MAP

ಚೇತರಿಸಿಕೊಳ್ಳುತ್ತಿರುವ ಪೋಪ್ ಫ್ರಾನ್ಸಿಸ್

ಪೋಪ್ ಫ್ರಾನ್ಸಿಸ್ ಅವರು ಚೇತರಿಸಿಕೊಳ್ಳುತ್ತಿದ್ದು, ಅವರು ಹೈ-ಫ್ಲೋ ಆಕ್ಸಿಜನ್ ತೆಗೆದುಕೊಳ್ಳುವುದನ್ನು ಕಡಿಮೆ ಮಾಡಿದ್ದಾರೆ. ಇದು ಚೇತರಿಕೆಯ ಕುರುಹು ಎಂದು ವ್ಯಾಟಿಕನ್ ಮಾಧ್ಯಮ ಕಚೇರಿಯು ಪ್ರಕಟಣೆಯಲ್ಲಿ ಹೇಳಿದೆ.

ವರದಿ: ವ್ಯಾಟಿಕನ್ ನ್ಯೂಸ್

ಪೋಪ್ ಫ್ರಾನ್ಸಿಸ್ ಅವರು ಚೇತರಿಸಿಕೊಳ್ಳುತ್ತಿದ್ದು, ಅವರು ಹೈ-ಫ್ಲೋ ಆಕ್ಸಿಜನ್ ತೆಗೆದುಕೊಳ್ಳುವುದನ್ನು ಕಡಿಮೆ ಮಾಡಿದ್ದಾರೆ. ಇದು ಚೇತರಿಕೆಯ ಕುರುಹು ಎಂದು ವ್ಯಾಟಿಕನ್ ಮಾಧ್ಯಮ ಕಚೇರಿಯು ಪ್ರಕಟಣೆಯಲ್ಲಿ ಹೇಳಿದೆ. 

ಪೋಪ್ ಫ್ರಾನ್ಸಿಸ್ ಅವರು ರಾತ್ರಿಯ ವೇಳೆ ಇವೇಸಿವ್ ವೆಂಟಿಲೇಟರ್ ಅನ್ನು ಉಪಯೋಗಿಸುತ್ತಿಲ್ಲ. ಮುಂದುವರೆದು ಅವರು ಈವರೆಗೂ ಹೈ-ಫ್ಲೋ ಆಕ್ಸಿಜನ್ ಅನ್ನು ಉಪಯೋಗಿಸುತ್ತಿದ್ದರು. ಆದರೆ, ಅವರು ಗುಣಮುಖರಾಗುತ್ತಿರುವ ಕಾರಣ ಅದನ್ನು ಕಡಿಮೆ ಪ್ರಮಾಣದಲ್ಲಿ ಉಪಯೋಗಿಸುತ್ತಿದ್ದಾರೆ ಎಂದು ವ್ಯಾಟಿಕನ್ ಮಾ‌ಧ್ಯಮ ಕಚೇರಿಯು ವರದಿ ಮಾಡಿದೆ.

ಪೋಪ್ ಫ್ರಾನ್ಸಿಸ್ ಅವರು ಗುಣಮುಖರಾಗುತ್ತಿರುವ ಸಂಕೇತಗಳನ್ನು ಸೂಚಿಸುತ್ತಿದ್ದರೂ ಸಹ ವೈದ್ಯರು ಅವರನ್ನು ಎಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿಲ್ಲ ಎಂದು ಹೇಳಿದ್ದಾರೆ.

ಇಂದು ಪೋಪ್ ಫ್ರಾನ್ಸಿಸ್ ಅವರು ಯಾವುದೇ ಸಂದರ್ಶಕರನ್ನು ಭೇಟಿ ಮಾಡಿಲ್ಲ. ಅವರು ತಮ್ಮ ದಿನವನ್ನು ಪ್ರಾರ್ಥನೆ ಹಾಗೂ ವಿಶ್ರಾಂತಿಯಲ್ಲಿ ಕಳೆದರು.  

22 ಮಾರ್ಚ್ 2025, 05:36