MAP

ಸ್ಕ್ಯಾಂಡಿನೇವಿಯನ್ ಕ್ರೈಸ್ತರಿಗೆ ಪೋಪ್: ಯುದ್ಧಗಳ ನಡುವೆಯೂ ಐಕ್ಯತೆಯ ಸಾಕ್ಷಿಗಳಾಗಿರಿ

ಜ್ಯೂಬಿಲಿ ವರ್ಷದ ಹಿನ್ನೆಲೆಯಲ್ಲಿ ರೋಮ್ ನಗರಕ್ಕೆ ಪವಿತ್ರ ಯಾತ್ರೆಗಾಗಿ ಆಗಮಿಸಿದ ಯಾತ್ರಾರ್ಥಿಗಳ ನಿಯೋಗವನ್ನು ಪೋಪ್ ಫ್ರಾನ್ಸಿಸ್ ಅವರು ವ್ಯಾಟಿಕನ್ ನಗರದಲ್ಲಿ ಭೇಟಿ ಮಾಡಿದ್ದಾರೆ. ಈ ವೇಳೆ ಅವರನ್ನು ಉದ್ದೇಶಿಸಿ ಮಾತನಾಡಿರುವ ಅವರು ಯುದ್ಧಗಳ ನಡುವೆಯೂ ಐಕ್ಯತೆಯ ಸಾಕ್ಷಿಗಳಾಗಿರಿ ಎಂದು ಹೇಳುವ ಮೂಲಕ ಅವರಿಗೆ ಧೈರ್ಯವನ್ನು ತುಂಬಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಜ್ಯೂಬಿಲಿ ವರ್ಷದ ಶೀರ್ಷಿಕೆಯ ಕುರಿತು ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು ಯಾತ್ರಿಕರಿಗೆ "ಭರವಸೆಯ ಯಾತ್ರಿಕರಾಗಿರಲು" ಉತ್ತೇಜಿಸಿದರು ಹಾಗೂ ತಪ್ಪದೇ ಸಂತ ಪೌಲರು ಹಾಗೂ ಸಂತ ಪೇತ್ರರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಪ್ರಾರ್ಥಿಸುವಂತೆ ಕರೆ ನೀಡಿದರು.

ಶುಭಸಂದೇಶವನ್ನು  ಸಾರುವುದು ಎಲ್ಲಕ್ಕಿಂತ ಮಿಗಿಲಾದ ಮಹಾನ್ ಕಾರ್ಯ ಎಂದು ಹೇಳಿದ ಪೋಪ್ ಫ್ರಾನ್ಸಿಸ್ ಅವರು ಯಾತ್ರಿಕರಿಗೆ ಪ್ರಭುವಿನ ಶುಭ ಸಂದೇಶವನ್ನು ನಿರ್ಗತಿಕರಿಗೆ, ಬಡವರಿಗೆ ಹಾಗೂ ಶೋಷಿತರಿಗೆ ಸಾರುವಂತೆ ಹೇಳಿದರು. ಮುಂದುವರೆದು ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು "ಪ್ರಭುವಿನ ರಕ್ಷಣಾ ಮಾರ್ಗದಲ್ಲಿ ಮುನ್ನಡೆಯುವಂತೆ' ಅವರಿಗೆ ಕರೆ ನೀಡಿದರು.

ಈ ಗುಂಪಿನಲ್ಲಿದ್ದ ಯುವ ಯಾತ್ರಿಕರ ಕುರಿತು ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು ಮುಂಬರುವ ಏಪ್ರಿಲ್ ತಿಂಗಳಲ್ಲಿ ಸಂತ ಪದವಿಗೇರುತ್ತಿರುವ ಪುನೀತ ಕಾರ್ಲೋ ಅಕ್ಯೂಟಿಸ್ ಅವರ ಕುರಿತು ಹೇಳಿದರು. ಇಂದಿನ ಆಧುನಿಕ ಕಾಲದಲ್ಲಿಯೂ ಯೇಸುವನ್ನು ಹಿಂಬಾಲಿಸುವುದು ಸಾಧ್ಯವಾಗಿದೆ. ನಾವೆಲ್ಲರೂ ಕಾರ್ಲೋ ಅಕ್ಯುಟಿಸ್ ಅವರ ಮಾದರಿಯನ್ನು ಅನುಸರಿಸ ಬೇಕು ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದರು. 

03 ಫೆಬ್ರವರಿ 2025, 16:52