MAP

ಜನತೆಯನ್ನು ಆಸ್ಪತ್ರೆಯಿಂದ ಭೇಟಿ ಮಾಡಿದ ಪೋಪ್ ಫ್ರಾನ್ಸಿಸ್

ಪೋಪ್ ಫ್ರಾನ್ಸಿಸ್ ಅವರು ಆಸ್ಪತ್ರೆಗೆ ದಾಖಲಾದ ನಂತರ ಮೊದಲ ಬಾರಿಗೆ ರೋಮ್‌ನ ಜೆಮೆಲ್ಲಿ ಆಸ್ಪತ್ರೆಯ ಬಾಲ್ಕನಿಯಲ್ಲಿ ಕಾಣಿಸಿಕೊಂಡರು.

ವರದಿ: ವ್ಯಾಟಿಕನ್ ನ್ಯೂಸ್

ಪೋಪ್ ಫ್ರಾನ್ಸಿಸ್ ಅವರು ಆಸ್ಪತ್ರೆಗೆ ದಾಖಲಾದ ನಂತರ ಮೊದಲ ಬಾರಿಗೆ ರೋಮ್‌ನ ಜೆಮೆಲ್ಲಿ ಆಸ್ಪತ್ರೆಯ ಬಾಲ್ಕನಿಯಲ್ಲಿ ಕಾಣಿಸಿಕೊಂಡರು.

ಕೆಳಗೆ ನೆರೆದಿದ್ದ ಜನಸಮೂಹದ ಮೇಲಿದ್ದ ಸಣ್ಣ ಬಾಲ್ಕನಿಯಲ್ಲಿ ಅವರು ಕೆಲವೇ ಮಾತುಗಳನ್ನು ಹೇಳಿದರು.  ತಮ್ಮ ಕೈಗಳನ್ನು ಮೊಣಕಾಲುಗಳ ಮೇಲೆ ಇಟ್ಟುಕೊಂಡು, ನಂತರ ಅವುಗಳನ್ನು ಎತ್ತಿ ಜನಸಮೂಹವನ್ನು ಆಶೀರ್ವದಿಸಿದರು, ನಂತರ ಕೆಳಗೆ "ಫ್ರಾನ್ಸೆಸ್ಕೊ, ಫ್ರಾನ್ಸೆಸ್ಕೊ!", "ನಾವು ನಿನ್ನನ್ನು ಪ್ರೀತಿಸುತ್ತೇವೆ!", "ನಾವು ನಿಮಗಾಗಿ ಇಲ್ಲಿದ್ದೇವೆ!" ಎಂದು ಕೂಗುತ್ತಿದ್ದವರಿಗೆ ಕೈ ಬೀಸುತ್ತಾ ನಗುತ್ತಾ ಹೇಳಿದರು.

"ಎಲ್ಲರಿಗೂ ಧನ್ಯವಾದಗಳು" ಎಂದು ಪೋಪ್ ಫ್ರಾನ್ಸಿಸ್ ಅವರು ಸಣ್ಣ ದನಿಯಲ್ಲಿ ಹೇಳಿದರು. ಪೋಪ್ ಫ್ರಾನ್ಸಿಸ್ ಜನತೆಯನ್ನು ಉದ್ದೇಶಿಸಿ ಮಾತನಾಡುತ್ತಾರೆ ಎಂದು ಯೋಜಿಸಿದ್ದರೂ ಸಹ, ಅವರಿಗೆ ಮಾತನಾಡಲಾಗಲಿಲ್ಲ. ತಮ್ಮ ಇರುವಿಕೆಯಿಂದಲೇ ಪೋಪ್ ಫ‌್ರಾನ್ಸಿಸ್ ಅವರು ಸಂದೇಶವನ್ನು ನೀಡಿದರು.

ಪೋಪ್ ಫ್ರಾನ್ಸಿಸ್ ಬಾಲ್ಕನಿಯಿಂದ ತೆರಳುತ್ತಿದ್ದಂತೆ, ಆಸ್ಪತ್ರೆಯ ಮುಖ್ಯ ದ್ವಾರಕ್ಕೆ ಎಲ್ಲಾ ಜನರು ಪೋಪ್ ಫ್ರಾನ್ಸಿಸ್ ಅವರು ಹೋಗುವುದನ್ನು ನೋಡಲು ದೌಡಾಯಿಸಿದರು.

24 ಮಾರ್ಚ್ 2025, 16:06