ಸ್ಲೊವಾಕಿಯನ್ ಪ್ರಧಾನಿಯನ್ನು ಭೇಟಿ ಮಾಡಿದ ಪೋಪ್ ಫ್ರಾನ್ಸಿಸ್
ವರದಿ: ವ್ಯಾಟಿಕನ್ ನ್ಯೂಸ್
ಪೋಪ್ ಫ್ರಾನ್ಸಿಸ್ ಅವರು ಇಂದು ವ್ಯಾಟಿಕನ್ ನಗರದಲ್ಲಿ ಸ್ಲೋವಾಕಿಯನ್ ಪ್ರಧಾನಮಂತ್ರಿ ರೊಬೆರ್ತೊ ಫೀಕೊ ಅವರನ್ನು ಭೇಟಿ ಮಾಡಿದ್ದಾರೆ. ಸ್ಲೋವಾಕಿಯನ್ ಪ್ರಧಾನಮಂತ್ರಿ ರೊಬೆರ್ತೊ ಫೀಕೊ ಅವರು ಪೋಪ್ ಫ್ರಾನ್ಸಿಸ್ ಅವರುನ್ನು ಭೇಟಿ ಮಾಡಿದ ನಂತರ ವ್ಯಾಟಿಕನ್ನಿನ ರಾಜ್ಯ ಕಾರ್ಯದರ್ಶಿಯಾದ ಕಾರ್ಡಿನಲ್ ಪಿಯೆತ್ರೋ ಪರೋಲಿನ್ ಅವರನ್ನು ಭೇಟಿ ಮಾಡಿದರು.
ಈ ಮಾತುಕತೆಗಳಲ್ಲಿ ಉಭಯ ಪಕ್ಷಗಳು ಸಾಮರಸ್ಯದಿಂದ ಭವಿಷ್ಯದಲ್ಲಿ ನವ ಸಮಾಜ ನಿರ್ಮಾಣಕ್ಕಾಗಿ ಪರಿಶ್ರಮ ವ್ಯಯಿಸುವ ನಿಟ್ಟಿನಲ್ಲಿ ಚರ್ಚೆಗಳು ನಡೆದವು. ಉಭಯ ದೇಶಗಳಲ್ಲಿನ ಪರಿಸ್ಥಿತಿ ಹಾಗೂ ಕಥೋಲಿಕರ ಸ್ಥಿತಿಗತಿಗಳ ಕುರಿತೂ ಸಹ ಇಲ್ಲಿ ಚರ್ಚಿಸಲಾಯಿತು ಎಂದು ವ್ಯಾಟಿಕನ್ನಿನ ಮಾಧ್ಯಮ ಕಚೇರಿಯು ತನ್ನ ಮಾಧ್ಯಮ ಹೇಳಿಕೆಯಲ್ಲಿ ಹೇಳಿದೆ.
ಇದೇ ವೇಳೆ ಅಂತರಾಷ್ಟ್ರೀಯ ಪರಿಸ್ಥಿತಿಯ ಮೇಲೆ, ಅಂದರೆ ಪ್ರಸ್ತುತ ನಡೆಯುತ್ತಿರುವ ರಷ್ಯಾ-ಉಕ್ರೇನ್ ಯುದ್ಧದ ಕುರಿತು ಸಹ ಚರ್ಚೆಗಳು ನಡೆದವು. ಗಾಝಾದಲ್ಲಿ ಪ್ರಸ್ತುತ ಹೇರಲಾಗಿರುವ ಎಮರ್ಜೆನ್ಸಿ ಪರಿಸ್ಥಿತಿಯ ಕುರಿತೂ ಸಹ ಉಭಯ ನಾಯಕರುಗಳು ಸಂವಾದಿಸಿದರು.