ಜೆಮೆಲ್ಲಿ ಆಸ್ಪತ್ರೆಯಲ್ಲಿ ವಿಶ್ರಾಂತ ರಾತ್ರಿಯನ್ನು ಕಳೆದ ಪೋಪ್ ಫ್ರಾನ್ಸಿಸ್
ವರದಿ: ವ್ಯಾಟಿಕನ್ ನ್ಯೂಸ್
ಸೋಮವಾರ ಬೆಳಿಗ್ಗೆ ವ್ಯಾಟಿಕನ್ನಿನ ಮಾಧ್ಯಮ ಕಚೇರಿಯು ಪೋಪ್ ಫ್ರಾನ್ಸಿಸ್ ಅವರ ಅರೋಗ್ಯದ ಕುರಿತು ಮಾಹಿತಿಯನ್ನು ತಿಳಿಸಿದೆ. ಈ ಮಾಹಿತಿಯ ಪ್ರಕಾರ ಪೋಪ್ ಫ್ರಾನ್ಸಿಸ್ ಅವರು ಕಳೆದ ರಾತ್ರಿ ವಿಶ್ರಾಂತಿಯಿಂದ ಕಳೆದಿದ್ದಾರೆ.
ಭಾನುವಾರ ಸಂಜೆ ಪೋಪ್ ಫ್ರಾನ್ಸಿಸ್ ಅವರ ಆರೋಗ್ಯ ಸ್ಥಿತಿಯು ಸ್ಥಿರವಾಗಿದೆ ಎಂದು ವ್ಯಾಟಿಕನ್ ಮಾಧ್ಯಮ ಕಚೇರಿಯು ತಿಳಿಸಿತ್ತು.
ಮುಂದುವರೆದು ವ್ಯಾಟಿಕನ್ ಮಾಧ್ಯಮ ಕಚೇರಿಯು 'ಕಳೆದ ದಿನಗಳಂತೆ ಪೋಪ್ ಫ್ರಾನ್ಸಿಸ್ ಅವರಿಗೆ ವೆಂಟಿಲೇಟರ್ ಅವಶ್ಯಕತೆ ಇರಲಿಲ್ಲ. ಅವರ ಆರೋಗ್ಯ ಸುಸ್ಥಿರವಾಗಿದ್ದು, ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ." ಎಂದು ಮಾಹಿತಿಯನ್ನು ನೀಡಿದೆ.
"ಪೋಪ್ ಫ್ರಾನ್ಸಿಸ್ ಅವರಿಗೆ ಜ್ವರವಿಲ್ಲ" ಎಂದೂ ಸಹ ಈ ಮಾಹಿತಿಯು ತಿಳಿಸಿದೆ.
ಭಾನುವಾರ ಪೋಪ್ ಫ್ರಾನ್ಸಿಸ್ ಅವರು ತಮ್ಮ ಆರೈಕೆಯನ್ನು ಮಾಡುತ್ತಿದ್ದವರ ಜೊತೆಗೂಡಿ ಬಲಿಪೂಜೆಯನ್ನು ಅರ್ಪಿಸಿದ್ದಾರೆ. ಇನ್ನುಳಿದ ಸಮಯ ಅವರು ಪ್ರಾರ್ಥನೆ ಹಾಗೂ ವಿಶ್ರಾಂತಿಯಲ್ಲಿ ಕಳೆದಿದ್ದಾರೆ.
ಫೆಬ್ರವರಿ 14 ರಿಂದ ಪೋಪ್ ಫ್ರಾನ್ಸಿಸ್ ಅವರು ಬ್ರಾಂಕೈಟಿಸ್ ಸಮಸ್ಯೆಗೆ ಜೆಮೆಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.