MAP

ಪೋಪ್ ಫ್ರಾನ್ಸಿಸ್ ಅವರಿಗಾಗಿ ಪ್ರಾರ್ಥಿಸಲು ಸಂತ ಪೇತ್ರರ ಚೌಕಕ್ಕೆ ಆಗಮಿಸಿದ ನೂರಾರು ಭಕ್ತಾಧಿಗಳು

ಪೋಪ್ ಫ್ರಾನ್ಸಿಸ್ ಅವರು ಅನಾರೋಗ್ಯದ ನಿಮಿತ್ತ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿರುವ ಹಿನ್ನೆಲೆ ಅವರಿಗಾಗಿ ವಿಶೇಷ ಜಪಸರ ಪ್ರಾರ್ಥನೆಯನ್ನು ಸಂತ ಪೇತ್ರರ ಚೌಕದಲ್ಲಿ ಹಮ್ಮಿಕೊಳ್ಳಲಾಗಿತ್ತು. ಇದನ್ನು ವ್ಯಾಟಿಕನ್ನಿನ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೋ ಪರೋಲಿನ್ ಅವರು ಮುನ್ನಡೆಸಿದ್ದರು. ಈ ವೇಳೆ ಈ ಜಪಸರ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಲು ನೂರಾರು ಜನರು ಸಂತ ಪೇತ್ರರ ಚೌಕಕ್ಕೆ ಆಗಮಿಸಿದ್ದಾರೆ ಹಾಗೂ ಪೋಪ್ ಫ್ರಾನ್ಸಿಸ್ ಅವರು ಒಳ್ಳೆಯ ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಕಾರ್ಡಿನಲ್ಲುಗಳು, ಧರ್ಮಾಧ್ಯಕ್ಷರುಗಳು, ಗುರುಗಳು, ಸೇವಾದರ್ಶಿಗಳು, ಗುರು ಅಭ್ಯರ್ಥಿಗಳು, ಯುವ ಜನರು, ಮಧ್ಯ ವಯಸ್ಕರು, ಕುಟುಂಬಗಳು, ಮಕ್ಕಳೂ ಸೇರಿದಂತೆ ನೂರಾರು ಜನರು ಪೋಪ್ ಫ್ರಾನ್ಸಿಸ್ ಅವರು ಶೀಘ್ರವಾಗಿ ಗುಣಮುಖರಾಗಲು ಪ್ರಾರ್ಥನೆಯನ್ನು ಸಲ್ಲಿಸಿದ್ದಾರೆ.

ರೋಮ್ ನಗರದಲ್ಲಿ ಮಧ್ಯಾಹ್ನ ಸುರಿದ ಮಳೆ ಹಾಗೂ ಸಾರಿಗೆ ಮುಷ್ಕರದ ಹೊರತಾಗಿಯೂ ನೂರಾರು ಜನರು ಸಂತ ಪೇತ್ರರ ಚೌಕಕ್ಕೆ ಜಪಸರಗಳೊಂದಿಗೆ ಆಗಮಿಸಿದರು. ಕಾರ್ಡಿನಲ್ ಪರೋಲಿನ್ ಅವರು ಆರಂಭದ ಮುನ್ನುಡಿಯಲ್ಲಿ ಪೋಪ್ ಫ್ರಾನ್ಸಿಸ್ ಅವರು ಉತ್ತಮ ಆರೋಗ್ಯವನ್ನು ಮರಳಿ ಪಡೆಯುವಂತೆ ಪ್ರಾರ್ಥಿಸಿರಿ ಎಂದು ಎಲ್ಲಾ ಭಕ್ತಾಧಿಗಳಿಗೆ ಕರೆ ನೀಡಿದರು.

ಇದಲ್ಲದೆ ವಿಶ್ವದ ವಿವಿಧ ಮೂಲೆಗಳಿಂದ ಪೋಪ್ ಫ್ರಾನ್ಸಿಸ್ ಅವರು ಶೀಘ್ರವೇ ಗುಣಮುಖರಾಗಲಿ ಎಂದು ಪ್ರಾರ್ಥನೆಗಳು ಹಾಗೂ ಬಲಿಪೂಜೆಗಳನ್ನು ಅರ್ಪಿಸಲಾಗುತ್ತಿದೆ. ಲಕ್ಷಾಂತರ ಜನರು ಪೋಪ್ ಫ್ರಾನ್ಸಿಸ್ ಅವರು ಉತ್ತಮ ಆರೋಗ್ಯವನ್ನು ಹೊಂದಿ ಮರಳಲಿ ಎಂದು ಪ್ರಾರ್ಥಿಸುತ್ತಿದ್ದಾರೆ.     

25 ಫೆಬ್ರವರಿ 2025, 16:53