MAP

ಪೋಪ್ ಫ್ರಾನ್ಸಿಸ್ ಅವರಿಗೆ ಉಸಿರಾಟದ ತೊಂದರೆ

ನ್ಯುಮೋನಿಯಾದಿಂದ ಬಳಲುತ್ತಿರುವ ಪೋಪ್ ಫ್ರಾನ್ಸಿಸ್ ಅವರ ದೇಹಸ್ಥಿತಿ ಶುಕ್ರವಾರ ಮತ್ತಷ್ಟು ವಿಷಮಿಸಿದ್ದು, ಉಸಿರಾಟದ ತೊಂದರೆ ತೀವ್ರವಾಗಿದೆ.

ವರದಿ: ವ್ಯಾಟಿಕನ್ ನ್ಯೂಸ್

ನ್ಯುಮೋನಿಯಾದಿಂದ ಬಳಲುತ್ತಿರುವ ಪೋಪ್ ಫ್ರಾನ್ಸಿಸ್ ಅವರ ದೇಹಸ್ಥಿತಿ ಶುಕ್ರವಾರ ಮತ್ತಷ್ಟು ವಿಷಮಿಸಿದ್ದು, ಉಸಿರಾಟದ ತೊಂದರೆ ತೀವ್ರವಾಗಿದೆ. ಇದು ವಾಂತಿಗೆ ಕಾರಣವಾಗಿದೆ. ಆದರೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿದ್ದು, ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ವ್ಯಾಟಿಕನ್ನಿನ ಮಾ‌ಧ್ಯಮ ಕಚೇರಿಯು ವರದಿ ಮಾಡಿದೆ.

ರೋಮ್ ನಗರದ ಜೆಮೆಲ್ಲಿ ಆಸ್ಪತ್ರೆಯಲ್ಲಿ 88 ವರ್ಷ ವಯಸ್ಸಿನ ವಿಶ್ವಗುರು ಫ್ರಾನ್ಸಿಸ್ ಅವರು ಕಳೆದ ಎರಡು ವಾರಗಳಿಂದ ಚಿಕಿತ್ಸೆ ಪಡೆಯುತ್ತಿದ್ದು, ಬ್ರಾಂಕೋಸ್ಪಾಸ್ಮ್ ಕಾರಣದಿಂದ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಅವರನ್ನು ತಾತ್ಕಾಲಿಕ ವೆಂಟಿಲೇಟರ್'ನಲ್ಲಿ ಇಟ್ಟು ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದು ಹೇಳಲಾಗಿದೆ. 

ಈ ಹಿನ್ನಡೆಯ ಹೊರತಾಗಿಯೂ, ಫ್ರಾನ್ಸಿಸ್ ಅವರು ಜಾಗೃತರಾಗಿದ್ದು, ಚಿಕಿತ್ಸೆಗೆ ಸಹಕರಿಸುತ್ತಿದ್ದಾರೆ. ಪರಿಸ್ಥಿತಿ ಮತ್ತಷ್ಟು ಉಲ್ಬಣವಾಗುತ್ತದೆಯೇ ಎಂಬ ಬಗ್ಗೆ ಮುಂದಿನ 24 ರಿಂದ 48 ಗಂಟೆಗಳಲ್ಲಿ ವೈದ್ಯರು ತಿಳಿಸಲಿದ್ದಾರೆ ಎಂದು ವ್ಯಾಟಿಕನ್ ಮಾಧ್ಯಮ ಕಚೇರಿತಯ ಮಾಹಿತಿಯನ್ನು ನೀಡಿದೆ.

ಆರೋಗ್ಯದ ಸಮಸ್ಯೆ ನಡುವೆಯೂ ಆಸ್ಪತ್ರೆಯಿಂದಲೇ ಪೋಪ್ ಕಾರ್ಯನಿರ್ವಹಿಸುತ್ತಿದ್ದು, ಉಸಿರಾಟದ ವ್ಯಾಯಾಮ, ವಿಶ್ರಾಂತಿ ಮತ್ತು ಪ್ರಾರ್ಥನೆಯಲ್ಲಿ ತೊಡಗಿದ್ದಾರೆ ಎಂದು ವ್ಯಾಟಿಕನ್ ಮಾಧ್ಯಮ ಕಚೇರಿಯು ತಿಳಿಸಿದೆ.

01 ಮಾರ್ಚ್ 2025, 08:46