಾಯಕ ಆಧ್ಯಾತ್ಮಿಕ ಅನುಭೂತಿಯನ್ನು ಈ ಪುಣ್ಯಯಾತ್ರೆಯ ಮೂಲಕ ಪಡೆಯುವಂತಾಗಲಿ" ಎಂದು ಪೋಪ್ ಫ್ರಾನ್ಸಿಸ್ ಅವರು ಯಾತ್ರಿಕ ಭಕ್ತಾಧಿಗಳಿಗೆ ಹೇಳಿದ್ದಾರೆ.

"ನಾನು ನಿಮಗಾಗಿ ಪ್ರಾರ್ಥಿಸುತ್ತೇನೆ. ನೀವೂ ಸಹ ನನಗಾಗಿ ಪ್ರಾರ್ಥಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ ಎಂದು ಹೇಳುವ ಮೂಲಕ ಪೋಪ್ ಫ್ರಾನ್ಸಿಸ್ ಅವರು ತಮ್ಮ ಸಂದೇಶವನ್ನು ಮುಕ್ತಾಯಗೊಳಿಸಿದರು.  

22 ಮಾರ್ಚ್ 2025, 16:53