ಮಾರ್ಚ್ 6 ರಂದು ರೋಮ್ ಧರ್ಮಕ್ಷೇತ್ರದ ಗುರುಗಳನ್ನು ಭೇಟಿ ಮಾಡಲಿರುವ ಪೋಪ್ ಫ್ರಾನ್ಸಿಸ್
ಪೋಪ್ ಫ್ರಾನ್ಸಿಸ್ ಅವರು ವಾಡಿಕೆಯಂತೆ ತಪಸ್ಸುಕಾಲದ ಮೊದಲನೇ ಗುರುವಾರದಂದು ರೋಮ್ ಧರ್ಮಪ್ರಾಂತ್ಯದ ಗುರುಗಳನ್ನು ಸೇಂಟ್ ಜಾನ್ ಲ್ಯಾಟರನ್ ಮಹಾದೇವಾಲಯದಲ್ಲಿ ಭೇಟಿ ಮಾಡಲಿದ್ದಾರೆ.
ವರದಿ: ವ್ಯಾಟಿಕನ್ ನ್ಯೂಸ್
ಪೋಪ್ ಫ್ರಾನ್ಸಿಸ್ ಅವರು ವಾಡಿಕೆಯಂತೆ ತಪಸ್ಸುಕಾಲದ ಮೊದಲನೇ ಗುರುವಾರದಂದು ರೋಮ್ ಧರ್ಮಪ್ರಾಂತ್ಯದ ಗುರುಗಳನ್ನು ಸೇಂಟ್ ಜಾನ್ ಲ್ಯಾಟರನ್ ಮಹಾದೇವಾಲಯದಲ್ಲಿ ಭೇಟಿ ಮಾಡಲಿದ್ದಾರೆ.
ಗುರುವಾರ ಮಾರ್ಚ್ 6, 2025 ರಂದು ರೋಮ್ ನಗರದ ಸಂತ ಜಾನ್ ಲ್ಯಾಟರನ್ ಮಹಾದೇವಾಲಯದಲ್ಲಿ ಪೋಪ್ ಫ್ರಾನ್ಸಿಸ್ ಅವರು ರೋಮ್ ಧರ್ಮಕ್ಷೇತ್ರದ ಯಾಜಕರನ್ನು ಭೇಟಿ ಮಾಡಲಿದ್ದಾರೆ ಎಂಬುದು ಖಚಿತವಾಗಿದೆ.
ಈ ಕುರಿತು ರೋಮ್ ಮಹಾಧರ್ಮಕ್ಷೇತ್ರವು ಪ್ರಕಟಣೆಯನ್ನು ಹೊರಡಿಸಿದ್ದು, ಸಂಪ್ರದಾಯ ಮುಂದುವರೆಯುತ್ತದೆ ಎಂದು ಹೇಳಿದೆ.
ಕಳೆದ ವರ್ಷ ಅಂದರೆ ಜನವರಿ 13, 2024 ರಂದು ಪೋಪ್ ಫ್ರಾನ್ಸಿಸ್ ಅವರು ರೋಮ್ ಧರ್ಮಕ್ಷೇತ್ರದ ಯಾಜಕರು, ಇಲ್ಲಿ ಪಾಲನಾ ಸೇವೆಯನ್ನು ಸಲ್ಲಿಸುತ್ತಿರುವ ಧಾರ್ಮಿಕ ಗುರುಗಳು, ಸೇವಾದರ್ಶಿಗಳು ಹಾಗೂ ಶಾಶ್ವತ ಸೇವಾದರ್ಶಿಗಳನ್ನು ಭೇಟಿ ಮಾಡಿದ್ದರು.
01 ಫೆಬ್ರವರಿ 2025, 14:20