MAP

ಪೋಪ್ ಆಗಿ ಆಯ್ಕೆಯಾಗಿ 12ನೇ ವಾರ್ಷಿಕೋತ್ಸವವನ್ನು ಆಸ್ಪತ್ರೆಯಲ್ಲಿ ಆಚರಿಸಿದ ಪೋಪ್ ಫ್ರಾನ್ಸಿಸ್

ಇಂದು ಮಾರ್ಚ್ 13, 2025. ಹನ್ನೆರಡು ವರ್ಷಗಳ ಹಿಂದೆ ಇದೇ ದಿನ ಅಂದು ಅರ್ಜೆಂಟೀನಾದ ಮಹಾಧರ್ಮಾಧ್ಯಕ್ಷರಾಗಿದ್ದ ಕಾರ್ಡಿನಲ್ ಮಾರಿಯೋ ಜಾರ್ಜ್ ಬೆರ್ಗೋಗ್ಲಿಯೋ ಅವರನ್ನು ಕಾರ್ಡಿನಲ್ಲುಗಳ ಪರಿಷತ್ತು ಪೋಪ್ ಫ್ರಾನ್ಸಿಸ್ ಎಂದು ವಿಶ್ವ ಧರ್ಮಸಭೆಯ 266ನೇ ವಿಶ್ವಗುರುವಾಗಿ ಆಯ್ಕೆಮಾಡಿತ್ತು. ಪೋಪ್ ಫ್ರಾನ್ಸಿಸ್ ಲ್ಯಾಟಿನ್ ಅಮೇರಿಕಾ ಖಂಡದ ದೇಶಗಳಿಂದ ಆಯ್ಕೆಯಾದ ಮೊದಲ ಪೋಪ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಪೋಪ್ ಫ್ರಾನ್ಸಿಸ್ ಅವರಿಗೀಗ 88 ವರ್ಷ ವಯಸ್ಸು. ವಿಶ್ವಗುರುವಾಗಿ ಅವರು ಕಳೆದ ಹನ್ನೆರಡು ವರ್ಷಗಳಲ್ಲಿ ಸುಮಾರು ಸುಧಾರಣೆಗಳನ್ನು ಹಾಗೂ ಕ್ರಮಗಳನ್ನು ಧರ್ಮಸಭೆಯಲ್ಲಿ ಕೈಗೊಂಡಿದ್ದಾರೆ. ಪ್ರಸ್ತುತ ಅವರು ನ್ಯುಮೋನಿಯಾಕ್ಕಾಗಿ ರೋಮ್ ನಗರದ ಜೆಮೆಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ.

ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಪೋಪ್ ಫ್ರಾನ್ಸಿಸ್ ಅವರು ಜ್ಯೂಬಿಲಿ ವರ್ಷವನ್ನು ಉದ್ಘಾಟಿಸಿದರು. ಇತಿಹಾಸದಲ್ಲೇ ಪ್ರಪ್ರಥಮವಾಗಿ ಇಟಲಿಯ ರೆಬಿಬಿಯೋ ಕಾರಾಗೃಹದಲ್ಲಿ ಪೋಪ್ ಫ್ರಾನ್ಸಿಸ್ ಅವರು ಪವಿತ್ರ ದ್ವಾರವನ್ನು ತೆರೆದರು.

ಪೋಪ್ ಫ್ರಾನ್ಸಿಸ್ ಅವರು ಕಳೆದ ಹನ್ನೆರಡು ವರ್ಷಗಳಲ್ಲಿ ಹಲವಾರು ದೇಶಗಳಿಗೆ ಪ್ರೇಷಿತ ಪ್ರಯಾಣವನ್ನು ಕೈಗೊಂಡಿದ್ದಾರೆ.

ಪೋಪ್ ಫ್ರಾನ್ಸಿಸ್ ಅವರು ಆಸ್ಪತ್ರೆಯಿಂದಲೇ ಮಾತನಾಡಿ "ಈ ನನ್ನ ಪರಿಸ್ಥಿತಿಯಲ್ಲಿ ನನಗಾಗಿ ಪ್ರಾರ್ಥಿಸುತ್ತಿರುವ ಹಾಗೂ ಶುಭಾಶಯಗಳನ್ನು ಕಳುಹಿಸುತ್ತಿರುವ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ. ನಿಮ್ಮೆಲ್ಲರನ್ನೂ ನನ್ನ ಪ್ರಾರ್ಥನೆಗಳಲ್ಲಿ ನೆನಪಿಸಿಕೊಳ್ಳುತ್ತೇನೆ ಹಾಗೂ ನನಗಾಗಿ ಪ್ರಾರ್ಥಿಸುವುದನ್ನು ಮುಂದುವರೆಸಿ ಎಂದು ವಿನಂತಿಸಿಕೊಳ್ಳುತ್ತೇನೆ" ಎಂದು ಹೇಳಿದ್ದಾರೆ.     

13 ಮಾರ್ಚ್ 2025, 11:05