MAP

ವಿಶ್ರಾಂತಿಯ ರಾತ್ರಿಯನ್ನು ಕಳೆದ ಪೋಪ್ ಫ್ರಾನ್ಸಿಸ್

ಪವಿತ್ರ ಪೀಠದ ಮಾಧ್ಯಮ ಕಚೇರಿಯ ಶನಿವಾರದ ಬೆಳಗ್ಗಿನ ಮಾಹಿತಿಯ ಪ್ರಕಾರ ಪೋಪ್ ಫ್ರಾನ್ಸಿಸ್ ಅವರು ವಿಶ್ರಾಂತ ರಾತ್ರಿಯನ್ನು ಕಳೆದಿದ್ದು, ಚೆನ್ನಾಗಿ ನಿದ್ರಿಸಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಪವಿತ್ರ ಪೀಠದ ಮಾಧ್ಯಮ ಕಚೇರಿಯ ಶನಿವಾರದ ಬೆಳಗ್ಗಿನ ಮಾಹಿತಿಯ ಪ್ರಕಾರ ಪೋಪ್ ಫ್ರಾನ್ಸಿಸ್ ಅವರು ವಿಶ್ರಾಂತ ರಾತ್ರಿಯನ್ನು ಕಳೆದಿದ್ದು, ಚೆನ್ನಾಗಿ ನಿದ್ರಿಸಿದ್ದಾರೆ.  ಇದಕ್ಕೂ ಮುಂಚಿತವಾಗಿ ವ್ಯಾಟಿಕನ್ ಮಾಧ್ಯಮ ವರದಿಯು ಪೋಪ್ ಫ್ರಾನ್ಸಿಸ್ ಅವರ ಉಸಿರಾಟ ತೊಂದರೆ ಉಲ್ಬಣಿಸಿದೆ ಎಂದು ಹೇಳಿತ್ತು. ಇದೀಗ ಹಲವು ಸುತ್ತುಗಳ ಚಿಕಿತ್ಸೆಯ ನಂತರ ಪೋಪ್ ಫ್ರಾನ್ಸಿಸ್ ಅವರು ಸಕ್ರಿಯವಾಗಿದ್ದು, ವಿಶ್ರಾಂತಿಯನ್ನು ತೆಗೆದುಕೊಳ್ಳುತ್ತಿದ್ದಾರೆ.

ಪೋಪ್ ಫ್ರಾನ್ಸಿಸ್ ಅವರ ಉಸಿರಾಟ ತೊಂದರೆಗೆ ತಾತ್ಕಾಲಿಕ ವೆಂಟಿಲೇಟರ್ ಚಿಕಿತ್ಸೆಯನ್ನು ಆರಂಭಿಸಿದಾಗ ಅವರು ಅದಕ್ಕೆ ಪೂರಕವಾಗಿ ಸ್ಪಂದಿಸಿದರು ಎಂದು ವ್ಯಾಟಿಕನ್ ಮಾಧ್ಯಮ ಕಚೇರಿಯು ತಿಳಿಸಿದೆ.

ಅದಾಗ್ಯೂ, ಪೋಪ್ ಫ್ರಾನ್ಸಿಸ್ ಅವರ ಸಂಪೂರ್ಣ ಆರೋಗ್ಯಸ್ಥಿತಿಯನ್ನು ವಿಶ್ಲೇಷಿಸಲು 48 ಗಂಟೆಗಳ ಕಾಲ ಅವರ ಮೇಲೆ ನಿಗಾವಹಿಸಲಾಗುವುದು ಎಂದು ವೈದ್ಯರು ಹೇಳಿದ್ದಾರೆ ಎಂದು ವ್ಯಾಟಿಕನ್ ಮಾಧ್ಯಮ ಕಚೇರಿಯು ವರದಿ ಮಾಡಿದೆ.

ಡಬಲ್ ನ್ಯೂಮೋನೊಯಾಕ್ಕೆ ಪೋಪ್ ಫ್ರಾನ್ಸಿಸ್ ಅವರಿಗೆ ಚಿಕಿತ್ಸೆ ನೀಡುವುದನ್ನು ಮುಂದುವರೆಸಲಾಗಿದೆ. 

01 ಮಾರ್ಚ್ 2025, 09:00